Asianet Suvarna News Asianet Suvarna News

ಕೇಜ್ರಿವಾಲ್ ಜತೆ ಸೋನು ಸೂದ್.. ದೆಹಲಿ ಸರ್ಕಾರದ ಯೋಜನೆಯೊಂದರ ರಾಯಭಾರಿ

* ದೆಹಲಿ ಸರ್ಕಾರದ ಯೋಜನೆಯೊಂದರ ರಾಯಭಾರಿಯಾದ ಸೋನು ಸೂದ್
* ಕೊರೋನಾ ಸಂಕಷ್ಟದ ಕಾಲದಲ್ಲಿ ಕಾರ್ಮಿಕರೊಂದಿಗೆ ನಿಂತಿದ್ದರು
* ಮಕ್ಕಳಿಗೆ ಶಿಕ್ಷಣದ ಮಾರ್ಗದರ್ಶನ ನೀಡುವ ಯೋಜನೆ

Bollywood Actor Sonu Sood Chosen for Delhi Govt s Children Programme ambassador mah
Author
Bengaluru, First Published Aug 27, 2021, 6:10 PM IST
  • Facebook
  • Twitter
  • Whatsapp

ನವದೆಹಲಿ(ಆ. 27)  ಕೊರೋನಾ ಸಂಕಷ್ಟಡದ ಕಾಲದಲ್ಲಿ ವಲಸೆ ಕಾರ್ಮಿಕರ ನೆರವಿಗೆ ನಿಂತಿದ್ದ ಬಾಲಿವುಡ್  ನಟ ಸೋನು ಸೂದ್ ದೆಹಲಿ ಸರ್ಕಾರದ ರಾಯಭಾರಿಯಾಗಿದ್ದಾರೆ.. ನಟ ಸೋನು ಸೂದ್ ಅವರು ದೆಹಲಿ ಎಎಪಿ ಸರ್ಕಾರದ 'ದೇಶ್ ಕಾ ಮೆಂಟರ್ಸ್' ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ.  

ಈ ವಿಶೇಷ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಆಯ್ಕೆಗಳನ್ನು ಮಾಡಲು ಮಾರ್ಗದರ್ಶನ ನೀಡಲಾಗುವುದು ಎಂದು ದೆಹಲಿ ಸಿಎಂ ಈ ಬಗ್ಗೆ ಅರವಿಂದ ಕೇಜ್ರಿವಾಲ್  ತಿಳಿಸಿದ್ದಾರೆ.

ತೀರಾ ಬಡತನದಿಂದ ಬಂದು ಶಿಕ್ಷಣಕ್ಕೆ ಸಂಬಂಧಿಸಿ ಸರಿಯಾದ ಮಾರ್ಗದರ್ಶನವಿಲ್ಲದೇ ಅನೇಕರು ಸಮಸ್ಯೆ ಎದುರಿಸುತ್ತಿರುತ್ತಾರೆ. ಅವರಿಗೆ ಮಾರ್ಗದರ್ಶನ ನೀಡುವ  ಯೋಜನೆಯ ರಾಯಭಾರಿಯಾಗಿ ಸೋನು ಸೂದ್ ಇರಲಿದ್ದಾರೆ.

ಹೇಗಿದ್ದ ಸೋನು ಸೂದ್ ಹೇಗಾದರು?

ಬಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ನಾವು ವಿದ್ಯಾವಂತ ಜನರಿಗೆ ಮನವಿ ಮಾಡಿಕೊಂಡಿದ್ದೇವೆ. ಇದಕ್ಕೆ ವಿದ್ಯಾವಂತ ಸಮುದಾಯದಿಂದ ಉತ್ತಮ ಸಹಕಾರ ದೊರೆತಿದೆ ಎಂದು ಸಿಎಂ ತಿಳಿಸಿದ್ದಾರೆ.

ಕೇಜ್ರಿವಾಲ್ ಮತ್ತು ಸೋನು ಸೂದ್ ಇಬ್ಬರೂ ಭೇಟಿಯಾದಾಗ ಯಾವುದೇ ರಾಜಕಾರಣದ ವಿಚಾರ ಚರ್ಚೆಯಾಗಿಲ್ಲ ಎನ್ನಲಾಗಿದೆ. ಇನ್ನೊಂದು ಕಡೆ ಸೋನು ಸೂದ್  ಪಂಜಾಬ್ ನ  ರಾಜಕಾರಣದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.  ದೆಹಲಿ ಸಿಎಂ ಮತ್ತು ಸೋನು ಸೂದ್ ಪತ್ರಿಕಾಗೋಷ್ಠಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು.

ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ 47 ವರ್ಷದ ನಟ ಅಥವಾ ಆತನ ಸಹೋದರಿ  ಕಾಂಗ್ರೆಸ್  ನಿಂದ ಸ್ಪರ್ಧಿಸಬಹುದು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.  ಸೋನು ಸೂದ್ ಸಹೋದರಿ ಮಾಳವಿಕಾ ಪಂಜಾಬ್ ಸಾಚಾರ್ ಮೊಗಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ ಕೇಳಿದ್ದಾರೆ ಎನ್ನಲಾಗಿತ್ತು. 

 

 

Follow Us:
Download App:
  • android
  • ios