Asianet Suvarna News Asianet Suvarna News

ಅಭಿವ್ಯಕ್ತಿ- ವಾಕ್ ಸ್ವಾತಂತ್ರ್ಯ ಯಾರಿಗೂ ಸಂಪೂರ್ಣ ಅಧಿಕಾರ ನೀಡುವುದಿಲ್ಲ; ಹೈಕೋರ್ಟ್!

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ನಿಂದಿಸಿದ ಮಹಿಳೆ ಸಲ್ಲಿಸಿದ ಬಂಧನ ವಿನಾಯ್ತಿ ಕೋರಿ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

Bombay High Court said freedom of speech and expression not an absolute right
Author
Bengaluru, First Published Sep 12, 2020, 7:42 PM IST

ಮುಂಬೈ(ಸೆ.12):  ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಸಮುದಾಯದ ಭಾವನೆಗಳಿಗೆ ಧಕ್ಕೆ ಬರುವ, ನಂಬಿಕೆಗಳಿಗೆ ಧಕ್ಕೆ ತರುವ, ಇತರರನ್ನು ನೋಯಿಸುವ ಕಾರ್ಯಗಳು ನಡೆಯುತ್ತಿತ್ತು. ಇದೀಗ ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಿಗೆ ಪೂರ್ಣ ಅಧಿಕಾರ ನೀಡುವುದಿಲ್ಲ ಎಂದಿದೆ.

ಸಮರ್ಪಕ ಚಿಕಿತ್ಸೆ ಸಿಗದೆ ಕೊರೋನಾ ಸೋಂಕಿತರ ಸಾವು: ತನಿಖೆಗೆ ಆದೇಶ.

ಅಭಿವ್ಯಕ್ತಿ ಸ್ವಾತಂತ್ರ್ಯವಿದೆ, ವಾಕ್ ಸ್ವಾತಂತ್ರ್ಯವಿದೆ ಎಂದು ನಿಯಮ ಮೀರುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಈ ನಿಯಮ ಪ್ರಸ್ತುತ ಸಂದರ್ಭದಲ್ಲಿ ಅತೀ ಮುಖ್ಯವಾಗಿದ್ದು, ವಿಶೇಷ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಮಹಿಳೆಯೊಬ್ಬರು ಸಾಮಾಜಿಕ ಜಾಲಾತಣದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ವಿರುದ್ಧ ನಿಂದನಾತ್ಮಕ ಪೋಸ್ಟ್ ಮಾಡಿದ್ದರು. 

ಪೋಸ್ಟ್ ಭಾರಿ ವಿವಾದ ಸೃಷ್ಟಿಸುತ್ತಿದ್ದಂತೆ ಬಂಧನ ಭೀತಿ ಎದಿರಿಸಿದ ಮಹಿಳೆ ಬಾಂಬೆ ಹೈಕೋರ್ಟ್‌ಗೆ ಬಂಧನದಿಂದ ವಿನಾಯ್ತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಹಾಗೂ ಎಂ.ಎಸ್ ಕಾರ್ನಿಕ್ ಸೇರಿದ ಪೀಠ ಕೆಲ ಮಹತ್ವದ ಆದೇಶ ನೀಡಿದೆ. ಅಭಿವ್ಯಕ್ತಿ ಸ್ವಾಂತ್ರ್ಯ ಹಾಗೂ ವಾಕ್ ಸ್ವಾತಂತ್ರ್ಯ ಯಾರಿಗೂ ಪರಮಾಧಿಕಾರ ನೀಡುವುದಿಲ್ಲ ಎಂದು ಸ್ಪ,ಷ್ಟಪಡಿಸಿದೆ. ಕಾನೂನು ಚೌಕಟ್ಟು ಮೀರುವಂತಿಲ್ಲ ಎಂದಿದೆ.

ವಿವಾದಾತ್ಮಕ ಪೋಸ್ಟ್ ಮಾಡಿರುವ ಮಹಿಳೆಯನ್ನು ಮುಂದಿನ 2 ವಾರಗಳ ತನಕ ಬಂಧಿಸುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ನೀಡಿದ ಮೌಖಿಕ ಭರವಸೆಯನ್ನು ನ್ಯಾಯಮೂರ್ತಿಗಳ ಪೀಠ ಸಮ್ಮತಿಸಿದೆ. ಸೆಪ್ಟೆಂಬರ್ 29 ರಂದು ಮುಂದಿನ ಹಂತದ ವಿಚಾರಣೆ ನಡೆಯಲಿದೆ.

Follow Us:
Download App:
  • android
  • ios