ಶ್ರೀನಗರ(ಡಿ. 24) ಶ್ರೀನಗರದ ಕೊನ್ಮೋಹ್  ಕ್ಷೇತ್ರದಿಂದ ಚೆನ್ನೈನ ಅಣ್ಣಾ ಯುನಿವರ್ಸಿಟಿಯಿಂದ ಬಯೋಮೆಡಿಕಲ್ ಇಂಜಿನಿಯರ್  ಪದವಿ ಪಡೆದ  ಅಜಾಜ್ ಹುಸೇನ್(35) ಗೆಲುವು ಯುವರಕ್ತ ರಾಜಕಾರಣಕ್ಕೆ ಬರಬೇಕು ಎಂಬುಸು ಸಾಬೀತಾಗಿದೆ.

ನನಗೆ ಆಗ  22 ವರ್ಷ. ಅದು ನನ್ನ ಹಾಸ್ಟೇಲ್ ದಿನಗಳು..ನನ್ನ ಸ್ನೇಹಿತರು ಆರ್ ಎಸ್ ಎಸ್ ನ ಶಿಬಿರದ ಮಾಹಿತಿ ನೀಡಿದ್ದರು. ಎಬಿವಿಪಯ ಬಗ್ಗೆ ತಿಳಿವಳಿಕೆ ನೀಡಿದ್ದರು.  ನನ್ನ ಮೇಲೆ ವಿಚಾರಧಾರೆ ಪ್ರಭಾವ ಬೀರಿ ರಾಷ್ಟ್ರೀಯವಾದದೆಡೆಗೆ ಆಕರ್ಷಿತಗೊಂಡೆ.  

ನಾವು ಯಾವ ಸಂದರ್ಭದಲ್ಲಿಯೂ ಧರ್ಮದ ಬಗ್ಗೆ ಮಾತನಾಡಲೇ ಇಲ್ಲ.. ಚರ್ಚೆ ಮಾಡಲೇ ಇಲ್ಲ..  ನಾನು ವಿಪ್ರೋದಲ್ಲಿ ಕೆಲ ಕಾಲ ಕೆಲಸ ಮಾಡಿದೆ. ರಾಜಕಾರಣ ನನ್ನ ಮೊದಲ ಆಯ್ಕೆಯಾಗಿತ್ತು.. ಅಲ್ಲಿಂದ ಸಕ್ರಿಯವಾಗಿ ತೊಡಗಿಕೊಂಡು ಬಿಜೆಪಿ  ರಾಷ್ಟ್ರೀಯ ಯುವ ಮೋರ್ಚಾದ ಉಪಾಧ್ಯಕ್ಷನಾದೆ ಎಂದು ಹುಸೇನ್ ತಮ್ಮ ಅಭಿಪ್ರಾಯ ಹೇಳುತ್ತಾರೆ. ಕಾಶ್ಮೀರ ಮತ್ತು ಪಶ್ಚಿಮ ಬಂಗಾಳದಲ್ಲಿ ಪಕ್ಷ ಬಲವರ್ಧನೆ ಮಾಡುವುದು ನಮ್ಮ ಮುಂದಿನ ಗುರಿ ಎನ್ನುತ್ತಾರೆ.

ಮತ್ತೆ ಆಪರೇಷನ್.. ಬಿಜೆಪಿ ಕೈಹಿಡಿದ ಕಾಂಗ್ರೆಸ್  ಪ್ರಭಾವಿ

ಬಿಜೆಪಿಯ ಮತ್ತೊಬ್ಬ ಗೆಲುವಿನ ಅಭ್ಯರ್ಥಿ ಮುನ್ನಾ ಲತೀಫ್(22) . ಪುಲ್ವಾಮಾದ ಕಾಕ್ ಪುರಾದಿಂದ  ಗೆದ್ದು ಬಂದಿದ್ದಾರೆ. ನನ್ನ ತಂದೆಯಬವರ ಕನಸನ್ನು ಸಾಕಾರ ಮಾಡುವುದು ನನ್ನ ಮೊದಲ ಗುರಿ ಎಂದು ಹೇಳುತ್ತಾರೆ. ಬಿಎಲ್‌ಎಲ್ ಬಿ ಕೋರ್ಸ್ ಮಾಡುತ್ತಿದ್ದೆ.. ಈ ವೇಳೆ ಪುಲ್ವಾಮಾ ಅಭಿವೃದ್ಧಿಯಲ್ಲಿ ಯಾಕೆ ಹಿಂದೆ ಉಳಿದಿದೆ ಎಂಬ ವಿಚಾರ ನನ್ನನ್ನು ಬಲವಾಗಿ ಕಾಡಿತು. ನನ್ನ ತಂದೆ ಮತ್ತು ಅಣ್ಣಂದಿರು ಸಹ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು.  2019 ರಲ್ಲಿ ನಡೆದ ಉಗ್ರ ದಾಳಿ ನನ್ನನ್ನು ಮತ್ತಷ್ಟು ಜನಸೇವೆ ಕಡೆಗೆ ತೆರಳುವಂತೆ ಮಾಡಿತು ಎಂದು  ಹೇಳುತ್ತಾರೆ.

ಬಂಡೀಪೋರಾದಿಂದ ಸ್ವಂತಂತ್ರವಾಗಿ ಗೆದ್ದು ಬಂದಿದ್ದ ಶಾಸಕರ ಪುತ್ರ ಅಜೀಜ್ ಅಹಮದ್ ಖಾನ್ (35)  ಇಂಗ್ಲಿಷ್ ಮತ್ತು ಇರಿಹಾಸದಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡವರು. 

ಗುರೇಜ್ ಕ್ಷೇತ್ರವನ್ನು ಪ್ರತಿನಿಧಿಸುವ ಖಾನ್ನ ನನ್ನ ಪ್ರದೇಶವನ್ನು ವಿಶ್ಚದ ಭೂಪಟದಲ್ಲಿ ಗುರುತಿಸುವಂತೆ ಮಾಡುತ್ತೇನೆ ಎನ್ನುತ್ತಾರೆ. ಒಟ್ಟಿನಲ್ಲಿ ಯುವಕರು ರಾಜಕಾರಣದ ಕಡೆ ಬಂದಿದ್ದು ಬದಲಾದ ಜಮ್ಮು ಕಾಶ್ಮೀರದಲ್ಲಿ  ಒಂದೊಂದೆ ಹಂತದ ಬದಲಾವಣೆಯೂ ಆರಂಭವಾಗಿದೆ.