ಅಯೋಧ್ಯೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ 25 ರಾಮಸ್ತಂಭ ನಿರ್ಮಾಣ

ಅಯೋಧ್ಯೆಯಲ್ಲಿ ಸ್ಥಾಪಿಸಲಾಗುವ ಸ್ತಂಭಗಳು 20 ಅಡಿ ಎತ್ತರ ಮತ್ತು 5 ಅಡಿ ಅಗಲ ಇರಲಿವೆ. ಇವು ನಗರದ ಶ್ರೀಮಂತ ಪರಂಪರೆ, ಸಾಂಸ್ಕೃತಿಕ, ಆಧ್ಯಾತ್ಮಿಕ, ಮತ್ತು ಐತಿಹಾಸಿಕ ಪರಂಪರೆಯ ಸಾರದ ಹೆಗ್ಗುರುತುಗಳಾಗಲಿವೆ.

25 ram stambhs on 17km main road to reflect ayodhya s legacy ash

ಅಯೋಧ್ಯೆ (ಜುಲೈ 17, 2023): ಮುಂದಿನ ವರ್ಷ ಅಯೋಧ್ಯೆ ರಾಮಮಂದಿರ ನಿರ್ಮಾಣ ಪೂರ್ಣಗೊಳ್ಳುವ ಮುನ್ನವೇ ನಯಾಘಾಟ್‌ನಲ್ಲಿರುವ ಸಹಾದತ್‌ಗಂಜ್‌ ಮತ್ತು ಲತಾ ಮಂಗೇಶ್ಕರ್‌ ಚೌಕ್‌ ನಡುವಿನ 17 ಕಿ.ಮೀ ಉದ್ದದ ರಸ್ತೆಯಲ್ಲಿ 2.10 ಕೋಟಿ ರೂ. ವೆಚ್ಚದಲ್ಲಿ 25 ರಾಮಸ್ತಂಭಗಳನ್ನು ಸ್ಥಾಪಿಸಲಾಗುವುದು ಎಂದು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.

ಅಯೋಧ್ಯೆ ರಾಮ ಮಂದಿರದ ಹಿಂದಿನ ಸೂತ್ರಧಾರರು ಇವರೇ: ಮಂದಿರ ನಿರ್ಮಾಣದ ಹಿಂದಿನ ಕತೆ ಹೀಗಿದೆ..

ಈ ಬಗ್ಗೆ ಮಾತನಾಡಿದ ಪ್ರಾಧಿಕಾರದ ಉಪಾಧ್ಯಕ್ಷ ವಿಶಾಲ್‌ ಸಿಂಗ್‌, ‘ಅಯೋಧ್ಯೆಯಲ್ಲಿ ಸ್ಥಾಪಿಸಲಾಗುವ ಸ್ತಂಭಗಳು 20 ಅಡಿ ಎತ್ತರ ಮತ್ತು 5 ಅಡಿ ಅಗಲ ಇರಲಿವೆ. ಇವು ದೇಶಾದ್ಯಂತ ಪ್ರಸಿದ್ಧ ದೇವಾಲಯಗಳ ಗೋಡೆಗಳ ಮೇಲಿರುವ ಸಂಕೀರ್ಣ ಕೆತ್ತನೆಯ ವಿನ್ಯಾಸಗಳನ್ನು ಹೊಂದಿರುತ್ತವೆ. ಅಲ್ಲದೇ ಅಯೋಧ್ಯೆ ನಗರದ ಶ್ರೀಮಂತ ಪರಂಪರೆ, ಸಾಂಸ್ಕೃತಿಕ, ಆಧ್ಯಾತ್ಮಿಕ, ಮತ್ತು ಐತಿಹಾಸಿಕ ಪರಂಪರೆಯ ಸಾರದ ಹೆಗ್ಗುರುತುಗಳಾಗಲಿವೆ. ಸ್ತಂಭ ವಿನ್ಯಾಸ ಅಂತಿಮಗೊಳಿಸಲಾಗಿದ್ದು ನಿರ್ಮಾಣಕ್ಕಾಗಿ ಪರಿಣಿತ ಏಜೆನ್ಸಿಯನ್ನು ಹುಡುಕಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
 

ಇದನ್ನು ಓದಿ: ಅಯೋಧ್ಯೆಯಲ್ಲಿ ಸೇನೆ, ಬಿಜೆಪಿ ಶಕ್ತಿಪ್ರದರ್ಶನ; ದ್ರೋಹಿಗಳನ್ನು ರಾಮ ಆಶೀರ್ವದಿಸಲ್ಲ: ಸಂಜಯ್ ರಾವುತ್‌ ಕಿಡಿ

Latest Videos
Follow Us:
Download App:
  • android
  • ios