ಮುಂಬೈನ ದೊಂಬಿವಿಲಿಯ ಕಾರ್ಖಾನೆಯೊಂದಲ್ಲಿ ನಾಲ್ಕು ಬಾಯ್ಲರ್‌ಗಳು ಸ್ಫೋಟಗೊಂಡಿವೆ. ಸ್ಫೋಟದಲ್ಲಿ 10 ರಿಂದ 15 ಕಾರ್ಮಿಕರು ಗಾಯಗೊಂಡಿದ್ದಾರೆ.
ಮುಂಬೈ: ವಾಣಿಜ್ಯ ನಗರಿ ಮುಂಬೈನ ದೊಂಬಿವಿಲಿಯ ಎಂಐಡಿಸಿ 2ನೇ ಹಂತದಲ್ಲಿರುವ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡಿದ್ದು, ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಫೋಟದಲ್ಲಿ 10 ರಿಂದ 15 ಕಾರ್ಮಿಕರು ಗಾಯಗೊಂಡಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಾಸಾಯನಿಕ ಕಾರ್ಖಾನೆಯಲ್ಲಿ ನಾಲ್ಕು ಬಾಯ್ಲರ್‌ಗಳು ಸ್ಪೋಟಗೊಂಡಿವೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಬಾಯ್ಲರ್ ಸ್ಪೋಟಕ್ಕೆ ಕಟ್ಟಡದ ಗಾಜುಗಳು ಪುಡಿ ಪುಡಿಯಾಗಿವೆ.
ಇಂದು ಅಂಬರ್ ಕೆಮಿಕಲ್ ಕಂಪನಿಯಲ್ಲಿನ (Amber Chemical Company) ನಾಲ್ಕು ಬಾಯ್ಲರ್‌ಗಳು ಸ್ಫೋಟಗೊಂಡಿದೆ. ಇದರಿಂದ ಕಾರ್ಖಾನೆಯಲ್ಲಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ ಎಂದು ತಿಳಿದು ಬಂದಿದೆ. ಬಾಯ್ಲರ್ ಸ್ಫೋಟಗೊಳ್ಳುತ್ತಿದ್ದಂತೆ ಕಾರ್ಖಾನೆಯ ಸುತ್ತಮುತ್ತಲಿನ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಸ್ಫೋಟ ನಡೆದ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದೆ. ಈ ಭೀಕರ ಸ್ಪೋಟಕಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯಾಚರಣೆ
ಕಾರ್ಖಾನೆಯಲ್ಲಿ ಬೆಂಕಿ ಪಕ್ಕದ ಹುಂಡೈ ಶೋರೂಮ್‌ಗೂ ವ್ಯಾಪಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡ ದೌಡಾಯಿಸಿದ್ದು ಬೆಂಕಿ ನಂದಿಸುವಲ್ಲಿ ನಿರತವಾಗಿವೆ. ಬೆಂಕಿಯ ತೀವ್ರತೆ ಹೆಚ್ಚಾದ ಹಿನ್ನೆಲೆ ಉಲ್ಲಾಸ್‌ನಗರ, ಅಂಬರನಾಥ್ ಮತ್ತು ಥಾಣೆಯಿಂದ ಅಗ್ನಿಶಾಮಕ ದಳದ ಘಟಕಗಳನ್ನು ಕರೆಸಲಾಗಿದೆ.
ಹಿಮದಲ್ಲಿ ಮುಳುಗೋ ಮೌಂಟ್ ಫ್ಯೂಜಿಗೆ ಜಪಾನ್ ನಿರ್ಬಂಧ ಹೇರಿರೋದು ಯಾಕೆ?
ಸ್ಥಳೀಯರಿಂದ ಕಾರ್ಮಿಕರ ರಕ್ಷಣೆ
ಕಾರ್ಖಾನೆಯ ಸುತ್ತಮುತ್ತ ಸ್ಪೋಟದ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮತ್ತೊಂದು ಕಡೆ ಸ್ಫೋಟ ಸಂಭವಿಸುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಕಾರ್ಖಾನೆಯಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣೆಗೆ ಧಾವಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಗಾಯಾಳು ಕಾರ್ಮಿಕರನ್ನು ತ್ವರಿತಗತಿಯಲ್ಲಿ ಆಸ್ಪತ್ರೆಗೆ ರವಾನಿಸಲಾಗಿದೆ.
52 ಗ್ರಾಮ್ ಕಡಿಮೆ ಬಿಸ್ಕೆಟ್ ತುಂಬಿದ್ದಕ್ಕೆ ಬ್ರಿಟಾನಿಯಾ ಕಂಪನಿಗೆ ಬಿತ್ತು ಭಾರಿ ದಂಡ!
ಬಾಯ್ಲರ್ ಸ್ಫೋಟದ ವಿಡಿಯೋಗಳು ವೈರಲ್
ಬಾಯ್ಲರ್ ಸ್ಫೋಟದಿಂದಾಗಿ ಸುತ್ತಲಿನ ಪ್ರದೇಶದಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ. ಕಾರ್ಖಾನೆಯ ಸುತ್ತಲಿನ ಕಟ್ಟಡಗಳಿಗೆ ಹಾನಿಯುಂಟಾಗಿದೆ ಎಂಬುದನ್ನ ಸಹ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಕಿ ಅವಘಡದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ
