ಶನಿವಾರ ಪತನಗೊಂಡಿದ್ದ ಭಾರತೀಯ ವಾಯುಪಡೆಗೆ ಸೇರಿದ ಮಿರಾಜ್-2000 ಮತ್ತು ಸುಖೋಯ್-30 ಯುದ್ಧ ವಿಮಾನದ ಬ್ಲಾಕ್‌ಬಾಕ್ಸ್ ಪತ್ತೆಯಾಗಿದೆ. ಹೀಗಾಗಿ ಅಪಘಾತಕ್ಕೆ ಕಾರಣವೇನು ಎಂಬ ಅಂಶಗಳು ಬ್ಲಾಕ್‌ಬಾಕ್ಸ್ ವಿಶ್ಲೇಷಣೆಯ ಬಳಿಕ ಪತ್ತೆಯಾಗುವ ಭರವಸೆ ಸಿಕ್ಕಿದೆ.
ಮೊರೇನಾ: ಶನಿವಾರ ಪತನಗೊಂಡಿದ್ದ ಭಾರತೀಯ ವಾಯುಪಡೆಗೆ ಸೇರಿದ ಮಿರಾಜ್-2000 ಮತ್ತು ಸುಖೋಯ್-30 ಯುದ್ಧ ವಿಮಾನದ ಬ್ಲಾಕ್‌ಬಾಕ್ಸ್ ಪತ್ತೆಯಾಗಿದೆ. ಹೀಗಾಗಿ ಅಪಘಾತಕ್ಕೆ ಕಾರಣವೇನು ಎಂಬ ಅಂಶಗಳು ಬ್ಲಾಕ್‌ಬಾಕ್ಸ್ ವಿಶ್ಲೇಷಣೆಯ ಬಳಿಕ ಪತ್ತೆಯಾಗುವ ಭರವಸೆ ಸಿಕ್ಕಿದೆ. ಮಧ್ಯಪ್ರದೇಶಧ ಮೊರೆನಾದ ಪಹಾಡ್‌ಗಢದಲ್ಲಿ 2 ವಿಮಾನಗಳು ಪತನಗೊಂಡಿದ್ದವು. ಇವುಗಳ ಅವಶೇಷಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಪಹಾಡ್‌ಗಢ್‌ನಲ್ಲಿ ಮಿರಾಜ್‌ನ ಬ್ಲಾಕ್‌ಬಾಕ್ಸ್ ಪತ್ತೆಯಾಗಿದೆ.
ಇದೇ ಸ್ಥಳದಲ್ಲಿ ಸುಖೋಯ್ ಡೇಟಾ ರೆಕಾರ್ಡರ್‌ನ (data recorder) ಒಂದು ಭಾಗ ಪತ್ತೆಯಾಗಿದ್ದು, ಮತ್ತಷ್ಟು ಅವಶೇಷಗಳು ರಾಜಸ್ಥಾನದ ಭರತ್‌ಪುರದಲ್ಲಿ (Bharatpur) ಬಿದ್ದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು, ವಾಯುಪಡೆ ಮತ್ತು ಇತರ ಅಧಿಕಾರಿಗಳು ಸುಖೋಯ್ ವಿಮಾನದ ಬ್ಲಾಕ್‌ಬಾಕ್ಸ್‌ನ ಇತರ ಭಾಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶನಿವಾರ ನಡೆದ ದುರ್ಘಟನೆಯಲ್ಲಿ ಮಿರಾಜ್ ವಿಮಾನದಲ್ಲಿದ್ದ ಪೈಲಟ್ ವಿಂಗ್ ಕಮಾಂಡರ್ ಬೆಳಗಾವಿಯ ಹನುಮಂತರಾವ್ ಸಾರಥಿ (Wing Commander Hanumanta Rao Sarathi)ಮೃತಪಟ್ಟಿದ್ದರೆ, ಸುಖೋಯ್‌ನಲ್ಲಿದ್ದ ಇಬ್ಬರು ಪೈಲಟ್‌ಗಳು ವಿಮಾನದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದರು.
ಮಧ್ಯ ಪ್ರದೇಶದ ಮೊರೆನಾ ಬಳಿ 2 ಯುದ್ಧ ವಿಮಾನ ಪತನ; ಓರ್ವ ಪೈಲಟ್ ಸಾವು
Aero India Show ಜ.30 ರಿಂದ ಫೆ.20ರ ವರೆಗೆ ಯಲಹಂಕ ವಾಯುನೆಲೆ ಸುತ್ತ ಮಾಂಸ ಮಾರಾಟ ನಿಷೇಧ!
