*  ಬಿಜೆಪಿಯ 271 ಸೇರಿ ಎನ್‌ಡಿಎಗೆ 296 ಸೀಟು: ಇಂಡಿಯಾ ಟುಡೇ*  ಕಾಂಗ್ರೆಸ್‌ ನೇತೃತ್ವದ ಯುಪಿಎ ಕೇವಲ ಸ್ಥಾನಕ್ಕೆ ತೃಪ್ತ, ಇತರರಿಗೆ 210 ಸೀಟು*  ಉ.ಪ್ರ.ದಲ್ಲಿ ಶೇ.49 ಜನ ಯೋಗಿ ಪರ 

ನವದೆಹಲಿ(ಜ.21): ಈಗ ಲೋಕಸಭೆ ಚುನಾವಣೆ(Lok Sabha Elections) ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ(BJP-led NDA) 296 ಸ್ಥಾನ ಗಳಿಸಿ ಬಹುಮತ ಗಳಿಸಲಿದೆ. ಇನ್ನು ಬಹುಮತದ ಅಂಕಿಯಾದ 272ರ ಸನಿಹವಾದ 271 ಸ್ಥಾನ ಗಳಿಸಲಿರುವ ಬಿಜೆಪಿ ಬಹುತೇಕ ಏಕಾಂಗಿಯಾಗಿ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಯೊಂದು(Survey) ಹೇಳಿದೆ.

‘ಇಂಡಿಯಾ-ಟುಡೇ’ (India Today) ಹಾಗೂ ‘ಸಿ-ವೋಟರ್‌’(C Voter) ಮಾಧ್ಯಮ ಹಾಗೂ ಸಮೀಕ್ಷಾ ಸಂಸ್ಥೆಗಳು ‘ಮೂಡ್‌ ಆಫ್‌ ದ ನೇಶನ್‌’(Mood of the Nation) ಹೆಸರಿನಲ್ಲಿ ಸಮೀಕ್ಷೆ ನಡೆಸಿವೆ. ಇನ್ನು ವಿಪಕ್ಷ ಕಾಂಗ್ರೆಸ್‌(Congress) ಅನ್ನು ಒಳಗೊಂಡ ಯುಪಿಎ(UPA) 127 ಸ್ಥಾನ ಗಳಿಸಲಿದೆ. ಇದರಲ್ಲಿ ಕಾಂಗ್ರೆಸ್‌ ಪಾಲು ಕೇವಲ 62 ಸ್ಥಾನ ಇರಲಿದೆ ಎಂದು ಅದು ಹೇಳಿದೆ.

Assembly Elections 2022: ಪಂಚರಾಜ್ಯಗಳ ಜನರಿಗೆ ಯಾವ ಪಕ್ಷ ಫೇವರಿಟ್? ಸಮೀಕ್ಷೆಯಲ್ಲಿ ಎಲ್ಲವೂ ಬಯಲು

ಆದರೆ ಮಮತಾ ಬ್ಯಾನರ್ಜಿ(Mamata Banerjee) ಅವರ ತೃಣಮೂಲ ಕಾಂಗ್ರೆಸ್‌ 35 ಸ್ಥಾನ ಗಳಿಸಿ ಗಮನಾರ್ಹ ಸಾಧನೆ ಮಾಡಲಿದೆ. ತೃಣಮೂಲ ಒಳಗೊಂಡ ಇತರ ಪಕ್ಷಗಳು 210 ಸ್ಥಾನ ಗಳಿಸಲಿವೆ ಎಂದು ಅದು ವಿವರಿಸಿದೆ.
ಈ ಸಮೀಕ್ಷೆಯನ್ನು ಗಮನಿಸಿದರೆ ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಷ್ಟುಇಳಿದಿಲ್ಲ ಎಂಬುದು ಸಾಬೀತಾಗುತ್ತದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 303 (ಎನ್‌ಡಿಎ 353), ಕಾಂಗ್ರೆಸ್‌ 52 (ಯುಪಿಎ 90) ಸ್ಥಾನ ಗೆದ್ದಿದ್ದವು.

ಉ.ಪ್ರ.ದಲ್ಲಿ ಶೇ.49 ಜನ ಯೋಗಿ ಪರ:

ಇನ್ನು ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪರ ಶೇ.49 ಜನರ ಒಲವು ವ್ಯಕ್ತವಾಗಿದೆ.

