ಮಹಿಳೆ ಮೇಲೆ BMW ಕಾರ್ ಹತ್ತಿಸಿ ಎಸ್ಕೇಪ್ ಆಗಿದ್ದ ಶಿವಸೇನೆ ನಾಯಕನ ಮಗ ಅರೆಸ್ಟ್
ಹಿಟ್ ಆಂಡ್ ರನ್ ಬಳಿಕ ನಾಪತ್ತೆಯಾಗಿದ್ದ ಶಿವಸೇನೆ ಪಕ್ಷದ ನಾಯಕನ ಮಗನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಶಹಪುರದಲ್ಲಿ ಆರೋಪಿಯ ಬಂಧನವಾಗಿದೆ.
ಮುಂಬೈ: ಮೀನುಗಾರ ಮಹಿಳೆ ಮೇಲೆ ಕಾರ್ ಹತ್ತಿಸಿ ಪರಾರಿಯಾಗಿದ್ದ ಶಿವಸೇನೆ ನಾಯಕ ರಾಜೇಶ್ ಶಾ ಪುತ್ರ ಮಿಹಿರ್ ಶಾನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಿಹಿರ್ ಶಾ ಮೂರು ದಿನಗಳಿಂದ ನಾಪತ್ತೆಯಾಗಿದ್ದನು. ಮಹಾರಾಷ್ಟ್ರದ ಶಹಪುರ ಎಂಬಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಬಿಎಂಡಬ್ಲ್ಯೂ ಕಾರ್ ನಲ್ಲಿ ಬಂದ ಮಿಹಿರ್, ಅನ್ನಿ ಬೆಸೆಂಟ್ ರಸ್ತೆಯಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದನು. ನಂತರ 100 ಮೀಟರ್ ವರೆಗೆ ಬೈಕ್‌ನ್ನು ಕಾರ್ ಎಳೆದುಕೊಂಡು ಹೋಗಿತ್ತು. ಬೈಕ್‌ನಲ್ಲಿದ್ದ ಮಹಿಳೆ 45 ವರ್ಷದ ಕಾವೇರಿ ನಖ್ವಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯ ಪತಿ ಪ್ರದೀಪ್ ಚಿಕಿತ್ಸೆ ಪಡೆದುಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಭಾನುವಾರ ಬೆಳಗಿನ ಜಾವ 5.30ರ ಸಂದರ್ಭದಲ್ಲಿ ಅಪಘಾತ ನಡೆದಿತ್ತು.
ಪ್ರದೀಪ್ ಮತ್ತು ಕಾವೇರಿ ದಂಪತಿ ವರ್ಲಿಯ ಕೋಳಿವಾಡ ಪ್ರದೇಶದಲ್ಲಿ ವಾಸ ಮಾಡುತ್ತಿದ್ದು, ಮೀನುಗಾರರಾದ ಇವರು ಫ್ರೆಶ್ ಆದ ಮೀನು ತರುವುದಕ್ಕಾಗಿ ಸಸ್ಸೂನ್ ಧಕ್ಕೆಗೆ (Sassoon Dock) ಹೋಗಿದ್ದರು. ಮರಳಿ ಬರುತ್ತಿರುವ ವೇಳೆ ಇವರ ಸ್ಕೂಟರ್‌ಗೆ ಹಿಂಬದಿಯಿಂದ ವೇಗವಾಗಿ ಬಂದ BMW ಕಾರು ಡಿಕ್ಕಿ ಹೊಡೆದಿತ್ತು. ಕಾರ್ ಮತ್ತು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಕಾರ್‌ನಲ್ಲಿದ್ದ ಮಿಹಿರ್ ಪರಾರಿಯಾಗಿದ್ದನು. ಕಾರ್ ಚಾಲಕನ ರಕ್ತದ ಮಾದರಿಯನ್ನು ಪಡೆದು ವೈದ್ಯಕೀಯ ತಪಾಸಣೆಗೆ ರವಾನಿಸಲಾಗಿದೆ. ನ್ಯಾಯಾಲಯ ಚಾಲಕನನ್ನು ಜುಲೈ 11ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಯುನಿಫಾರ್ಮ್‌ನಲ್ಲಿ ಉದ್ಯಮಿಗೆ ಬಾಡಿಗಾರ್ಡ್ ಆಗಿ ರೀಲ್ ಮಾಡಿದ ಪೊಲೀಸರು ಸಸ್ಪೆಂಡ್
ಅಪಘಾತ ನಡೆದ ಸಂದರ್ಭದಲ್ಲಿ ಮಿಹಿರ್ ಪಾನಮತ್ತನಾಗಿ ಕಾರ್ ಚಲಾಯಿಸುತ್ತಿದ್ದನು ಎಂಬ ಅನುಮಾನಗಳು ವ್ಯಕ್ತವಾಗಿವೆ. ಹಾಗಾಗಿಯೇ ಚಾಲಕನನ್ನು ಬಿಟ್ಟು ಸ್ಥಳದಿಂದ ಎಸ್ಕೇಪ್ ಆಗಿದ್ದ ಎಂದು ವರದಿಗಳು ಪ್ರಕಟವಾಗಿವೆ.
ಪೊಲೀಸರ ವರದಿ ಪ್ರಕಾರ ಮಿಹ್ರಿ ಶಾ ನಿನ್ನೆ ತಡರಾತ್ರಿ ಜೂಹುವಿನ ಬಾರೊಂದರಲ್ಲಿ ಕಂಠಪೂರ್ತಿ ಕುಡಿದಿದ್ದು, ಚಾಲಕನಿಗೆ ತನ್ನನ್ನು ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದ, ಇಂದು ಮುಂಜಾನೆ ಮನೆಗೆ ಬರುತ್ತಿದ್ದ ವೇಳೆ ತನ್ನನ್ನು ಲಾಂಗ್ ಡ್ರೈವ್ ಕರೆದುಕೊಂಡು ಹೋಗುವಂತೆ ಚಾಲಕನಿಗೆ ಹೇಳಿದ್ದಾನೆ. ಇದಾದ ನಂತರ ಕಾರು ವರ್ಲಿಯತ್ತ ಬರುತ್ತಿದ್ದಾಗ ಮಿಹ್ರಿ ಶಾ, ಕಾರು ಚಾಲಕನ ಬಳಿ ತಾನು ಕಾರು ಚಾಲನೆ ಮಾಡುತ್ತೇನೆ ಎಂದು ಹೇಳಿದ್ದಾನೆ. ಹೀಗೆ ಈತ ಕಾರನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಕೆಲವೇ ಕ್ಷಣಗಳಲ್ಲಿ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.
ರೈಲು ಹತ್ತೋ ಅವಸರದಲ್ಲಿ ಕೆಳಗೆ ಬಿದ್ದ ಮಹಿಳೆ: ಮನೆ ಕೆಲಸ ಮಾಡಿ ಬದುಕ್ತಿದ್ದವಳ ಎರಡೂ ಕಾಲು ಕಟ್