Asianet Suvarna News Asianet Suvarna News

ರಾಹುಲ್, ಸಾವರ್ಕರ್ ಅವರದ್ದಲ್ಲ ಅವರ ಅಜ್ಜಿಯ ಮರ್ಯಾದೆ ತೆಗೆದಿದ್ದಾರೆ: ಬಿಜೆಪಿ!

ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ವಿಚಾರ| ವೀರ್ ಸಾವರ್ಕರ್ ಅವರನ್ನು ಅಪಮಾನಿಸಿದ್ದ ಕಾಂಗ್ರೆಸ್ ನಾಯಕ| ಇಂದಿರಾ ಗಾಂಧಿ ಅವರು ಸಾವರ್ಕರ್ ಅವರನ್ನು ಹೊಗಳಿದ್ದನ್ನು ನೆನಪಿಸಿದ ಬಿಜೆಪಿ| ಸ್ವಾತಂತ್ರ್ಯ ಹೋರಾಟದಲ್ಲಿ ವೀರ್ ಸಾವರ್ಕರ್ ಪಾತ್ರ ಹೊಗಳಿದ್ದ ಇಂದಿರಾ ಗಾಂಧಿ| ರಾಹುಲ್ ಗಾಂಧಿ ಅವರ ಅಜ್ಜಿಗೆ ಅಪಮಾನಿಸಿದ್ದಾರೆ ಎಂದ ಶಾಹನವಾಜ್ ಹುಸೇನ್| 'ಕ್ಷಮೆ ಕೇಳಿದರೂ ದೇಶದ ಜನತೆ ರಾಹುಲ್ ಗಾಂಧಿ ಅವರನ್ನು ಕ್ಷಮಿಸುವುದಿಲ್ಲ'|

BJP Says Rahul insulted His Grand Mother By His Anti Savarkar Remark
Author
Bengaluru, First Published Dec 16, 2019, 3:57 PM IST

ನವದೆಹಲಿ(ಡಿ.16): 'ನಾನು ರಾಹುಲ್ ಸಾವರ್ಕರ್ ಅಲ್ಲ..'ಎನ್ನುವ ಮೂಲಕ ರಾಹುಲ್ ಗಾಂಧಿ ವೀರ್ ಸಾವರ್ಕರ್ ಅವರದ್ದಲ್ಲ ಬದಲಿಗೆ ತಮ್ಮ ಅಜ್ಜಿ ಇಂದಿರಾ ಗಾಂಧಿ ಅವರ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಅಣಕಿಸಿದೆ.

ಇಂದಿರಾ ಗಾಂಧಿ ಸ್ವಾತಂತ್ರ್ಯ ಹೋರಾಟದಲ್ಲಿ ವೀರ್ ಸಾವರ್ಕರ್ ಪಾತ್ರವನ್ನು ಕೊಂಡಾಡಿದ್ದರು. ಕ್ರಾಂತಿಕಾರಿ ಮಾರ್ಗದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾವರ್ಕರ್ ಸ್ಮರಣೀಯರು ಎಂದು ಇಂದಿರಾ ಗಾಂಧಿ ಹೇಳಿದ್ದರು ಎಂದು ಬಿಜೆಪಿ ನಾಯಕ ಶಾಹನವಾಜ್ ಹುಸೇನ್ ನೆನಪಿಸಿದ್ದಾರೆ.

‘ಕ್ಷಮೆ ಕೇಳಲು ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ’!

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಾವರ್ಕರ್ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಹನವಾಜ್ ಹುಸೇನ್, ರಾಹುಲ್ ಗಾಂಧಿ ತಮ್ಮ ಹೇಳಿಕೆಹೆ ಕ್ಷಮೆ ಕೋರಿದರೂ ಅವರನ್ನು ದೇಶದ ಜನತೆ ಕ್ಷಮಿಸುವುದಿಲ್ಲ ಎಂದು ಹೇಳಿದರು.

ಸಾವರ್ಕರ್ ಬಗ್ಗೆ ಮಾತಾಡಿದ್ರೆ ಹುಷಾರ್: ಕಾಂಗ್ರೆಸ್’ಗೆ ಎಚ್ಚರಿಸಿದ ಶಿವಸೇನೆ!

ದೆಹಲಿಯಲ್ಲ ನಡೆದ ಭಾರತ್ ಬಚಾವೋ ಆಂದೋಲನದಲ್ಲಿ 'ರೇಪ್ ಇನ್ ಇಂಡಿಯಾ' ಹೇಳಿಕೆಗೆ ಕ್ಷಮೆ ಕೇಳಲು ನನ್ನ ಹೆಸರು ರಾಹುಲ್ ಸಾವರ್ಕರ್ ಅಲ್ಲ ಎಂದು ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

Follow Us:
Download App:
  • android
  • ios