Asianet Suvarna News Asianet Suvarna News

ಬಿಜೆಪಿಯಿಂದ ಮತ್ತೊಂದು ಸ್ಟ್ರೋಕ್, ಪೂಜಾ ಸ್ಥಳ ಕಾಯ್ದೆ ರದ್ದುಪಡಿಸಲು ರಾಜ್ಯಸಭೆಯಲ್ಲಿ ಆಗ್ರಹ!

ಆಯೋಧ್ಯೆ, ಕಾಶಿ, ಮಥುರಾ ಸೇರಿದಂತೆ ಹಲವು ಮಂದಿರ ಮಸೀದಿ ವಿವಾದಗಳಲ್ಲಿ ಮುಖ್ಯವಾಗಿ ಕೇಳಿಬರುತ್ತಿರುವ ಪ್ರಮುಖ ಕಾನೂನಾತ್ಮಕ ವಿಚಾರ ಎಂದರೆ ಪೂಜಾ ಸ್ಥಳ ಕಾಯ್ದೆ 1991. ಇದೀಗ ಈ ಕಾಯ್ದೆಯಿಂದ ಹಕ್ಕುಗಳ ಉಲ್ಲಂಘನೆಯಾಗಿದೆ. ಹೀಗಾಗಿ ಪ್ಲೇಸ್ ಆಫ್ ವರ್ಶಿಪ್ ಆ್ಯಕ್ಟ್ ರದ್ದು ಮಾಡುವಂತೆ ರಾಜ್ಯಸಭಾ ಸಂಸದ ರಾಜ್ಯಸಭೆಯಲ್ಲಿ ಆಗ್ರಹಿಸಿದ್ದಾರೆ.

BJP Rajya Sabha MP Harnath Singh demand repeal Places Of Worship Act 1991 ckm
Author
First Published Feb 5, 2024, 4:34 PM IST

ನವದೆಹಲಿ(ಫೆ.05) ಆಯೋಧ್ಯೆ ರಾಮ ಮಂದಿರ, ಕಾಶಿ ವಿಶ್ವನಾಥ ಮಂದಿರ, ಮಥುರಾ ಶ್ರೀಕೃಷ್ಣ ಮಂದಿರದ ಹೋರಾಟಕ್ಕೆ ಶತ ಶತಮಾನಗಳ ಇತಿಹಾಸವಿದೆ. ಸ್ವಾತಂತ್ರ್ಯ ಭಾರತದಲ್ಲೂ ಈ ಹೋರಾಟ ನಿರಂತರವಾಗಿ ನಡೆಯುತ್ತಾ ಬಂದಿದೆ. ಇದರ ಜೊತೆಗೆ ದೇಶದ ಹಲವು ಭಾಗದಲ್ಲಿ ಇದೇ ರೀತಿಯ ಮಂದಿರ ಮಸೀದಿ ವಿವಾದಗಳಿವೆ. ಆದರೆ ಕಾನೂನು ಹೋರಾಟದಲ್ಲಿ ಪ್ರಮುಖವಾಗಿ 1991ರ ಪೂಜಾ ಸ್ಥಳ ಕಾಯ್ದೆ ಹಿಂದೂ ಹೋರಾಟಕ್ಕೆ ಅಡ್ಡಿಯಾಗುತ್ತಿದೆ. ಇದೀಗ ಬಿಜೆಪಿ ಈ ಪೂಜಾ ಸ್ಥಳ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದೆ. ರಾಜ್ಯಸಭಾ ಸಂಸದ ಹರನಾಥ್ ಸಿಂಗ್ ರಾಜ್ಯಸಭೆಯಲ್ಲಿ ಈ ಕುರಿತ ಮಾತನಾಡಿದ್ದಾರೆ. ಪೂಜಾ ಸ್ಥಳ ಕಾಯ್ದೆ ಸಂವಿಧಾನದಲ್ಲಿರುವ ಸಮಾನತೆ ಹಾಗೂ ಜಾತ್ಯತೀತ ಹಕ್ಕುಗಳ ಉಲ್ಲಂಘಿಸಿದೆ ಎಂದು ಹರನಾಥ್ ಸಿಂಗ್ ಹೇಳಿದ್ದಾರೆ.

