ಜೂ.12ರಂದು ಅಹಮದಾಬಾದ್‌ನಲ್ಲಿ ಪತನವಾದ ಏರ್ ಇಂಡಿಯಾ ವಿಮಾನದ ಮುಂಭಾಗದಲ್ಲಿದ್ದ ಬ್ಲ್ಯಾಕ್‌ಬಾಕ್ಸನಲ್ಲಿದ್ದ ಮಾಹಿತಿಯನ್ನು ಸಂಗ್ರಹಿಸುವಲ್ಲಿ ವಿಜ್ಞಾನಿಗಳ ತಂಡ ಯಶಸ್ವಿಯಾಗಿದೆ. ಹೀಗಾಗಿ ವಿಮಾನ ದುರಂತಕ್ಕೆ ನಿಖರ ಕಾರಣ ತಿಳಿಯುವ ಸಮಯ ಸನ್ನಿಹಿತವಾಗಿದೆ.

ನವದೆಹಲಿ: ಜೂ.12ರಂದು ಅಹಮದಾಬಾದ್‌ನಲ್ಲಿ ಪತನವಾದ ಏರ್ ಇಂಡಿಯಾ ವಿಮಾನದ ಮುಂಭಾಗದಲ್ಲಿದ್ದ ಬ್ಲ್ಯಾಕ್‌ಬಾಕ್ಸನಲ್ಲಿದ್ದ ಮಾಹಿತಿಯನ್ನು ಸಂಗ್ರಹಿಸುವಲ್ಲಿ ವಿಜ್ಞಾನಿಗಳ ತಂಡ ಯಶಸ್ವಿಯಾಗಿದೆ. ಹೀಗಾಗಿ ವಿಮಾನ ದುರಂತಕ್ಕೆ ನಿಖರ ಕಾರಣ ತಿಳಿಯುವ ಸಮಯ ಸನ್ನಿಹಿತವಾಗಿದೆ.

ವಿಮಾನ ಅಪಘಾತ ತನಿಖಾ ಬ್ಯೂರೋ, ಕಪ್ಪುಪೆಟ್ಟಿಗೆಗಳ ಪರಿಶೀಲನೆ ನಡೆಸಿ ಡೇಟಾವನ್ನು ಕಲೆ ಹಾಕಿದೆ. ಮೆಮೊರಿ ಮಾಡ್ಯೂಲ್ ಅನ್ನು ಸಹ ಯಶಸ್ವಿಯಾಗಿ ಹಿಂಪಡೆಯಲಾಗಿದೆ.

ವಿಮಾನ ದುರಂತದ ಮರುದಿನ, ಜೂ.13ರಂದು ವಿಮಾನದಲ್ಲಿದ್ದ 2 ಕಪ್ಪುಪೆಟ್ಟಿಗೆಗಳನ್ನು ಪತ್ತೆ ಹಚ್ಚಲಾಗಿತ್ತು. ಇವುಗಳು ಸ್ಫೋಟ ಅಥವಾ ಬೆಂಕಿಗೆ ಸಿಲುಕಿದರೂ ಹಾನಿಗೆ ಒಳಗಾಗದ ಸಾಧನಗಳಾಗಿದ್ದು, ವಿಮಾನದ ಕುರಿತ ಎಲ್ಲ ತಾಂತ್ರಿಕ ಮಾಹಿತಿಗಳನ್ನು ಸಂಗ್ರಹಿಸಿರುತ್ತವೆ. ಇವುಗಳ ಡೇಟಾ ದೊರಕಿದರೆ, ದುರಂತದ ಕುರಿತು ಮಾಹಿತಿ ಲಭ್ಯವಾಗುತ್ತದೆ.

ಹೊಸ ರಕ್ತದ ಗುಂಪು ಪತ್ತೆ: ಹೆಸರು ಗ್ವಾಡಾ ನೆಗೆಟಿವ್‌

ನವದೆಹಲಿ: ರಕ್ತದ ಗುಂಪು ಎಂದಕೂಡಲೇ 8 ವಿಧಗಳು ನೆನಪಾಗುತ್ತವೆ. ಆದರೆ ಅಸಲಿಗೆ 47 ಪ್ರಕಾರದ ರಕ್ತದ ಗುಂಪುಗಳಿವೆ. ಇದಕ್ಕೀಗ ಇನ್ನೊಂದು ವಿಧದ ಸೇರ್ಪಡೆಯಾಗಿದ್ದು, ಇದು ಭೂಮಿಯಲ್ಲಿ ಏಕೈಕ ವ್ಯಕ್ತಿಯ ದೇಹದಲ್ಲಿದೆ ಎಂಬುದು ವಿಶೇಷ. ಅದಕ್ಕೆ ‘ಗ್ವಾಡಾ ನೆಗೆಟಿವ್‌’ ಎಂಬ ಹೆಸರಿಡಲಾಗಿದೆ.

