Asianet Suvarna News Asianet Suvarna News

ಬಿಜೆಪಿ ಆದಾಯ 3,623 ಕೋಟಿ, ಖರ್ಚು 1,651 ಕೋಟಿ: ಕಾಂಗ್ರೆಸ್‌ಗೆ ನಷ್ಟ!

ಕಾಂಗ್ರೆಸ್‌ಗೆ ನಷ್ಟ: ಆದಾಯ 682 ಕೋಟಿ, ಖರ್ಚು 998 ಕೋಟಿ

19-20ರಲ್ಲಿ ಬಿಜೆಪಿ ಆದಾಯ 3623 ಕೋಟಿ, ಖರ್ಚು 1651 ಕೋಟಿ

BJP shows income of over Rs 3623 crore in FY 2019 20 pod
Author
Bangalore, First Published Aug 11, 2021, 9:44 AM IST

ನವದೆಹಲಿ(ಆ.11): 2019-20ನೇ ಸಾಲಿನಲ್ಲಿ ಬಿಜೆಪಿ ಒಟ್ಟು 3,623 ಕೋಟಿ ರು. ಆದಾಯ ಗಳಿಸಿದೆ. ಇದರಲ್ಲಿ ಚುನಾವಣಾ ಬಾಂಡ್‌ಗಳ ಮಾರಾಟದಿಂದ 2,555 ಕೋಟಿ ರು. ಗಳಿಸಿದೆ. 2018-18ನೇ ಸಾಲಿಗೆ ಹೋಲಿಸಿದರೆ ಬಿಜೆಪಿಯ ಗಳಿಕೆ ಶೇ. 50ರಷ್ಟುಏರಿಕೆಯಾಗಿದೆ.

ಚುನಾವಣೆ ಮತ್ತು ಪ್ರಚಾರಕ್ಕೆ ಬಿಜೆಪಿ 2019-20ನೇ ಸಾಲಿನಲ್ಲಿ 1651 ಕೋಟಿ ರು.ಗಳನ್ನು ಖರ್ಚು ಮಾಡಿದೆ. ಇದರಲ್ಲಿ 2019ರಲ್ಲಿ ನಡೆದ ಲೋಕಸಭಾ ಚುನಾವಣೆಗೆ 1352 ಕೋಟಿ ರು. ಖರ್ಚು ಮಾಡಿದೆ. ಕಳೆದ ಸಾಲಿಗೆ ಹೋಲಿಸಿದರೆ ಬಿಜೆಪಿಯ ಖರ್ಚು ಶೇ.64ರಷ್ಟುಏರಿಕೆಯಾಗಿದೆ. ಜಾಹಿರಾತಿಗಾಗಿ 400 ಕೋಟಿ ರು. ಹಣವನ್ನು ಬಿಜೆಪಿ ಖರ್ಚು ಮಾಡಿದೆ.

ಇದೇ ಸಾಲಿನಲ್ಲಿ ಕಾಂಗ್ರೆಸ್‌ 682 ಕೋಟಿ ರು. ಆದಾಯ ಗಳಿಸಿದೆ ಮತ್ತು 998 ಕೋಟಿ ರು. ಖರ್ಚು ಮಾಡಿದೆ. ತೃಣಮೂಲ ಕಾಂಗ್ರೆಸ್‌ ಒಟ್ಟಾರೆ 143 ಕೋಟಿ ರು. ಆದಾಯ ಗಳಿಸಿದ್ದು 107 ಕೋಟಿ ರು. ಖರ್ಚು ಮಾಡಿದೆ. ಸಿಪಿಎಂ 156 ಕೋಟಿ ಆದಾಯ ಗಳಿಸಿದ್ದು 105 ಕೋಟಿ ವೆಚ್ಚ ಮಾಡಿದೆ. ಎನ್‌ಸಿಪಿ 85 ಕೋಟಿ ಆದಾಯ ಗಳಿಸಿದ್ದು 109 ಕೋಟಿ ಖರ್ಚು ಮಾಡಿದೆ. ಬಿಎಸ್‌ಪಿ ಆದಾಯ 58 ಕೋಟಿ ಆಗಿದ್ದು 95 ಕೋಟಿ ಖರ್ಚು ಮಾಡಿದೆ. ಸಿಪಿಐ 6.58 ಕೋಟಿ ಆದಾಯ ಗಳಿಸಿದ್ದು 6.53 ಕೋಟಿ ವೆಚ್ಚ ಮಾಡಿದೆ.

Follow Us:
Download App:
  • android
  • ios