Asianet Suvarna News Asianet Suvarna News

ಇತರರ ಹಕ್ಕುಗಳನ್ನೇಕೆ ಅತಿಕ್ರಮಿಸಲು ಬಯಸುತ್ತೀರಿ? ಜೈನ್‌ ಮಂಡಳಿಗಳಿಗೆ ಪ್ರಶ್ನಿಸಿದ ಬಾಂಬೆ ಹೈಕೋರ್ಟ್‌!

ತಮ್ಮ ಅರ್ಜಿಯಲ್ಲಿ, ಮೂರು ಜೈನ ಧಾರ್ಮಿಕ ಟ್ರಸ್ಟ್‌ಗಳು ಮತ್ತು ಮುಂಬೈನ ನಿವಾಸಿಯೊಬ್ಬರು ಮಕ್ಕಳು ಸೇರಿದಂತೆ ತಮ್ಮ ಕುಟುಂಬಗಳು ಮಾಂಸ ಅಥವಾ ಇತರ ಸಂಬಂಧಿತ ಉತ್ಪನ್ನಗಳನ್ನು ಸೇವಿಸುವಂತೆ ಒತ್ತಾಯಿಸಿದ್ದಾರೆ ಎಂದು ಹೇಳಿದ್ದರು. ಇದು ಶಾಂತಿಯಿಂದ ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಅವರ ಮಕ್ಕಳ ಮನಸ್ಸಿನಲ್ಲಿ ವಿರೂಪಗಳನ್ನು ಸೃಷ್ಟಿಸುತ್ತದೆ ಎಂದು ಅರ್ಜಿದಾರರು ವಾದ ಮಾಡಿದ್ದರು.
 

Bombay High Court Asks Jain Bodies Why Are You Seeking To Encroach On Others Rights san
Author
First Published Sep 26, 2022, 5:52 PM IST

ಮುಂಬೈ (ಸೆ. 26): ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಮಾಂಸ ಮತ್ತು ಮಾಂಸ ಉತ್ಪನ್ನಗಳ ಜಾಹೀರಾತುಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಿತು. ಪ್ರಕರಣದ ವಿಚಾರಣೆ ವೇಳೆ ಮೂರು ಜೈನ ಧಾರ್ಮಿಕ ಟ್ರಸ್ಟ್‌ಗಳು ಮತ್ತು ಜೈನ ಧರ್ಮದ ಅನುಯಾಯಿಯೊಬ್ಬರನ್ನು ಪ್ರಶ್ನಿಸಿದ ಪೀಠ, ಇಂತಹ ಬೇಡಿಕೆಯನ್ನು ಮುಂದಿಡುವ ಮೂಲಕ ಇತರರ ಹಕ್ಕುಗಳನ್ನು ಏಕೆ ಉಲ್ಲಂಘಿಸಲು ಪ್ರಯತ್ನಿಸುತ್ತಿದ್ದೀರಿ? ಎಂದಿತು.  ಮೂರು ಜೈನ ಧಾರ್ಮಿಕ ಟ್ರಸ್ಟ್‌ಗಳು ಮತ್ತು ಮುಂಬೈನ ನಿವಾಸಿಯೊಬ್ಬರು ತಮ್ಮ ಅರ್ಜಿಯಲ್ಲಿ ಮಕ್ಕಳು ಸೇರಿದಂತೆ ತಮ್ಮ ಕುಟುಂಬಗಳು ಮಾಂಸ ಅಥವಾ ಇತರ ಸಂಬಂಧಿತ ಉತ್ಪನ್ನಗಳನ್ನು ಸೇವಿಸುವಂತೆ ಒತ್ತಾಯಿಸಿದ್ದಾರೆ ಎಂದು ಹೇಳಿದ್ದಾರೆ. ಇದು ಶಾಂತಿಯಿಂದ ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಅವರ ಮಕ್ಕಳ ಮನಸ್ಸಿನಲ್ಲಿ ವಿರೂಪಗಳನ್ನು ಸೃಷ್ಟಿಸುತ್ತದೆ ಎಂದು ಅರ್ಜಿದಾರರು ವಾದಿಸಿದರು. ಅರ್ಜಿದಾರರು ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ರಾಜ್ಯ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಆಹಾರ ಇಲಾಖೆ, ನಾಗರಿಕ ಸರಬರಾಜು ಮತ್ತು ಗ್ರಾಹಕ ರಕ್ಷಣೆ ಮತ್ತು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿಯಿಂದ ಪರಿಹಾರವನ್ನು ಕೋರಿದ್ದರು. ಅವರು ಡೆಲಿಶಿಯಸ್, ಫ್ರೆಶ್‌ ಟು ಹೋಮ್‌ ಫುಡ್ಸ್ ಮತ್ತು ಮೀಟಿಗೊ ಕಂಪನಿಗಳನ್ನು ಪ್ರತಿವಾದಿಗಳಾಗಿ ಹೆಸರಿಸಿದ್ದರು.