ಲೋಕಸಭೆ ಚುನಾವಣಾ ಸಮೀಕ್ಷೆ

(ಒಟ್ಟು ಸ್ಥಾನ 543/ಬಹುಮತಕ್ಕೆ 272)

ರಂಗ ಸ್ಥಾನ

ಎನ್‌ಡಿಎ 296
ಯುಪಿಎ 127
ಇತರರು 210
ನೆಚ್ಚಿನ ಪ್ರಧಾನಿ ಅಭ್ಯರ್ಥಿ
ನರೇಂದ್ರ ಮೋದಿ ಶೇ.53
ರಾಹುಲ್‌ ಗಾಂಧಿ ಶೇ.7
ಯೋಗಿ ಆದಿತ್ಯನಾಥ್‌ ಶೇ.6
ಅಮಿತ್‌ ಶಾ ಶೇ.4

5 States Elections: ಯುಪಿಯಲ್ಲಿ ಮೋದಿ-ಯೋಗಿ ಕಮಾಲ್.? ಸಮೀಕ್ಷೆಯ ಲೆಕ್ಕಾಚಾರ ಹೀಗಿದೆ

ಝೀ ವಾಹಿನಿ ಸಮೀಕ್ಷೆ ಪ್ರಕಾರ ಉತ್ತರಾಖಂಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ಭಾರೀ ಪೈಪೋಟಿ ಏರ್ಪಡಲಿದ್ದು, ಕಾಂಗ್ರೆಸ್‌ 35 ಹಾಗೂ ಬಿಜೆಪಿ 33 ಕ್ಷೇತ್ರಗಳನ್ನು ಜಯಿಸಲಿದೆ. ಅತಂತ್ರ ಸ್ಥಿತಿ ಉಂಟಾಗಲಿದೆ.
ಇಂಡಿಯಾ ಟೀವಿ ಉತ್ತರಪ್ರದೇಶದಲ್ಲಿ ಬಿಜೆಪಿ 235 ಸ್ಥಾನ ಗೆದ್ದು ಸರಳ ಬಹುಮತ ಸಂಪಾದಿಸಲಿದೆ ಎಂದಿದೆ.

ಉತ್ತರ ಪ್ರದೇಶ ಚುನಾವಣಾ ಪೂರ್ವ ಸಮೀಕ್ಷೆ: ಒಟ್ಟು ಸ್ಥಾನ: 403 ಬಹುಮತಕ್ಕೆ 202

* ಪಕ್ಷ- ರಿಪಬ್ಲಿಕ್‌| ಇಂಡಿಯಾ ಟೀವಿ| ಜನ್‌ ಕೀ ಬಾತ್‌

ಬಿಜೆಪಿ- 252-272| 230-235| 226-246
ಕಾಂಗ್ರೆಸ್‌- 3-9| 3-7| 0-01
ಎಸ್‌ಪಿ- 111-131| 160-165| 144-166
ಬಿಎಸ್‌ಪಿ- 8-16| 2-5| 8-12
ಪಕ್ಷೇತರರು- 00| 1-3| 0-4

ಉತ್ತರಾಖಂಡ ಚುನಾವಣಾ ಪೂರ್ವ ಸಮೀಕ್ಷೆ: ಒಟ್ಟು ಕ್ಷೇತ್ರ 70 ಬಹುಮತಕ್ಕೆ 36

* ಪಕ್ಷ- ರಿಪಬ್ಲಿಕ್‌| ಜಿ ನ್ಯೂಸ್‌| ಜನ್‌ ಕೀ ಬಾತ್‌

ಬಿಜೆಪಿ- 35-42| 33| 34-38
ಕಾಂಗ್ರೆಸ್‌ 25-31| 35| 24-33
ಆಪ್‌ 00-02| 1| 2-6
ಪಕ್ಷೇತರರು 01-03| 1| 1-2

ಪಂಜಾಬ್‌ ಚುನಾವಣಾ ಪೂರ್ವ ಸಮೀಕ್ಷೆ: ಒಟ್ಟು ಕ್ಷೇತ್ರಗಳು 117 ಬಹುಮತಕ್ಕೆ
* ಪಕ್ಷ- ರಿಪಬ್ಲಿಕ್‌| ಜನ್‌ ಕೀ ಬಾತ್‌

ಬಿಜೆಪಿ 1-3| 1-2
ಕಾಂಗ್ರೆಸ್‌ 42-48| 32-42
ಆಪ್‌ 50-56| 58-65
ಎಸ್‌ಎಡಿ 13-17| 15-18
ಪಕ್ಷೇತರರು 1-3| 01

ಮಣಿಪುರ ಚುನಾವಣಾ ಪೂರ್ವ ಸಮೀಕ್ಷೆ; ಒಟ್ಟು ಕ್ಷೇತ್ರ 60 ಬಹುಮತಕ್ಕೆ 31

* ಪಕ್ಷ- ರಿಪಬ್ಲಿಕ್‌

ಬಿಜೆಪಿ 31-37
ಕಾಂಗ್ರೆಸ್‌ 13-19
ಎನ್‌ಪಿಪಿ 3-9
ಪಕ್ಷೇತರರು 0-2

ಗೋವಾ ಚುನಾವಣಾ ಪೂರ್ವ ಸಮೀಕ್ಷೆ: ಒಟ್ಟು ಕ್ಷೇತ್ರ 40 ಬಹುಮತಕ್ಕೆ 21

* ಪಕ್ಷ- ರಿಪಬ್ಲಿಕ್‌

ಬಿಜೆಪಿ 16-20
ಕಾಂಗ್ರೆಸ್‌ 9-13
ಟಿಎಂಸಿ 1-5
ಆಪ್‌ 4-8
ಇತರರು 1-3