Asianet Suvarna News Asianet Suvarna News

ಕಂಗನಾ ರಣಾವತ್‌ಗೆ ಖಡಕ್ ಎಚ್ಚರಿಕೆ ಕೊಟ್ಟ ಬಿಜೆಪಿ ಹೈಕಮಾಂಡ್- ಈಗಲಾದ್ರೂ ಸುಮ್ಮನಾಗ್ತಾರಾ ಮಂಡಿ ಸಂಸದೆ?

ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಂಸದೆ ಕಂಗನಾ ರಣಾವತ್ ಗೆ ಬಿಜೆಪಿ ಹೈಕಮಾಂಡ್ ಖಡಕ್ ವಾರ್ನಿಂಗ್ ನೀಡಿದೆ ಎಂದು ವರದಿಯಾಗಿದೆ.

BJP reacts with its MP Kangna Ranaut s comments on farmers agitation mrq
Author
First Published Aug 26, 2024, 8:11 PM IST | Last Updated Aug 26, 2024, 8:13 PM IST

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಮಾತಾಡಿದ್ರೆ ವಿವಾದ ಎಂಬಂತಾಗಿದೆ. ಇದೀಗ ಮಂಡಿ ಸಂಸದೆಯಾಗಿರುವ ಕಂಗನಾ ರಣಾವತ್‌ಗೆ ಪಕ್ಷದ ಬಗ್ಗೆ ಮಾತನಾಡದಂತೆ ಬಿಜೆಪಿ ಹೈಕಮಾಂಡ್ ಖಡಕ್ ಎಚ್ಚರಿಕೆಯನ್ನು ನೀಡಿದೆ. ಕೃಷಿ ಕಾನೂನುಗಳನ್ನು ದೆಹಲಿಯ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸಿದ್ದ ರೈತರ ಕುರಿತು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆಯನ್ನು ರೈತ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಇತ್ತ ಕಾಂಗ್ರೆಸ್ ಸಹ ಕಂಗನಾ ಹೇಳಿಕೆಗೆ ಬಿಜೆಪಿ ಉತ್ತರ ನೀಡಬೇಕೆಂದು ಆಗ್ರಹಿಸಿತ್ತು . 

ಇದೀಗ ಕಂಗನಾ ರಣಾವತ್ ಹೇಳಿಕೆಯ ಕುರಿತು ಬಿಜೆಪಿ ತನ್ನ ನಿಲುವನ್ನು ಪ್ರಕಟಿಸಿದೆ. ಈ ಸಂಬಂಧ ಬಿಜೆಪಿ ಪತ್ರಿಕಾ ಪ್ರಕಟನೆಯನ್ನು ಹೊರಡಿಸಿದ್ದು, ಕಂಗನಾ ರಣಾವತ್‌ಗೂ ಖಡಕ್ ಸೂಚನೆಯನ್ನು ನೀಡಲಾಗಿದೆ ಎಂದು ವರದಿಯಾಗಿದೆ. ಪತ್ರಿಕಾ ಪ್ರಕಟಣೆಯಲ್ಲಿ ರೈತರ ಕುರಿತು ಕಂಗನಾ ರಣಾವತ್ ನೀಡಿದ ಹೇಳಿಕೆಗೂ ಮತ್ತು ಪಕ್ಷಕ್ಕೂ ಸಂಬಂಧವಿಲ್ಲ. ಬಿಜೆಪಿ ಸಹ ಕಂಗನಾ ಹೇಳಿಕೆಯನ್ನು ತೀವ್ರವಾಗಿ  ಖಂಡಸುತ್ತದೆ. ಕಂಗಾನ ಅವರಿಗೆ ಪಕ್ಷದ ರಾಜನೀತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡಲು ಯಾವುದೇ ಅನುಮತಿ ನೀಡಲ್ಲ ಮತ್ತು ಅಧಿಕೃತ ಹೇಳಿಕೆ ಬಿಡುಗಡೆಗೊಳಿಸುವಂತಿಲ್ಲ ಎಂದು ಬಿಜೆಪಿ ಹೇಳಿದೆ. 