ಮಾಧ್ಯಮಗಳಲ್ಲಿ ಮಾಂಸಾಹಾರಿ ಆಹಾರ ಪದಾರ್ಥಗಳ ಜಾಹೀರಾತುಗಳನ್ನು ನಿಷೇಧಿಸಲು ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಹೊರಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಕೋರಿದ್ದರು. ಅಂತಹ ಜಾಹೀರಾತುಗಳು ಸಸ್ಯಾಹಾರಿ ಎಂದು ನಂಬುವವರಿಗೆ ಕಿರುಕುಳ ನೀಡುವುದಲ್ಲದೆ, ಅವರ ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅವರು ಹೇಳಿದ್ದಾರೆ. 'ಶೋಷಣೆ ಮುಕ್ತವಾಗಿ ಮಾನವ ಘನತೆಯಿಂದ ಬದುಕುವುದು ಈ ದೇಶದ ಪ್ರತಿಯೊಬ್ಬರ ಮೂಲಭೂತ ಹಕ್ಕು (fundamental right)' ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. 

ಇಂತಹ ಜಾಹೀರಾತುಗಳು ಮಕ್ಕಳ ಮತ್ತು ಯುವಕರ ಮನಸ್ಸಿನ ಶೋಷಣೆ, ಮಾಂಸಾಹಾರಿ ಆಹಾರ ಪದಾರ್ಥಗಳನ್ನು ಸೇವಿಸುವಂತೆ ಪ್ರಚೋದಿಸುತ್ತವೆ. ಸರ್ಕಾರ ಈಗಾಗಲೇ ಮದ್ಯ, ಸಿಗರೇಟಿನ ಜಾಹೀರಾತನ್ನು ನಿಷೇಧಿಸಿದ್ದು, ಮದ್ಯ, ಸಿಗರೇಟಿನಂತೆ ಮಾಂಸಾಹಾರ ಸೇವನೆಯಿಂದ ಆರೋಗ್ಯದ ಜತೆಗೆ ಪರಿಸರಕ್ಕೂ ಹಾನಿಯಾಗುತ್ತಿದೆ ಎಂದರು. ಆದರೆ, ಇಂತಹ ಆಹಾರದ ಮಾರಾಟ ಅಥವಾ ಸೇವನೆಗೆ ನನ್ನ ವಿರೋಧವಿಲ್ಲ ಎಂದು ಅವರು ತಮ್ಮ ಅರ್ಜಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಅವರ ಮನವಿಯು ಅಂತಹ ವಸ್ತುಗಳ ಜಾಹೀರಾತುಗಳ (advertisements ) ವಿರುದ್ಧ ಮಾತ್ರ ಎಂದು ಹೇಳಲಾಗಿದೆ.

