ಮುಸ್ಲಿಂ ಪುರುಷನ 3ನೇ ಮದುವೆ ನೋಂದಣಿಗೆ ಬಾಂಬೆ ಹೈಕೋರ್ಟ್ ಅಸ್ತು

ಮುಸ್ಲಿಂ ಪುರುಷರು ವೈಯುಕ್ತಿಕ ಕಾನೂನಿನಡಿಯಲ್ಲಿ ಏಕಕಾಲಕ್ಕೆ ನಾಲ್ಕು ಹೆಂಡತಿಯರನ್ನು ಹೊಂದಲು ಅರ್ಹರು. ಮುಸ್ಲಿಂ ಪುರುಷರ ಪ್ರಕರಣದಲ್ಲಿ ಮುಹಾರಾಷ್ಟ್ರ ಮ್ಯಾರೇಜ್ ಬ್ಯೂರೋಗಳ ನಿಯಂತ್ರಣ ಮತ್ತು ಮದುವೆ ನೋಂದಣಿ ಕಾಯ್ದೆಯಡಿಯಲ್ಲಿನ 1 ವಿವಾಹವನ್ನು ಮಾತ್ರ ನೋಂದಾಯಿಸುವ ಕಾನೂನನ್ನು ಒಪ್ಪಿಕೊಳ್ಳುವುದಕ್ಕೆ ಆಗದು ಎಂದ ಬಾಂಬೆ ಹೈಕೋರ್ಟ್.

Bombay High Court said that a Muslim man can have third marriage grg

ಮುಂಬೈ(ಅ.23):  ಮುಸ್ಲಿಮರ ವೈಯುಕ್ತಿಕ ಕಾನೂನು ಬಹು ವಿವಾಹಗಳಿಗೆ ಅನುಮತಿ ನೀಡುವುದರಿಂದ ಮುಸ್ಲಿಂ ಪುರುಷರು ಒಂದಕ್ಕಿಂತ ಹೆಚ್ಚಿನ ಮದುವೆಯಾದರೆ ಅದನ್ನು ನೋಂದಣಿ (4ನೇ ಮದುವೆಯವರೆಗೆ) ಮಾಡಿಕೊಳ್ಳಬ ಹುದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ. 

ವ್ಯಕ್ತಿಯೊಬ್ಬರು ಕಳೆದ ವರ್ಷ ಫೆಬ್ರವರಿಯಲ್ಲಿ ಅಲ್ಜೇರಿಯಾದ ಮಹಿಳೆಯೊಂದಿಗೆ ಮೂರನೇ ವಿವಾಹ ಆಗಿದ್ದರು. ಆದರೆ ಇದು ಪುರುಷನ 3ನೇ ವಿವಾಹ ಎಂದು ಮಹಾನಗರ ಪಾಲಿಕೆ ವಿವಾಹ ನೋಂದಣಾಧಿಕಾರಿಗಳು ನೋಂದಣಿಗೆ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ದಂಪತಿಗಳು ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, 'ಮುಸ್ಲಿಂ ಪುರುಷರು ವೈಯುಕ್ತಿಕ ಕಾನೂನಿನಡಿಯಲ್ಲಿ ಏಕಕಾಲಕ್ಕೆ ನಾಲ್ಕು ಹೆಂಡತಿಯರನ್ನು ಹೊಂದಲು ಅರ್ಹರು. ಮುಸ್ಲಿಂ ಪುರುಷರ ಪ್ರಕರಣದಲ್ಲಿ ಮುಹಾರಾಷ್ಟ್ರ ಮ್ಯಾರೇಜ್ ಬ್ಯೂರೋಗಳ ನಿಯಂತ್ರಣ ಮತ್ತು ಮದುವೆ ನೋಂದಣಿ ಕಾಯ್ದೆಯಡಿಯಲ್ಲಿನ 1 ವಿವಾಹವನ್ನು ಮಾತ್ರ ನೋಂದಾಯಿಸುವ ಕಾನೂನನ್ನು ಒಪ್ಪಿಕೊಳ್ಳುವುದಕ್ಕೆ ಆಗದು' ಎಂದಿತು.

ಫಸ್ಟ್ ಡೇಟ್‌ನಲ್ಲೇ ಅಪರಿಚಿತನ ಜೊತೆ ಹುಡುಗಿ ರೂಂಗೆ ತೆರಳಲ್ಲ, ಬಲಾತ್ಕಾರ ಆರೋಪ ಖುಲಾಸೆಗೊಳಿಸಿದ ಕೋರ್ಟ್!

ಬಹೈಚ್ ಕೋಮುಗಲಭೆ: ಬುಲ್ಲೋಜರ್ ಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆ 

ನವದೆಹಲಿ: ಉತ್ತರಪ್ರದೇಶದ ಬಹ್ಮಚ್‌ನ ಕೋಮು ಗಲಭೆಯಲ್ಲಿ ಭಾಗಿಯಾದವರ ಮನೆಗಳನ್ನು 'ಅಕ್ರಮ ಕಟ್ಟಡಗಳು' ಎಂಬ ಕಾರಣ ನೀಡಿ ಬುಲ್ಲೋಜರ್‌ನಿಂದ ಧ್ವಂಸಗೊಳಿಸುವ ಯೋಗಿ ಆದಿತ್ಯನಾಥ್ ಸರ್ಕಾರದ ಕ್ರಮಕ್ಕೆ ಸೋಮವಾರ ಸುಪ್ರೀಂ ಕೋರ್ಟ್ ತಡೆ ನೀಡಿದೆ. 'ಸುಪ್ರೀಂ ಕೋರ್ಟ್‌ ನಿರ್ದೇಶನಗಳನ್ನು ಉಲ್ಲಂಘಿ ಸುವ ಅಪಾಯವನ್ನು ಎದುರಿಸಲು ಬಯಸಿದರೆ ಅದು ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು (ಯುವರ್ ಚಾಯ್ಸ್)' ಎಂದು ಕೋರ್ಟ್ ಹೇಳಿದೆ ಹಾಗೂ ಬುಧವಾರ ಮತ್ತೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

Latest Videos
Follow Us:
Download App:
  • android
  • ios