ರಾಮಾಯಣ ನಾಟಕ ಮಾಡಿದ ವಿದ್ಯಾರ್ಥಿಗಳಿಗೆ ಭಾರಿ ದಂಡ ವಿಧಿಸಿದ ಬಾಂಬೆ ಐಐಟಿ
ಹಿಂದೂ ಧರ್ಮಗ್ರಂಥ ರಾಮಾಯಣದ ಬಗ್ಗೆ ಅವಹೇಳನಕಾರಿಯಾಗಿ ನಾಟಕ ಪ್ರದರ್ಶನ ಮಾಡಿದ್ದ ಬಾಂಬೆ ಐಐಟಿಯ ಪ್ರತಿ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿಯೂ ತಲಾ 1.2 ಲಕ್ಷದಂತೆ ದಂಡ ವಿಧಿಸಿದೆ.
ಮುಂಬೈ: ಹಿಂದೂ ಧರ್ಮಗ್ರಂಥ ರಾಮಾಯಣದ ಬಗ್ಗೆ ಅವಹೇಳನಕಾರಿಯಾಗಿ ನಾಟಕ ಪ್ರದರ್ಶನ ಮಾಡಿದ್ದ ಬಾಂಬೆ ಐಐಟಿಯ ಪ್ರತಿ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿಯೂ ತಲಾ 1.2 ಲಕ್ಷದಂತೆ ದಂಡ ವಿಧಿಸಿದೆ. ಇವರು ರಾಮಾಯಣವನ್ನು ಅಣಕು ಮಾಡುವಂತೆ ರಹೋವಣ್ ಎಂಬ ನಾಟಕವನ್ನು ಕಾಲೇಜು ಸಾಂಸ್ಕೃತಿಕ ಹಬ್ಬದಲ್ಲಿ ಪ್ರದರ್ಶನ ಮಾಡಿ ಹಿಂದೂ ಸಮುದಾಯದ ಭಾವನೆಗಳಿಗೆ ಅವಮಾನ ಮಾಡಿದ್ದರು. ಮಾರ್ಚ್ 31 ರಂದು ಈ ನಾಟಕ ಕಾರ್ಯಕ್ರಮ ನಡೆದಿದ್ದು, ಇದರ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಈ ದಂಡವೂ ಒಂದು ಸೆಮಿಸ್ಟರ್‌ನ ಶುಲ್ಕಕ್ಕೆ ಸಮಾನವಾಗಿದ್ದು, ಇದರ ಜೊತೆಗೆ ಈ ವಿದ್ಯಾರ್ಥಿಗಳನ್ನು ಜಿಮ್ಕಾನಾ ಪ್ರಶಸ್ತಿಗಳಿಗೆ ಪರಿಗಣಿಸಲಾಗುವುದಿಲ್ಲ, ಅದರ ಜೊತೆಗೆ ಅವರ ಜೂನಿಯರ್‌ಗಳಿಗೂ 40 ಸಾವಿರ ದಂಡ ವಿಧಿಸಲಾಗಿದ್ದು, ಹಾಸ್ಟೆಲ್ ಸೌಲಭ್ಯಗಳಿಂದಲೂ ಬ್ಯಾನ್ ಮಾಡಲಾಗಿದೆ. ಈ ನಾಟಕವನ್ನು ಹಲವು ಬೇರೆ ಬೇರೆ ಸೆಮಿಸ್ಟರ್‌ಗಳ ವಿದ್ಯಾರ್ಥಿಗಳು ಜೊತೆಯಾಗಿ ಸೇರಿ ಪ್ರದರ್ಶಿಸಿದರು. ಈ ನಾಟಕದ ಹಲವು ವೀಡಿಯೋಗಳು ವೈರಲ್ ಆಗಿತ್ತು. ಇದರಲ್ಲಿ ಬರುವ ಲಕ್ಷಣ ಹಾಗೂ ಸೀತೆಯ ನಡುವಿನ ಸಂವಹನ ಕೇಳಿ ವೀಕ್ಷಕರು ಬೊಬ್ಬೆ ಹೊಡೆಯುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿತ್ತು. ಇದರ ಜೊತೆಗೆ ಸೀತೆ ತನ್ನ ಅಪಹರಿಸಿದವನನ್ನು ಹಾಗೂ ಆತ ಕರೆದುಕೊಂಡು ಹೋಗಿ ತನ್ನನ್ನು ಕೂರಿಸಿದ ಸ್ಥಳವನ್ನು ಮೆಚ್ಚುವಂತೆ ಸಂಭಾಷಣೆ ಇತ್ತು.
ಬಾಂಬೆ ಐಐಟಿ ಪದವೀಧರ: ಕೀರ್ಲೋಸ್ಕರ್‌ನಲ್ಲಿ ಲಕ್ಷಗಟ್ಟಲೇ ಸಂಬಳದ ಕೆಲಸ ಬಿಟ್ಟು ಸನ್ಯಾಸಿಯಾಗಿದ್ದೇಕೆ?
ದೂರಿನ ಪ್ರಕಾರ, ರಹೋವಣದಲ್ಲಿ ರಾಮನನ್ನು ಕೆಟ್ಟದಾಗ ತೋರಿಸಲಾಗಿತ್ತು. ಇದರ ಜೊತೆಗೆ ಈ ನಾಟಕವೂ ಹಿಂದೂ ಸಂಸ್ಕೃತಿ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡುವಂತಿತ್ತು ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಐಐಟಿ ಬಾಂಬೆ ಈ ಬಗ್ಗೆ ತನಿಖೆಗೆ ಶಿಸ್ತು ಸಮಿತಿಯನ್ನು ರಚನೆ ಮಾಡಿತ್ತು. ನಾಟಕದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಸಹ ಈ ಸಭೆಯಲ್ಲಿ ಭಾಗವಹಿಸಿದ್ದರು. ತೀವ್ರ ಚರ್ಚೆಯ ನಂತರ ಸಮಿತಿಯೂ ದಂಡ ವಿಧಿಸಲು ಮುಂದಾಗಿತ್ತು.
7000 ಐಐಟಿ ಪದವೀಧರರಿಗೆ ಇನ್ನೂ ಉದ್ಯೋಗ ಆಫರ್ ಇಲ್ಲ!
ಆದರೆ ಈ ನಾಟಕ ಮಾಡಿದ ವಿದ್ಯಾರ್ಥಿಗಳಿಗೆ ಬೆಂಬಲಿಸಿದ ಕೆಲವರು ಇದು ಆದಿವಾಸಿ ಸಮುದಾಯದಲ್ಲಿರುವ ಸ್ತೀವಾದದ ನಿಲುವನ್ನು ಹೊಂದಿತ್ತು ಹಾಗೂ ಅದು ಎಲ್ಲರಿಂದಲೂ ಒಳ್ಳೆಯ ಸ್ಪಂದನೆಯನ್ನು ಗಳಿಸಿತ್ತು ಎಂದು ಹೇಳಿದ್ದಾರೆ. ಆದರೆ ಐಐಟಿ ಬಾಂಬೆ ಮಾತ್ರ ವಿದ್ಯಾರ್ಥಿಗಳಿಗೆ ವಿಧಿಸಿದ ಈ ದಂಡದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.