ಉತ್ತರ ಪ್ರದೇಶದ ಕುಂಭಮೇಳದಲ್ಲಿ ದೋಣಿ ಮಾಲೀಕರ ಕುಟುಂಬವೊಂದು 45 ದಿನಗಳಲ್ಲಿ 30 ಕೋಟಿ ಆದಾಯ ಗಳಿಸಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಕುಂಭಮೇಳವು ಜಾತಿ, ಪಂಥ ಭೇದವಿಲ್ಲದೆ ನಡೆದಿದ್ದು, 60 ಕೋಟಿಗೂ ಅಧಿಕ ಜನರು ಭಾಗವಹಿಸಿದ್ದರು.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳವೂ ಹಲವರು ಬದುಕು ಬದಲಿಸಿರುವುದು ಗೊತ್ತೆ ಇದೆ. ಕುಂಭ ಮೇಳದಿಂದಾಗಿ ಅನೇಕರು ಹೊಸ ಜೀವನವನ್ನು ಕಂಡುಕೊಂಡಿದ್ದಾರೆ. ಕುಂಭಮೇಳದಲ್ಲಿ ಮಾಲೆ ಮಾರುತ್ತಿದ್ದ ಹುಡುಗಿ ಮೋನಾಲಿಸಾಳ ಬದುಕು ಬದಲಾಯಿಸಲಾಗದಷ್ಟು ಬದಲಾಗಿದೆ. ಅಲ್ಲಿನ ವ್ಯಾಪಾರಿಗಳಿಗೆ ಇಡೀ ವರ್ಷ ಆಗುವ ವ್ಯಾಪಾರ ಕೇವಲ ಈ 45 ದಿನಗಳಲ್ಲಿ ನಡೆದಿದೆ. ಹಾಗೆಯೇ ಹಲವರಿಗೆ ಭಾಗ್ಯದ ಬಾಗಿಲು ತೆರೆದ ಈ ಕುಂಭಮೇಳವೂ ದೋಣಿ ಮಾಲೀಕರ ಕುಟುಂಬವೊಂದಕ್ಕೆ ಕೋಟ್ಯಾಧಿಪತಿಯಾಗುವ ಭಾಗ್ಯವನ್ನು ಕರುಣಿಸಿದೆ. ಸ್ವತಃ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಈ ವಿಚಾರವನ್ನು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಹೇಳಿಕೊಂಡಿದ್ದಾರೆ. 

130 ಬೋಟುಗಳನ್ನು ಹೊಂದಿರುವ ಕುಟುಂಬವೊಂದು ಕುಂಭ ಮೇಳದ ನಡೆದ 45 ದಿನದ ಅವಧಿಯಲ್ಲಿ 30 ಕೋಟಿ ಆದಾಯ ಮಾಡಿದೆ ಎಂದು ಯೋಗಿ ಆದಿತ್ಯನಾಥ್ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ. ದೋಣಿ ನಾವಿಕರ ಕುಟುಂಬ ಹೆಚ್ಚು ಸಂಪಾದನೆ ಮಾಡಿಲ್ಲ ಹಾಗೂ ಗಂಗೆಯ ಸ್ವಚ್ಛತೆ ಕಾಪಾಡಿಲ್ಲ ಎನ್ನುತ್ತಿದ್ದ ವಿರೋಧ ಪಕ್ಷ ಸಮಾಜವಾದಿ ಪಾರ್ಟಿಯನ್ನು ಟೀಕಿಸಿದ ಸಿಎಂ ಯೋಗಿ ಆದಿತ್ಯನಾಥ್ ಅವರು ಕುಂಭಮೇಳದಲ್ಲಿ ಇದ್ದ ಸ್ವಚ್ಛತಾ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಗೌರವಿಸಿ ಮಾತನಾಡುತ್ತಾ ಈ ವಿಚಾರ ತಿಳಿಸಿದ್ದಾರೆ. 

ಕೋಮುವಾದಿ ಎಂದು ಕರೆದ ವಿರೋಧ ಪಕ್ಷದ ನಾಯಕಿಗೆ ತಿರುಗೇಟು

ಉತ್ತರ ಪ್ರದೇಶದ ವಿರೋಧ ಪಕ್ಷದ ನಾಯಕಿ ಮಾತಾ ಪ್ರಸಾದ್ ಪಾಂಡೆ ಅವರು ಮುಖ್ಯಮಂತ್ರಿ ಯೋಗೀಜಿ ಅವರನ್ನು ಕೋಮುವಾದಿ ಎಂದು ಕರೆದ ವಿಚಾರಕ್ಕೂ ಪ್ರತಿಕ್ರಿಯಿಸಿದ ಯೋಗಿ ಆದಿತ್ಯನಾಥ್‌, ತಮ್ಮ ನಂಬಿಕೆಗಳು ಮತ್ತು ಸರ್ಕಾರ ಎರಡನ್ನೂ ಸಮರ್ಥಿಸಿಕೊಂಡರು, ಸಮಾಜವಾದಿ ನಾಯಕ ರಾಮ ಮನೋಹರ್ ಲೋಹಿಯಾ ಅವರನ್ನು ಉಲ್ಲೇಖಿಸಿದ ಯೋಗಿ ಆದಿತ್ಯನಾಥ್‌, ಆದರ್ಶ ಪುರುಷ ಶ್ರೀರಾಮ, ಕೃಷ್ಣ ಮತ್ತು ಶಿವನ ಮಾರ್ಗದರ್ಶಿ ಆದರ್ಶಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು, ಇದು ರಾಷ್ಟ್ರದ ಶಕ್ತಿ ಮತ್ತು ಏಕತೆಯನ್ನು ಖಚಿತಪಡಿಸಿದೆ ಎಂದರು.