ರಾಮಜನ್ಮಭೂಮಿಯನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ 191ರ ಪೂಜಾ ಸ್ಥಳ ಕಾಯ್ದೆ ಅನ್ವಯವಾಗಲಿದೆ ಅನ್ನೋ ಷರತ್ತು ಹಕ್ಕುಗಳ ಉಲ್ಲಂಘನೆಯಾಗಿದೆ. ಪ್ರಮುಖವಾಗಿ ಈ ಕಾಯ್ದೆ ಹಿಂದೂ, ಜೈನ, ಬೌದ್ಧ, ಸಿಖ್‌ರ ಹಕ್ಕುಗಳಿಗೆ ವಿರುದ್ಧವಾಗಿದೆ. ಹೀಗಾಗಿ ಈ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಹರನಾಥ್ ಸಿಂಗ್ ಆಗ್ರಹಿಸಿದ್ದಾರೆ.  

1991ರ ಧಾರ್ಮಿಕ ಕಾಯ್ದೆ ರದ್ದಾಗುತ್ತಾ.? ರದ್ದಾದರೆ ಪರಿಣಾಮವೇನು..?

ಪಿವಿ ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಪೂಜಾ ಸ್ಥಳ ಕಾಯ್ದೆ ಜಾರಿಗೆ ತಂದಿತ್ತು. ಈ ಕಾಯ್ದೆ ಪ್ರಕಾರ 1947ರ ಆಗಸ್ಟ್ 15ಕ್ಕಿಂತ ಮುಂಚೆ ಯಾವ ಸ್ವರೂಪದಲ್ಲಿ ಪೂಜಾ ಸ್ಥಳಗಳು (ಮಂದಿರ, ಮಸೀದಿ, ಚಚ್‌ರ್‍, ಗುರುದ್ವಾರ, ಇತ್ಯಾದಿ) ಇದ್ದವೋ ಈಗಲೂ ಅದೇ ಸ್ವರೂಪದಲ್ಲೇ ಅವು ಇರಬೇಕು. ಅವುಗಳ ಸ್ವರೂಪ ಬದಲಾಯಿಸಕೂಡದು ಎಂದು 1991ರ ಪೂಜಾ ಸ್ಥಳ ಕಾಯ್ದೆ ಹೇಳತ್ತದೆ.

ಈ ಕಾಯ್ದೆಯನ್ನು ಪ್ರಶ್ನಿಸಿ ಈಗಾಗಲೇ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದೆ. ಮೂಲ ಸ್ವರೂಪದಲ್ಲಿರುವ, ಮಂದಿರದ ಮೇಲೆ ಮಸೀದಿ ಕಟ್ಟಿರುವ, ಮಂದಿರವನ್ನು ಮಸೀದಿಯಾಗಿ ಪರಿವರ್ತಿಸಿರುವ ಧಾರ್ಮಿಕ ಕೇಂದ್ರಗಳನ್ನು ಬದಲಿಸಲು ಅವಕಾಶ ನೀಡಬೇಕು. ಇತಿಹಾಸದಲ್ಲಿ ಆಗಿರುವ ತಪ್ಪನ್ನು ಸರಿಪಡಿಸಬೇಕು. ಹಿಂದೂಗಳಿಗೆ ಇರುವ ಏಕೈಕ ದೇಶದಲ್ಲಿ ನಮ್ಮ ಧಾರ್ಮಿಕ ಹಕ್ಕುಗಳಿಗೆ ಅವಕಾಶ ನೀಡಬೇಕು ಅನ್ನೋ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿದೆ.  

ಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಪೂಜಾ ಸ್ಥಳಗಳ ಕಾಯ್ದೆ ಅನ್ವಯವಾಗೋದಿಲ್ಲ ಎಂದ ಮಥುರಾ ಕೋರ್ಟ್!

Follow Us:
Download App:
  • android
  • ios