ಟಿವಿ, ಪತ್ರಿಕೆಯಲ್ಲಿ ಮಾಂಸಾಹಾರ ಜಾಹೀರಾತು ನಿಷೇಧಿಸಿ, ಹೈಕೋರ್ಟ್‌ಗೆ ಸಲ್ಲಿಕೆಯಾಯ್ತು PIL!

ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ (Chief Justice Dipankar Dutta) ಮತ್ತು ಹೈಕೋರ್ಟ್‌ನ ನ್ಯಾಯಮೂರ್ತಿ ಮಾಧವ್ ಜಾಮ್ದಾರ್ (Justice Madhav Jamdar) ಅವರ ವಿಭಾಗೀಯ ಪೀಠವು (Bombay High Court) ಈ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ದತ್ತಾ, ನೀವು ನಮ್ಮ ಸಂವಿಧಾನದ ಪೀಠಿಕೆಯನ್ನು ಓದಿದ್ದೀರಾ ಎಂದು ಅರ್ಜಿದಾರರ ಪರ ವಕೀಲರನ್ನು ಕೇಳಿದರು. ಇದರಲ್ಲಿ ದೇಶದ ನಾಗರಿಕರಿಗೆ ಕೆಲವು ಭರವಸೆಗಳನ್ನು ನೀಡಲಾಗಿದೆ. ಅವರ ಬೇಡಿಕೆಯು ಸಂವಿಧಾನದ 19 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಅವರು ಹೇಳಿದರು. ಅರ್ಜಿಯ ಕುರಿತು ಆದೇಶ ಹೊರಡಿಸುವ ಅಧಿಕಾರ ಕೋರ್ಟ್‌ಗೆ ಇಲ್ಲ ಎಂದು (Jain bodies) ತಿಳಿಸಿದರು.

ಮಗಳ ನಿಶ್ಚಿತಾರ್ಥದ ಊಟಕ್ಕೆಂದು ಮನೆಯಲ್ಲಿ ಸಾಕಿದ್ದ ಹಸುವನ್ನೇ ಕಡಿದರು!

ಯಾವುದನ್ನಾದರೂ ನಿಷೇಧಿಸಲು ನಿಯಮಗಳು, ಕಾನೂನುಗಳು ಅಥವಾ ಮಾರ್ಗಸೂಚಿಗಳನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ನೀವು ಹೈಕೋರ್ಟ್‌ಗೆ ಕೇಳುತ್ತಿದ್ದೀರಿ ಎಂದು ನ್ಯಾಯಾಲಯ ಹೇಳಿದೆ. ಇದು ಶಾಸಕಾಂಗ ಕ್ರಮವಾಗಿದೆ. ಇದನ್ನು ಶಾಸಕಾಂಗ ಮಾಡಬೇಕೇ ಹೊರತು ನಾವಲ್ಲ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರ ವಿಭಾಗೀಯ ಪೀಠವು ಅಂತಹ ಜಾಹೀರಾತುಗಳು ಬಂದಾಗ ಸಾಮಾನ್ಯ ವ್ಯಕ್ತಿಗೆ ದೂರದರ್ಶನ ಸ್ವಿಚ್ ಆಫ್ ಮಾಡಲು ಅವಕಾಶವಿದೆ, ಆದರೆ ನ್ಯಾಯಾಲಯವು ಕಾನೂನಿನ ದೃಷ್ಟಿಕೋನದಿಂದ ಸಮಸ್ಯೆಯನ್ನು ನೋಡಬೇಕು ಎಂದು ಹೇಳಿದರು. ಈ ಕುರಿತು ಅರ್ಜಿದಾರರು ಅರ್ಜಿಯಲ್ಲಿ ತಿದ್ದುಪಡಿ ಕೋರಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಹಿಂಪಡೆದು ಹೊಸದಾಗಿ ಅರ್ಜಿ ಸಲ್ಲಿಸುವಂತೆ ಪೀಠ ಸೂಚಿಸಿದೆ.
 

Follow Us:
Download App:
  • android
  • ios