ಬಿಜೆಪಿ ಸಂಸದೀಯ ಸಭೆಯಗೆ ಆಗಮಿಸಿದ ಪ್ರಧಾನಿ ಮೋದಿಗೆ ಎಲ್ಲರೂ ಎದ್ದು ನಿಂತು ಚಪ್ಪಾಳೆ ಮೂಲಕ ಸ್ವಾಗತಿಸಿದ್ದಾರೆ. ಮೂರು ರಾಜ್ಯದ ಗೆಲುವಿನ ಬಳಿಕ ನಡೆಯುತ್ತಿರುವ ಸಭೆಯಲ್ಲಿ ಪ್ರಧಾನಿ ಮೋದಿ ಸಂಸದರು, ಕಾರ್ಯಕರ್ತರಲ್ಲಿ ವಿಶೇಷ ಮನವಿ ಮಾಡಿದ್ದಾರೆ.
ನವದೆಹಲಿ(ಡಿ.07) ಸಂಸತ್ ಭವನದಲ್ಲಿ ಆಯೋಜಿಸಿರುವ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯುತ್ತಿದೆ. ಸಭೆಗೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಂತೆ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಮೋದಿಯನ್ನು ಸ್ವಾಗತಿಸಿದ್ದಾರೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬಳಿಕ ನಡೆಯುತ್ತಿರುವ ಮೊದಲ ಬಿಜೆಪಿ ಸಂಸದೀಯ ಮಂಡಳಿ ಸಭೆ ಇದಾಗಿದೆ. ಮೋದಿಜಿ ಕಾ ಸ್ವಾಗತ ಎಂದು ಎಲ್ಲರೂ ಒಕ್ಕೊರಲಿನಿಂದ ಮೋದಿಗೆ ಸ್ವಾಗತ ನೀಡಿದ್ದಾರೆ. ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಂಸದರು, ಕಾರ್ಯಕರ್ತರಿಗೆ ಮಹತ್ವದ ಮನವಿ ಮಾಡಿದ್ದಾರೆ. ಮೋದಿಜಿ ಎಂದು ಕರೆಯಬೇಡಿ, ಮೋದಿ ಎಂದರೆ ಸಾಕು ಎಂದು ಮನವಿ ಮಾಡಿದ್ದಾರೆ.
ಮೋದಿಜಿ ಅಥವಾ ಆದರಣೀಯ ಮೋದಿಜಿ ಅನ್ನೋ ಪದಗಳು ನನ್ನ ಹಾಗೂ ಜನತೆ ನಡುವೆ ಅಂತರ ತರುವಂತೆ ಭಾಸವಾಗುತ್ತದೆ. ಮೋದಿ ಎಂದರೆ ಮತ್ತಷ್ಟು ಆತ್ಮೀಯತೆ ಕಾಣಿಸುತ್ತದೆ. ನಾನೊಬ್ಬ ಬಿಜೆಪಿ ಪಕ್ಷದ ಸಣ್ಣ ಕಾರ್ಯಕರ್ತ. ಜನರು ನನ್ನನ್ನು ಅವರ ಕುಟುಂಬ ಓರ್ವ ಸದಸ್ಯನಾಗಿ ಕಂಡಿದ್ದಾರೆ. ಆದರೆ ನನ್ನ ಹೆಸರಿನ ಹಿಂದೆ ಮುಂದೆ ಶ್ರೀ, ಆದರಣೀಯ ಜಿ ಅನ್ನೋ ಪದಗಳು ಸೇರಿಸುವುದರಿಂದ ಅಂತರ ಕಾಯ್ದುಕೊಂಡಂತೆ ಆಗಲಿದೆ. ಹೀಗಾಗಿ ಮೋದಿ ಎಂದರೆ ಸಾಕು ಎಂದು ಸಂಸದರು, ಕಾರ್ಯಕರ್ತರಿಗೆ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ನರೇಂದ್ರ ಮೋದಿ ಜನರ ನಾಡಿ ಮಿಡಿತ ಅರಿತ ಪ್ರಧಾನಿ, ದಿ.ಪ್ರಣಬ್ ಮುಖರ್ಜಿ ಅಭಿಪ್ರಾಯ ಹಂಚಿಕೊಂಡ ಪುತ್ರಿ!
ನಾನು ಕೂಡ ಬಿಜೆಪಿ ಕಾರ್ಯಕರ್ತರಲ್ಲಿ ಒಬ್ಬ ಎಂದು ಎಲ್ಲಾ ಸಂಸದರು ಪರಿಗಣಿಸಬೇಕು. ನಮ್ಮ ಕಾರ್ಯಕರ್ತರ ನಡುವೆ ಅಂತರವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ. ಬಿಜೆಪಿ ನನಗೆ ಕೆಲ ಜವಾಬ್ದಾರಿ ನೀಡಿದೆ. ಹೀಗೆ ಪ್ರತಿಯೊಬ್ಬ ಕಾರ್ಯಕರ್ತರಿಗೆ ಒಂದೊಂದು ಜವಾಬ್ದಾರಿ ನೀಡಿದೆ ಎಂದು ಮೋದಿ ಹೇಳಿದ್ದಾರೆ.
ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತಸಘಡದಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು ಇಡೀ ಕಾರ್ಯಕರ್ತರ ಶ್ರಮಕ್ಕೆ ಸಿಕ್ಕಿದ ಗೆಲುವು ಎಂದು ಮೋದಿ ಹೇಳಿದ್ದಾರೆ. ಬಿಜೆಪಿ ಒಂದು ತಂಡವಾಗಿ ಕೆಲಸ ಮಾಡಿದೆ. ಇದು ತಂಡಕ್ಕೆ ಸಿಕ್ಕಿದ ಗೆಲುವು ಎಂದು ಮೋದಿ ಹೇಳಿದ್ದಾರೆ.
ಕಾಂಗ್ರೆಸ್‌ನ ಒಡೆದು ಆಳುವ ನೀತಿ ಬಗ್ಗೆ ಎಚ್ಚರ, ಮೆಲ್ಟ್‌ಡೌನ್ ಇ ಆಜಂ ಟ್ವೀಟ್‌ಗೆ ಮೋದಿ ಪ್ರತಿಕ್ರಿಯೆ
ಇದೇ ಸಭೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸಘಡ ಮುಖ್ಯಮಂತ್ರಿ ಆಯ್ಕೆ ಕುರಿತು ಚರ್ಚೆ ನಡೆಸಲಾಗಿದೆ. ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ಇದೀಗ ನೂತನ ಸರ್ಕಾರ ರಚನೆ, ಮಂತ್ರಿ ಸ್ಥಾನ ಹಂಚಿಕೆ ಕುರಿತು ಚರ್ಚೆಗಳು ನಡೆಯುತ್ತಿದೆ.