ತ್ರಿವಳಿ ಖಾನ್‌ಗಳ ಟ್ಯಾಲೆಂಟ್ ಪ್ರದರ್ಶನಕ್ಕೆ ಹೊಸ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ ಕಂಗನಾ!

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಂಗನಾ ರಣಾವತ್, ಬಾಂಗ್ಲದೇಶದಲ್ಲಿ ಆಗಿರುವ ಪರಿಸ್ಥಿತಿ, ಭಾರತದಲ್ಲಿಯೂ ಆಗುವ ದಿನಗಳು ದೂರವಿಲ್ಲ. ನಮ್ಮ ಉನ್ನತ ನಾಯಕತ್ವತೆ ಬಲಿಷ್ಠವಾಗಿರದಿದ್ರೆ, ರೈತರ ಪ್ರತಿಭಟನೆ ಸಮಯದಲ್ಲಿ ಕೊಲೆಗಳು ಮತ್ತು ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿದ್ದವು. ರೈತರ ಪರವಾಗಿದ್ದ ಕಾನೂನುಗಳನ್ನು ಹಿಂಪಡೆದುಕೊಂಡಾಗ ಇಡೀ ದೇಶ ಶಾಕ್ ಆಗಿತ್ತು. ಆದರೂ ಇಂದಿಗೂ ರೈತರು ಅಲ್ಲಿಯೇ ಕುಳಿತಿದ್ದಾರೆ. ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ವಾಪಸ್‌ ತೆಗೆದುಕೊಂಡಿತು. ಇಲ್ಲದಿದ್ದರೆ ದೆಹಲಿ ಗಡಿಯಲ್ಲಿ ಕುಳಿತಿದ್ದ ದುಷ್ಕರ್ಮಿಗಳು ದೇಶದಲ್ಲಿ ಏನೂ ಬೇಕಾದರೂ ಮಾಡುತ್ತಿದ್ದರು ಎಂದು ಹೇಳಿದ್ದರು.

ಪ್ರತಿಭಟನಾನಿರತ ರೈತರು ಕೃಷಿ ಕಾನೂನುಗಳನ್ನು ಸರ್ಕಾರ ಕೃಷಿ ಬಿಲ್ ವಾಪಸ್ ತೆಗೆದುಕೊಳ್ಳುತ್ತೆ ಅಂತ ಎಂದಿಗ ಊಹಿಸಿರಲಿಲ್ಲ. ಅದೊಂದು ದೊಡ್ಡ ಪ್ಲಾನ್ ಆಗಿತ್ತು. ಇಂದು ಬಾಂಗ್ಲಾದೇಶದಲ್ಲಿ ಆದಂತೆ ಮಾಡುವ ಪ್ಲಾನ್ ಆಗಿತ್ತು. ನಮ್ಮ ದೇಶದಲ್ಲಿ ರೈತರ ಹೆಸರಿನಲ್ಲಿ ವಿದೇಶಿ ಶಕ್ತಿಗಳು ಕೆಲಸ ಮಾಡುತ್ತಿವೆ. ದೇಶಕ್ಕೆ ಏನಾದ್ರೂ ಆಗಲಿ ತಮಗೆ ಲಾಭ ಆಗಬೇಕೆಂದು ಕೆಲವರು ಯೋಚಿಸಿದ್ದರು. ದೇಶ ಅಭಿವೃದ್ಧಿಯಾದರೆ ಎಲ್ಲರ ಬೆಳವಣಿಗೆ  ಆದಂತೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು ಎಂದು ಕಂಗನಾ ರಣಾವತ್ ಹೇಳಿಕೆಯನ್ನು ನೀಡಿದ್ದರು.

ರಣಬೀರ್ ಕಪೂರ್ ನನ್ನ ಮನೆಗೆ ಬಂದು ಪ್ಲೀಸ್‌...? ಹೊಸ ವಿಷಯ ಬಿಚ್ಚಿಟ್ಟ ಕಂಗನಾ ರಣಾವತ್

Latest Videos
Follow Us:
Download App:
  • android
  • ios