ಯಾರಲ್ಲಿದೆ ಗ್ವಾಡಾ ರಕ್ತ?:15 ವರ್ಷಗಳ ಹಿಂದೆ ಗ್ವಾಡೆಲೋಪ್(ಗ್ವಾಡಾ) ಕೆರಿಬಿಯನ್ ದ್ವೀಪದ ವಾಸಿಯಾಗಿರುವ ಫ್ರೆಂಚ್‌ ಮಹಿಳೆಯೊಬ್ಬಳಿಂದ ಶಸ್ತ್ರಚಿಕಿತ್ಸೆಗೂ ಮುನ್ನ ರಕ್ತದ ಮಾದರಿಯನ್ನು ಪಡೆಯಲಾಗಿತ್ತು. 2011ರಲ್ಲಿ ಈ ರಕ್ತದಲ್ಲಿ ಅಸಾಮಾನ್ಯ ಪ್ರತಿಕಾಯಗಳು ಪತ್ತೆಯಾಗಿದ್ದವು. 2019ರಲ್ಲಿ ನಡೆಸಿದ ಡಿಎನ್‌ಎ ಸೀಕ್ವೆನ್ಸಿಂಗ್‌ನಿಂದ, ಇದು ಆನುವಂಶಿಕ ರೂಪಾಂತರದಿಂದ ಸೃಷ್ಟಿಯಾಗಿರುವ ಹೊಸ ರಕ್ತದ ಗುಂಪು ಹಾಗೂ ಇದು ಆಕೆಯ ಪೋಷಕರಿಂದ ಅನುವಂಶಿಕವಾಗಿ ಬಂದಿತ್ತು ಎಂದು ತಿಳಿದುಬಂದಿತ್ತು. ಇದು ಈವರೆಗೆ ಬೆಳಕಿಗೆ ಬಂದಿರುವ ಏಕೈಕ ಪ್ರಕರಣವಾಗಿದೆ.

ಈ ಬ್ಲಡ್‌ ಗ್ರೂಪ್‌ ಅನ್ನು ಈಗ ಐಎಸ್‌ಬಿಟಿ 48ನೆಯದ್ದಾಗಿ ಅಧಿಕೃತವಾಗಿ ಗುರುತಿಸಿದ್ದು, ಅದಕ್ಕೆ ಮಹಿಳೆಯ ಊರಾದ ‘ಗ್ವಾಡಾ’ ಎಂದೇ ಅದಕ್ಕೆ ವಿಜ್ಞಾನಿಗಳು ಹೆಸರಿಟ್ಟಿದ್ದಾರೆ. ಈ ಬೆಳವಣಿಗೆಯಿಂದಾಗಿ, ಮುಂದೆ ಯಾರಲ್ಲಾದರೂ ಈ ರಕ್ತದ ಮಾದರಿ ಪತ್ತೆಯಾದಲ್ಲಿ, ಅದಕ್ಕೆ ಉತ್ತಮ ಚಿಕಿತ್ಸೆ ನೀಡುವುದು ಸುಲಭವಾಗಿದೆ.

  • ರಕ್ತದ ಗುಂಪು ಎಂದಕೂಡಲೇ 8 ವಿಧಗಳು ನೆನಪಾಗುತ್ತವೆ. ಆದರೆ ಅಸಲಿಗೆ 47 ಪ್ರಕಾರದ ರಕ್ತದ ಗುಂಪುಗಳಿವೆ.
  • ಇನ್ನೊಂದು ವಿಧದ ಸೇರ್ಪಡೆಯಾಗಿದ್ದು, ಇದು ಭೂಮಿಯಲ್ಲಿ ಏಕೈಕ ವ್ಯಕ್ತಿಯ ದೇಹದಲ್ಲಿದೆ