Asianet Suvarna News Asianet Suvarna News

ನಮ್ಮ ಮಕ್ಕಳ ಲಸಿಕೆ ಕಸದ ತೊಟ್ಟಿಗೇಕೆ ಎಸೆದ್ರಿ? ರಾಹುಲ್ ಗಾಂಧಿಗೆ ಪ್ರಶ್ನೆ!

* ಕೊರೋನಾ ಕಾಲದಲ್ಲೂ ಭರದಿಂದ ಸಾಗಿದ ಲಸಿಕೆ ಅಭಿಯಾನ

* ಲಸಿಕೆ ಅಬಿಯಾನದ ಮಧ್ಯೆ ವ್ಯಾಕ್ಸಿನ್ ಪೋಲು

* ರಾಜಸ್ಥಾನದಲ್ಲಿ ಕಸದ ಬುಟ್ಟಿಯಲ್ಲಿ ಪತ್ತೆಯಾಯ್ತು ಲಸಿಕೆ

BJP slams Gehlot govt over vaccine wastage poor law and order pod
Author
Bangalore, First Published Jun 2, 2021, 3:17 PM IST | Last Updated Jun 2, 2021, 3:17 PM IST

ಭೋಪಾಲ್(ಜೂ.02): ರಾಜಸ್ಥಾನದಲ್ಲಿ ಲಸಿಕೆ ಹಾಳು ಮಾಡುತ್ತಿರುವ ವಿಚಾರ ಸದ್ಯ ಭಾರೀ ಸದ್ದು ಮಾಡುತ್ತಿದೆ. ಕಸದ ಡಬ್ಬಿಯಲ್ಲಿ ಸಿಕ್ಕ ಲಸಿಕೆಯ ಸಿರಿಂಜ್‌ಗಳು ಗೆಹ್ಲೋಟ್‌ ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸಲಾರಂಭಿಸಿದೆ. ಬಿಜೆಪಿಯು ಸೋಶಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್‌ ಹಾಗೂ ರಾಹುಲ್ ಗಾಂಧಿಗೆ ಈ ಬಗ್ಗೆ ಪ್ರಶ್ನೆ ಎಸೆದಿದ್ದು, ಇದೇನಾ ರಾಜಸ್ಥಾನ ಮಾಡೆಲ್? ಎಂದು ಪ್ರಶ್ನಿಸಿದ್ದಾರೆ.

ಜನರ ಜೀವದ ಬಗ್ಗೆ ಕಾಂಗ್ರೆಸ್‌ಗೆ ಚಿಂತೆ ಇಲ್ಲ

ಇನ್ನು ರಾಜಸ್ಥಾನದಲ್ಲಿ ಹಾಳಾಗುತ್ತಿರುವ ಲಸಿಕೆ ವಿಚಾರವಾಗಿ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿರುವ ಪಶ್ಚಿಮ ಬಂಗಾಳದ ಬಿಜೆಪಿ ಸಹ ಉಸ್ತುವಾರಿ ಅಮಿತ್ ಮಾಳವೀಯ ರಾಜಸ್ಥಾನದಲ್ಲಿ ಲಸಿಕೆ ಪೋಲಾಗುವ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಲಸಿಕೆ ಸಿಗದೇ ಒಂದೆಡೆ ಜನರು ಪರದಾಡುತ್ತಿದ್ದರೆ., ಮತ್ತೊಂದೆಡೆ ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ, ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಇನ್ನು ಈ ವಿಚಾರದ ಬಗ್ಗೆ ಸೋಶಿಇಯಲ್ ಮಿಡಿಯಾದಲ್ಲಿ ನೆಟ್ಟಿಗರು ಧ್ವನಿ ಎತ್ತಿದ್ದು, ಲಸಿಕೆ ಯಾಕೆ ಪೋಲು ಮಾಡುತ್ತಿದ್ದೀರೆಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರನ್ನು ಪ್ರಶ್ನಿಸಲಾರಂಭಿಸಿದ್ದಾರೆ.

Latest Videos
Follow Us:
Download App:
  • android
  • ios