Asianet Suvarna News Asianet Suvarna News

ಯೋಗಿಗೆ ಓವೈಸಿ ಚಾಲೆಂಗ್: ಸವಾಲು ಸ್ವೀಕರಿಸ್ತೀನಿ ಎಂದ ಯುಪಿ ಸಿಎಂ!

* ಉತ್ತರ ಪ್ರದೇಶದಲ್ಲಿ ರಂಗೇರಿದ ಚುನಾವಣಾ ಕಣ

* ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಓವೈಸಿ ಚಾಲೆಂಜ್

* ಸವಾಲು ಸ್ವೀಕರಿಸ್ತೀನಿ ಎಂದ ಸಿಎಂ ಯೋಗಿ

BJP workers accept Owaisi challenge we will win more than 300 seats in Uttar Pradesh CM Yogi Adityanath pod
Author
Bangalore, First Published Jul 4, 2021, 1:25 PM IST

ಲಕ್ನೋ(ಜು.04): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲು ಒಂದು ವರ್ಷ ಇರುವಾಗಲೇ ರಾಜಕೀಯ ಪೈಪೋಟಿ ಆರಂಭವಾಗಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಅಸಾದುದ್ದೀನ್ ಐವೈಸಿ ಪಕ್ಷ AIMIM ಸ್ಪರ್ಧಿಸುತ್ತಿರುವುದು ಮತ್ತಷ್ಟು ಬಿಸಿ ಏರುವಂತೆ ಮಾಡಿದೆ. ಸದ್ಯ AIMIM ಪಕ್ಷದಿಂದ ವಿಡಿಯೋ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಓವೈಸಿ ಯೋಗಿ ಆದಿತ್ಯನಾಥ್‌ರಿಗೆ ಸವಾಲೊಂದನ್ನು ಎಸೆಯುತ್ತಾ, ಅವರನ್ನು ಉತ್ತರ ಪ್ರದೇಶದ ಮುಂದಿನ ಸಿಎಂ ಆಗಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ. ಇದರ ಬೆನ್ನಲ್ಲೇ ಅತ್ತ ಸಿಎಂ ಯೋಗಿ ಈ ಸವಾಲನ್ನು ಸ್ವೀಕರಿಸಿದ್ದು, 2022ರಲ್ಲಿ ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿಯೇ ಆಡಳಿತ ನಡೆಸಲಿದೆ ಎಂದಿದ್ದಾರೆ.

ಸುದ್ದಿ ಸಂಸ್ಥೆ ಎಎನ್‌ಐ ಈ ಬಗ್ಗೆ ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರು ಮಾತನಾಡುತ್ತಾ ಅಸಾದುದ್ದೀನ್ ಓವೈಸಿ ನಮ್ಮ ದೇಶದ ಓರ್ವ ದೊಡ್ಡ ನಾಯಕ. ಅವರು 2022ರ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೆಸೆದಿದ್ದರೆ, ಕಾರ್ಯಕರ್ತರು ಅವರ ಸವಾಲನ್ನು ಸ್ವೀಕರಿಸುತ್ತಾರೆ. 2022ರಲ್ಲಿ ಬಿಜೆಪಿಯೇ ಮತ್ತೆ ಅಧಿಕಾರಕ್ಕೇರುತ್ತದೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

75 ಜಿ.ಪಂ.ಗಳಲ್ಲಿ 67ರಲ್ಲಿ ಬಿಜೆಪಿ ಜಯಭೇರಿ

 ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ, ಜಿಲ್ಲಾ ಪಂಚಾಯತ್‌ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಗಳಿಸಿದೆ.

75 ಜಿಲ್ಲೆಗಳಲ್ಲಿ ಮುಖ್ಯಸ್ಥರ ಆಯ್ಕೆಗೆ ನಡೆದ ಚುನಾವಣೆಯಲ್ಲಿ 67 ಕ್ಷೇತ್ರಗಳಲ್ಲಿ ಬಿಜೆಪಿ ಜಯಿಸಿದೆ. ಅಖಿಲೇಶ್‌ ಯಾದವ್‌ ಅವರ ಸಮಾಜವಾದಿ ಪಕ್ಷ ಕೇವಲ 6 ಸೀಟುಗಳಲ್ಲಿ ಜಯ ಗಳಿಸುವ ಮೂಲಕ ಹಿನ್ನಡೆ ಅನುಭವಿಸಿದೆ. ಈ ಪೈಕಿ ಬಿಜೆಪಿ 21 ಸೀಟು, ಸಮಾಜವಾದಿ ಪಕ್ಷ 1 ಕ್ಷೇತ್ರದಲ್ಲಿ ಮೊದಲೇ ಅವಿರೋಧವಾಗಿ ಆಯ್ಕೆಯಾಗಿತ್ತು. 2016ರಲ್ಲಿ ಯಾದವ್‌ ಪಕ್ಷ 60 ಸೀಟು ಗೆದ್ದಿತ್ತು.

ಶನಿವಾರದ ಗೆಲುವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪಾಳಯದ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ.

Follow Us:
Download App:
  • android
  • ios