ಮಹಾಕುಂಭದ ಕೇಳರಿಯದ ಕಥೆಗಳು: ಜನಸಂದಣಿ, ಕಾಲ್ತುಳಿತ ಮತ್ತು ಅಭೂತಪೂರ್ವ ಯಶಸ್ಸಿನ ಕಥೆ

ಲೋಹಿಯಾ ಮೌಲ್ಯಗಳಿಂದ ಸಮಾಜವಾದಿ ಪಕ್ಷ ದೂರ

ಪ್ರಸ್ತುತ ಸಮಾಜವಾದಿ ಪಕ್ಷವು ರಾಮ್‌ ಮನೋಹರ್‌ ಲೋಹಿಯಾ ಅವರ ಮೌಲ್ಯಗಳಿಂದ ದೂರ ಸರಿದಿದೆ ಎಂದು ಆರೋಪಿಸಿದ ಯೋಗೀ, ಸಮಾಜವಾದಿ ಪಕ್ಷದ ಕ್ರಮಗಳು ದೇಶದ ಧಾರ್ಮಿಕ ಅಡಿಪಾಯವನ್ನು ಹಾಳುಮಾಡಿವೆ ಎಂದು ವಾದಿಸಿದರು. ನೀವು ಭಾರತದ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುತ್ತೀರಿ ಮತ್ತು ನಂತರ ನಮ್ಮ ಚಿಂತನೆಯನ್ನು ಕೋಮುವಾದಿ ಎಂದು ಕರೆಯುತ್ತೀರಿ. ಅದು ಹೇಗೆ ಕೋಮುವಾದಿಯಾಗಿದೆ? ಎಂದು ಆದಿತ್ಯನಾಥ್ ಕೇಳಿದರು. ನಾವು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯಲ್ಲಿ ನಂಬಿಕೆ ಇಡುತ್ತೇವೆ. ನಮ್ಮ ಮಾರ್ಗದರ್ಶಿ ತತ್ವವೆಂದರೆ 'ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯ' (ಎಲ್ಲರೂ ಸಂತೋಷವಾಗಿರಲಿ, ಎಲ್ಲರೂ ಅನಾರೋಗ್ಯದಿಂದ ಮುಕ್ತರಾಗಲಿ). ಎಂಬುದಾಗಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.

60 ಕೋಟಿಗೂ ಅಧಿಕ ಜನ ಭಾಗಿ

ಇತ್ತೀಚೆಗೆ ಮುಕ್ತಾಯಗೊಂಡ ಮಹಾ ಕುಂಭ ಮೇಳವು ಪ್ರಪಂಚದೆಲ್ಲೆಡೆ 100 ಕ್ಕೂ ಹೆಚ್ಚು ದೇಶಗಳ ಜನರನ್ನು ಆಕರ್ಷಿಸಿತು. ಇದು ಭಾರತದ ಸಮಗ್ರ ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ ಈ ಕಾರ್ಯಕ್ರಮವು ಯಾವುದೇ ಜಾತಿ, ಪಂಥ ಅಥವಾ ಧಾರ್ಮಿಕ ತಾರತಮ್ಯದಿಂದ ಮುಕ್ತವಾಗಿದೆ ಮತ್ತು ಭಾಗವಹಿಸುವವರು ಈ ಅನುಭವದಿಂದ ತೀವ್ರವಾಗಿ ಪ್ರಭಾವಿತರಾದರು ಎಂದು ಯೋಗಿ ಆದಿತ್ಯನಾಥ್ ಹೇಳಿದರು. 144 ವರ್ಷಗಳಿಗೊಮ್ಮೆ ನಡೆಯುವ ಈ ಮಹಾಕುಂಭ ಮೇಳವೂ ಈ ಬಾರಿ ಜನವರಿ 13ರಿಂದ ಆರಂಭವಾಗಿ ಫೆಬ್ರವರಿ 28ರ ಶಿವರಾತ್ರಿಯಂದು ಮುಕ್ತಾಯವಾಯ್ತು. ಸೆಲೆಬ್ರಿಟಿಗಳು ಶ್ರೀಮಂತರು ಬಡವರು ಎನ್ನದೇ ಸುಮಾರು 60 ಕೋಟಿಗೂ ಅಧಿಕ ಜನ ಈ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ್ದರು. 

10 ಸಾವಿರ ಕೋಟಿಯ ಕುಂಭಮೇಳದ ಆದಾಯವೆಷ್ಟು? ಬಿಕರಿಯಾದ ವಸ್ತುಗಳೆಷ್ಟು? ಅಬ್ಬಬ್ಬಾ ಎನ್ನುವ ಮಾಹಿತಿ ಇಲ್ಲಿದೆ...

ಇಲ್ಲಿದೆ ವೀಡಿಯೋ ನೋಡಿ

Scroll to load tweet…