ಕಾಂಗ್ರೆಸ್‌ನ ಒಡೆದು ಆಳುವ ನೀತಿ ಬಗ್ಗೆ ಎಚ್ಚರ, ಮೆಲ್ಟ್‌ಡೌನ್ ಇ ಆಜಂ ಟ್ವೀಟ್‌ಗೆ ಮೋದಿ ಪ್ರತಿಕ್ರಿಯೆ
ಚುನಾವಣಾ ಫಲಿತಾಂಶದ ದಿನ ಸುದ್ದಿ ಮಾಧ್ಯಮವೊಂದರ ‘ಮೆಲ್ಟ್‌ಡೌನ್ ಇ ಆಜಂ’ ಎಂಬ ವಿಡಿಯೋ ಪ್ರಸಾರ ಮಾಡಿತ್ತು. ಅದರಲ್ಲಿ ಬಿಜೆಪಿ ಉತ್ತರ ಭಾರತದ ಜನರನ್ನು ಮರಳು ಮಾಡಿದೆ. ದಕ್ಷಿಣ ಭಾರತ ಜನರು ಕಾಂಗ್ರೆಸ್ಸನ್ನು ಗೆಲ್ಲಿಸಿ ಜಾಣತನ ಮೆರೆದಿದ್ದಾರೆ ಎಂದಿತ್ತು ಇದಕ್ಕೆ ಮೋದಿ ಟ್ವೀಟ್ ಮಾಡಿ ಉತ್ತರ ನೀಡಿದ್ದಾರೆ.
ನವದೆಹಲಿ (ಡಿ.6): ಕಾಂಗ್ರೆಸ್‌ನ ಒಡೆದು ಆಳುವ ನೀತಿಯ ಕುರಿತು ಎಚ್ಚರ ವಹಿಸುವಂತೆ ರಾಷ್ಟ್ರದ ಜನತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಚುನಾವಣಾ ಫಲಿತಾಂಶದ ದಿನ ಸುದ್ದಿ ಮಾಧ್ಯಮವೊಂದರ ‘ಮೆಲ್ಟ್‌ಡೌನ್ ಇ ಆಜಂ’ ಎಂಬ ವಿಡಿಯೋ ಪ್ರಸಾರ ಮಾಡಿತ್ತು. ಅದರಲ್ಲಿ ಬಿಜೆಪಿ ಉತ್ತರ ಭಾರತದ ಜನರನ್ನು ಮರಳು ಮಾಡಿದೆ. ಅದಕ್ಕೇ ಅಲ್ಲಿ ಬಿಜೆಪಿ ಗೆದ್ದಿದೆ. ದಕ್ಷಿಣ ಭಾರತ ಜನರು ಕಾಂಗ್ರೆಸ್ಸನ್ನು ಗೆಲ್ಲಿಸಿ ಜಾಣತನ ಮೆರೆದಿದ್ದಾರೆ ಎಂದು ಕೆಲ ಕಾಂಗ್ರೆಸ್ಸಿಗರು ಮಾತನಾಡುವ ಅಂಶಗಳಿದ್ದವು.
ಭಾರತದ 2 ಪ್ರಧಾನಿ, 2 ಸಂವಿಧಾನ, 2 ಧ್ವಜ ಪ್ರಮಾದ ಸರಿಪಡಿಸಿದ ಮೋದಿ, ಶಾ ಮಾತಿಗೆ ಸದನ ಸೈಲೆಂಟ್!
ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಮೋದಿ, ‘ಕಾಂಗ್ರೆಸ್ ಪಕ್ಷವು ಸದಾ ನಿರ್ಲಕ್ಷ್ಯ, ಸುಳ್ಳು, ಉಡಾಫೆ, ನಿರಾಶಾವಾದದಲ್ಲೇ ಸಂತೋಷವನ್ನು ಕಾಣಲಿ. ಆದರೆ ಜನತೆ ಅವರ ರಕ್ತದಲ್ಲಿ ಹುದುಗಿರುವ ಒಡೆದು ಆಳುವ ನೀತಿಯಿಂದ ಎಚ್ಚರದಿಂದಿರಬೇಕು. ಹಾಗೆಯೇ ಜನತೆಯು ಇದೇ ರೀತಿ ಮತ್ತಷ್ಟು ಅಹಂಕಾರವೆಂಬ ಮಂಜುಗಡ್ಡೆಯನ್ನು ಬುದ್ಧಿವಂತಿಕೆಯಿಂದ ಕರಗಿಸುವ ದಿನಗಳು ಮುಂದೆ ಬರಲಿವೆ’ ಎಂದು ಟ್ವೀಟ್ ಮಾಡಿದ್ದಾರೆ.
ಹಾಗೆಯೇ ಮೋದಿಯವರು ತಮ್ಮ ಟ್ವೀಟ್‌ನಲ್ಲಿ ಹಲವು ಎಮೋಜಿಗಳನ್ನು ಸಹ ಮೊದಲ ಬಾರಿಗೆ ಬಳಸಿದ್ದು, ಇದು ಬಿಜೆಪಿಯ ಆಕ್ರಮಣಕಾರಿ ಪ್ರಚಾರ ತಂತ್ರದ ಭಾಗವಾಗಿದೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.
ಮಹಾಯುದ್ಧಕ್ಕೆ ಮೆಗಾ ತಾಲೀಮು..ಮೋದಿ ಹ್ಯಾಟ್ರಿಕ್ ಪಕ್ಕನಾ..? ಲೋಕಯುದ್ಧದ ಮೇಲೆ ಪಂಚ ಕುರುಕ್ಷೇತ್ರದ ಎಫೆಕ್ಟ್ ಏನು..?