ಬಲೂಚಿಸ್ತಾನದ ಕ್ವೆಟ್ಟಾದಲ್ಲಿ ಪಾಕಿಸ್ತಾನ ಸೇನೆಯ ನೆಲೆಗಳ ಮೇಲೆ ದಾಳಿಗಳು ನಡೆದಿದ್ದು, ಕರಾಚಿಯಲ್ಲಿ ಸ್ಫೋಟಗಳು ಸಂಭವಿಸಿವೆ. ಈ ದಾಳಿಗಳ ಹಿಂದೆ ಬಲೂಚ್ ಲಿಬರೇಶನ್ ಆರ್ಮಿ ಇರಬಹುದು ಎಂದು ಶಂಕಿಸಲಾಗಿದ್ದು, ಪಾಕ್ ಸೇನೆಗೆ ಭಾರೀ ಹಾನಿಯಾಗಿದೆ.

ದೆಹಲಿ (ಮೇ.9): ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಲ್ಲಿ ಪಾಕಿಸ್ತಾನ ಸೇನೆಯ ಪ್ರಮುಖ ನೆಲೆಗಳ ಮೇಲೆ ತೀವ್ರ ದಾಳಿಗಳು ನಡೆದಿವೆ. ಪಾಕಿಸ್ತಾನದ ಫ್ರಂಟಿಯರ್ ಕಾರ್ಪ್ಸ್‌ನ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡ ಬಂದೂಕುಧಾರಿಗಳು ಗುಂಡಿನ ಚಕಮಕಿಯಲ್ಲಿ ತೊಡಗಿದ್ದು, ಇದರ ಬೆನ್ನಿಗೆ ಸರಣಿ ಸ್ಫೋಟಗಳು ಸಂಭವಿಸಿವೆ. ಈ ದಾಳಿಗಳ ಹಿಂದೆ ಬಲೂಚ್ ಲಿಬರೇಶನ್ ಆರ್ಮಿ (BLA) ಇರಬಹುದು ಎಂದು ಶಂಕಿಸಲಾಗಿದ್ದು, ಘಟನೆಯಿಂದ ಪಾಕ್ ಸೇನೆಗೆ ಭಾರೀ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಕರಾಚಿಯಲ್ಲಿ ಸ್ಫೋಟಗಳು:
ಜಮ್ಮು ಕಾಶ್ಮೀರದ ಮೇಲೆ ಪಾಕಿಸ್ತಾನ ನಾಗರಿಕರ ಮೇಲೆ ಶೆಲ್ ದಾಳಿ ನಡೆಸಿತು ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಕರಾಚಿ ಬಂದರಿನಲ್ಲಿ 8 ರಿಂದ 12 ಸ್ಫೋಟಗಳು ಸಂಭವಿಸಿವೆ. ಈ ಘಟನೆಯಿಂದಾಗಿ ಕರಾಚಿಯಲ್ಲಿ ವಿದ್ಯುತ್ ವ್ಯತ್ಯಯವನ್ನು ವಿಧಿಸಲಾಗಿದ್ದು, ಮೊಬೈಲ್ ಸಿಗ್ನಲ್‌ಗಳನ್ನು ಕೂಡ ಜಾಮ್ ಮಾಡಲಾಗಿದೆ. 

ಇದನ್ನೂ ಓದಿ: ಪಶ್ಚಿಮ ಭಾರತದ ಹಲವು ಏರ್‌ಪೋರ್ಟ್‌ ಬಂದ್; 8000 ಪಾಕ್ ಖಾತೆ ಮೇಲೆ ಡಿಜಿಟಲ್ ಸ್ಟ್ರೈಕ್!

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಪಾಕ್-ಪ್ರಾಯೋಜಿತ ಉಗ್ರಗಾಮಿ ಗುಂಪುಗಳ ವಿರುದ್ಧ ತೀವ್ರ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಒಂದೆಡೆ ಭಾರತದ ಸೇನಾ ಕಾರ್ಯಾಚರಣೆಗಳಿಂದ ಒತ್ತಡಕ್ಕೆ ಸಿಲುಕಿರುವ ಪಾಕಿಸ್ತಾನ, ಮತ್ತೊಂದೆಡೆ ಬಲೂಚಿಸ್ತಾನದಲ್ಲಿ ಲಿಬರೇಷನ್ ಅರ್ಮಿಯಿಂದ ತೀವ್ರ ಸವಾಲು ಎದುರಿಸುತ್ತಿದೆ. ಕ್ವೆಟ್ಟಾದ ದಾಳಿಗಳು ಮತ್ತು ಕರಾಚಿಯ ಸ್ಫೋಟಗಳು ಪಾಕಿಸ್ತಾನದ ಆಂತರಿಕ ದೌರ್ಬಲ್ಯವನ್ನು ಮತ್ತಷ್ಟು ಬಯಲಿಗೆಳೆದಿವೆ.

ಇದನ್ನೂ ಓದಿ: ಉಗ್ರ ಹಫೀಸ್ ಸಯೀದ್ ಮನೆ ಟಾರ್ಗೆಟ್; ಲಾಹೋರ್ ಮೇಲೆ ಭಾರತೀಯ ಸೇನೆ ಡ್ರೋನ್ ಅಟ್ಯಾಕ್!

ಈ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಸಮುದಾಯವು ಎಚ್ಚರಿಕೆಯಿಂದ ಪರಿಶೀಲಿಸುತ್ತಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಉಗ್ರರ ವಿರುದ್ಧದ ಹೋರಾಟದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಅಮೆರಿಕಾದ ಎನ್‌ಎಸ್‌ಎ ಮಾರ್ಕೊ ರುಬಿಯೊ ಜೊತೆಗೆ ಆಪರೇಷನ್ ಸಿಂಧೂರ್ ಬಗ್ಗೆ ಚರ್ಚಿಸಿದ್ದಾರೆ.