ಕೊರೋನಾ ಲಕ್ಷಣ ಗೋಚರ, ಬಿಜೆಪಿ ರಾಷ್ಟ್ರೀಯ ವಕ್ತಾರ ಆಸ್ಪತ್ರೆಗೆ ದಾಖಲು!
ಯಾರನ್ನೂ ಬಿಡದ ಕೊರೋನಾ| ಜನ ಸಾಮಾನ್ಯರು, ಜನ ನಾಯಕರು ಹೀಗೆ ಎಲ್ಲರನ್ನೂ ಕಾಡುತ್ತಿದೆ ಮಹಾಮಾರಿ| ಬಿಜೆಪಿ ರಾಷ್ಟ್ರೀಯ ವಕ್ತಾರನಲ್ಲಿ ಕಂಡು ಬಂತು ಕೊರೋನಾ ಲಕ್ಷಣ
ನವದೆಹಲಿ(ಮೇ.28): ಕೊರೋನಾ ವೈರಸ್ ಎಂಬ ಮಹಾಮಾರಿ ಯಾವುದೇ ತಾರತಮ್ಯವಿಲ್ಲದೇ ಎಲ್ಲರನ್ನೂ ಬಾಧಿಸುತ್ತಿದೆ. ಬಡ ವರ್ಗದ ಜನರಿಂದ ಶ್ರೀಮಂತ ವರ್ಷದ ಜನರು ಹೀಗೆ ಎಲ್ಲರೂ ಈ ಮಹಾಮಾರಿ ಅಬ್ಬರಕ್ಕೆ ಬೆಚ್ಚಿ ಬಿದ್ದಿದ್ದಾರೆ. ಭಾರತದಲ್ಲೂ ವೈರಸ್ ಅಬ್ಬರ ದಿನೇ ದಿನೇ ಹೆಚ್ಚಾಗುತ್ತಿದ್ದು, ಸದ್ಯ ಬಿಜೆಪಿ ಪಕ್ಷದ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರಾ ಕೊರೋನಾ ವೈರಸ್ ಲಕ್ಷಣ ಕಂಡು ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನು ಸಂಭೀತ್ ಗುರುವಾರದಂದು ಗುರುಗಾಂವ್‌ನ ಖಾಸಗಿ ಆಸ್ಪತ್ರೆ ಮೆದಾಂತ ಹಾಸ್ಪಿಟಲ್‌ಗೆ ದಾಖಲಾಗಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಪಕ್ಷದ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರಾ ವಾಹಿನಿಯಲ್ಲಿ ಕಂಡು ಬರುವ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರು. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆಕ್ಟಿವ್ ಕೂಡಾ ಹೌದು. ಗುರುವಾರವೂ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಲವಾರು ಪೋಸ್ಟ್ ಶೇರ್ ಮಾಡಿದ್ದಾರೆ.