* ಭಾರತದ ಅತಿ ದೊಡ್ಡ ನೌಕಾನಲೆಯಾದ ಕೊಚ್ಚಿ ನೌಕಾನೆಲೆ* ಕೊಚ್ಚಿ ನೌಕಾನೆಲೆಯನ್ನು ಸ್ಫೋಟಿಸುವುದಾಗಿ ಬೆದೆರಿಕೆ ಇರುವ ಅನಾಮಧೇಯ ಇ-ಮೇಲ್‌ 

ಕೊಚ್ಚಿ(ಸೆ.07): ಭಾರತದ ಅತಿ ದೊಡ್ಡ ನೌಕಾನಲೆಯಾದ ಕೊಚ್ಚಿ ನೌಕಾನೆಲೆಯನ್ನು ಸ್ಫೋಟಿಸುವುದಾಗಿ ಬೆದೆರಿಕೆ ಇರುವ ಅನಾಮಧೇಯ ಇ-ಮೇಲ್‌ ಒಂದನ್ನು ನೌಕಾನೆಲೆಗೆ ಸೋಮವಾರ ಕಳುಹಿಸಲಾಗಿದೆ.

ಸ್ವದೇಶಿ ನಿರ್ಮಿತ ವಿಮಾನ ಹೊತ್ತೊಯ್ಯಬಲ್ಲ ಐಎನ್‌ಎಸ್‌ ವಿಕ್ರಾಂತ್‌ ಯುದ್ಧನೌಕೆಯನ್ನು ಕೊಚ್ಚಿ ನೌಕಾನೆಲೆಯಲ್ಲಿ ನೆಲೆಗೊಳಿಸಲಾಗಿದೆ. ಈ ಕಾರಣ, ಈ ಬೆದ​ರಿ​ಕೆಗೆ ಮಹತ್ವ ಬಂದಿ​ದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಕೊಚ್ಚಿ ಪೊಲೀಸರು ತಿಳಿಸಿದ್ದಾರೆ.

ಕೊಚ್ಚಿ​ಯ​ಲ್ಲಿ​ರುವ ಐಎನ್‌ಎಸ್‌ ವಿಕ್ರಾಂತ್‌ ನೌಕೆಯನ್ನು ಭಾರತೀಯ ನೌಕಾ ವಿನ್ಯಾಸ ನಿರ್ದೇಶನಾಲಯ (ಡಿಎನ್‌ಡಿ) ನಿರ್ಮಾಣ ಮಾಡಿದೆ. ಇದು 30ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಸ್ವದೇಶಿ ನಿರ್ಮಿತ ಮೊದಲ ನೌಕೆಯಾಗಿದೆ.