ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 14 ಅಭ್ಯರ್ಥಿಗಳ ಪೈಕಿ ಹಲವು ಅಚ್ಚರಿಗಳನ್ನು ಬಿಜೆಪಿ ನೀಡಿದೆ. ವಿ ಸೋಮಣ್ಣಗೆ ಟಿಕೆಟ್ ನಿರಾಕರಿಸಿರುವ ಬಿಜೆಪಿ ಹೈಕಮಾಂಡ್ ಕರ್ನಾಟಕದಿಂದ ಆರ್‌ಎಸ್‌ಎಸ್ ಸಾಮಾನ್ಯ ಕಾರ್ಯಕರ್ತ ನಾರಾಯಣಸಾ ಭಾಂಡಗೆಗೆ ಟಿಕೆಟ್ ನೀಡಿದೆ.
ನವದೆಹಲಿ(ಫೆ.11) ರಾಜ್ಯಸಭಾ ಚುನಾವಣೆ ನಾಮಪತ್ರ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ. ಇದೀಗ ಬಿಜೆಪಿ ಹಲವು ಸುತ್ತಿನ ಚರ್ಚೆ ಬಳಿಕ 14 ಅಭ್ಯರ್ಥಿಗಳ ಪಟ್ಟಿ ಘೋಷಿಸಿದೆ. ಕರ್ನಾಟಕ ಬಿಜೆಪಿ ಮಾಡಿದ ಶಿಫಾರಸನ್ನು ಹೈಕಮಾಂಡ್ ತಿರಸ್ಕರಿಸಿದೆ. ಆದರೆ ಅಚ್ಚರಿ ಎಂಬಂತೆ ಆರ್‌ಎಸ್‌ಎಸ್ ಕಾರ್ಯಕರ್ತ ನಾರಾಯಣಸಾ ಭಾಂಡಗೆ ಟಿಕೆಟ್ ಘೋಷಿಸಿದೆ. ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿರುವ ಭಾಂಡಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಇದರ ಜೊತೆಗೆ 14 ಮಂದಿಗೆ ಟಿಕೆಟ್ ಘೋಷಿಸಿದೆ.
ರಾಜ್ಯಸಭಾ 14 ಅಭ್ಯರ್ಥಿಗಳ ಪಟ್ಟಿ
ಕರ್ನಾಟಕ; ನಾರಾಯಣಸಾ ಭಾಂಡ
ಬಿಹಾರ; ಶ್ರೀ.ಧರ್ಮಶೀಲಾ ಗುಪ್ತಾ
ಬಿಹಾರ; ಡಾ.ಬೀಮ್ ಸಿಂಗ್
ಚತ್ತೀಸಘಡ; ರಾಜಾ ದೇವೇಂದ್ರ ಪ್ರತಾಪ್ ಸಿಂಗ್
ಹರ್ಯಾಣ; ಸುಭಾಷ್ ಬರಲಾ
ಉತ್ತರ ಪ್ರದೇಶ ; ಆರ್‌ಪಿಎನ್ ಸಿಂಗ್
ಉತ್ತರ ಪ್ರದೇಶ; ಸುಧಾಂಶು ತ್ರಿವೇದಿ
ಉತ್ತರ ಪ್ರದೇಶ; ಚೌಧರಿ ತೇಜವೀರ ಸಿಂಗ್
ಉತ್ತರ ಪ್ರದೇಶ; ಶ್ರೀಮತಿ ಸಾಧನಾ ಸಿಂಗ್
ಉತ್ತರ ಪ್ರದೇಶ; ಅಮರ್‌ಪಾಲ್ ಮೌರ್ಯ
ಉತ್ತರ ಪ್ರದೇಶ; ಸಂಗೀತ್ ಬಲ್ವಂತ್
ಉತ್ತರ ಪ್ರದೇಶ; ನವೀನ್ ಜೈನ್
ಉತ್ತರಖಂಡ; ಮಹೇಂದ್ರ ಭಟ್
ಪಶ್ಚಿಮ ಬಂಗಾಳ; ಸಮಿಕ್ ಭಟ್ಟಾಚಾರ್ಯ
ಬಾಗಲಕೋಟೆ ಮೂಲದವರಾಗಿರುವ ನಾರಾಯಣಾ ಕೃಷ್ಣಾಸ ಭಂಡಾಗೆ, ತಮ್ಮ 17ನೇ ವಯಸ್ಸಿಗೆ ಆರ್‌ಎಸ್ಎಸ್ ಸೇರಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಆರಂಭಿಕ ದಿನದಲ್ಲಿ ಬಾಗಲಕೋಟೆ ಎಬಿವಿಪಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ವಿಶ್ವ ಹಿಂದೂ ಪರಿಷತ್‌ನಲ್ಲಿ ಕೆಲಸ ಮಾಡಿದ್ದಾರೆ. 1973ರಲ್ಲಿ ಜನಸಂಘ ಸೇರಿ ರಾಜಕೀಯವಾಗಿ ತೊಡಗಿಸಿಕೊಂಡರು. ಆದರೆ ಇವರ ಆರಂಭಿಕ ದಿನಗಳಲ್ಲೇ ಅತ್ಯಂಕ ಕಠಿಣ ಹಾದಿ ಸವೆಸಿದ್ದಾರೆ. ಇಂದಿರಾ ಗಾಂಧಿಯವರಿಗೆ ಕಪ್ಪು ಭಾವುಟ ಪ್ರದರ್ಶನ ಮಾಡಿದ್ದಕ್ಕೆ 18 ದಿನ ಸೆರೆಮನೆ ವಾಸ ಅನುಭವಿಸಬೇಕಾಯಿತು.
ಕಾಶ್ಮೀರದಲ್ಲಿ ನಡೆದ ತಿರಂಗಾ ಯಾತ್ರೆಯಲ್ಲೂ ಭಾಗಿಯಾಗುವ ಮೂಲಕ ಬಿಜೆಪಿ ಪ್ರಮುಖ ಹೋರಾಟದ ಭಾಗವಾಗಿದ್ದರು. ರಾಮ ಮಂದಿರಕ್ಕೆ ಬಾಗಲಕೋಟೆ, ವಿಜಯಪುರದಿಂದ ಕಾರ್ಯಕರ್ತರ ಜೊತೆ ಸೇರಿ ರಾಮಶೀಲಾ ಕಳಿಸಿದ್ದಾರೆ. ಬಿಜೆಪಿ ಬಾಗಲಕೋಟೆ ಜಿಲ್ಲೆಯ ಮೊದಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳ, ಗೋವಾ, ತೆಲಂಗಾಣ , ಮಹಾರಾಷ್ಟ್ರ ಸೇರಿದಂತೆ 6 ರಾಜ್ಯಗಳಲ್ಲಿ ಚುನಾವಣಾ ಕೆಲಸ ನಿಭಾಯಿಸಿದ್ದಾರೆ.
