ಬಿಜೆಪಿ ಸಂಸದ ಉಮೇಶ್ ಯಾಧವ್ ಕಾರಿಗೆ ಬೆಂಗಾವಲು ವಾಹನ ಡಿಕ್ಕಿ ಸಚವರಿ ಎಡೈಗೈ ಮೂಳೆಗೆ ಪೆಟ್ಟು, ಸಣ್ಣ ಪುಟ್ಟ ಗಾಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ, ಶೀಘ್ರ ಚೇತರಿಕಿಗೆ ನಾಯಕರ ಪ್ರಾರ್ಥನೆ

ಕಲಬುರಗಿ(ಜ.13): ಬಿಜೆಪಿ ಸಂಸದ ಉಮೇಶ್ ಜಾಧವ್ ಕಾರು ಅಪಘಾಕ್ಕೀಡಾಗಿದೆ. ಸಂಸದ ಉಮೇಶ್ ಜಾಧವ್ ಹಾಗೂ ಕೃಷಿ ಸಚಿವ ಬಿಸಿ ಪಾಟೀಲ್ ಸಂಚರಿಸುತ್ತಿದ್ದ ವೇಳೆ ಬೆಂಗಾವಲು ವಾಹನ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಸಂಸದ ಉಮೇಶ್ ಜಾಧವ್ ಗಾಯಗೊಂಡಿದ್ದಾರೆ. ಕಲಬುರಗಿ ಪ್ರಮುಖ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಗಾಯಗೊಂಡ ಉಮೇಶ್ ಜಾಧವ್ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಕಾರ್ಯಕ್ರಮದ ನಿಮಿತ್ತ ಉಮೇಶ್ ಯಾದವ್ ಹಾಗೂ ಬಿಸಿ ಪಾಟೀಲ್ ತಮ್ಮ ಕಾರಿನಲ್ಲಿ ಪ್ರಯಾಣ ಆರಂಭಿಸಿದ್ದಾರೆ. ಆದರೆ ಕಲಬುರಗಿಯ ರಾಮಮಂದಿರ ಸರ್ಕಲ್ ಬಳಿ ಬೆಂಗಾವಲು ವಾಹನ ನೇರವಾಗಿ ಸಂಸದರ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಉಮೇಶ್ ಜಾಧವ್ ಎಡೈಗೈ ಮೂಳೆಗೆ ಬಲವಾದ ಪೆಟ್ಟುಬಿದ್ದಿದೆ. ಜೊತೆಗೆ ಇತರ ಸಣ್ಣ ಗಾಯಗಳಾಗಿದೆ. ಅದೃಷ್ಠವಶಾತ್ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಸಂಸದರು ಅಪಾಯದಿಂದ ಪಾರಾಗಿದ್ದಾರೆ. 

Kalaburagi Politics: ಸಂಸದ ಜಾಧವ್‌ ವಿರುದ್ಧ ಕ್ರಿಮಿನಲ್‌ ಖಟ್ಲೆ: ಪ್ರಿಯಾಂಕ್‌ ಗುಡುಗು

ಉಮೇಶ್ ಜಾಧವ್ ಕೈ ಎಕ್ಸ್‌ರೇ ತೆಗೆಯಲಾಗಿದೆ. ಬಳಿಕ ಚಿಕಿತ್ಸೆ ನೀಡಲಾಗಿದೆ. ಸಣ್ಣ ಗಾಯವಾಗಿರುವ ಕಾರಣ ಉಮೇಶ್ ಜಾಧವ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ವೇಳೆ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. 

ಸುದ್ದಿ ತಿಳಿದ ತಕ್ಷಣ ಸಚಿವ ಮುರುಗೇಶ್ ನಿರಾಣಿ, ಬೀದರ್ ಸಂಸದ ಭಗವಾನ್ ಖೂಬ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ. ಇನ್ನು ಬದ್ಧವೈರಿ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಕೂಡ ಉಮೇಶ್ ಜಾಧವ್ ಶೀಘ್ರ ಚೇತರಿಕೆಗೆ ಪಾರ್ಥಿಸಿದ್ದಾರೆ. 

ಸಂಸದ ಉಮೇಶ್ ಜಾಧವ್ ಪರಿಚಯ:
2019ರ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಉಮೇಶ್ ಜಿ ಜಾಧವ್ ಭರ್ಜರಿ ಗೆಲುವು ಸಾಧಿಸಿದ್ದಾರೆ. 2019ರ ಚುನಾವಣೆಗೂ ಮೊದಲು ಕಾಂಗ್ರೆಸ್ ನಾಯಕರಾಗಿದ್ದ ಉಮೇಶ್ ಜಿ ಜಾಧವ್ ಪಕ್ಷ ತೊರೆದು ಬಿಜೆಪಿ ಸೇರಿಕೊಂಡಿದ್ದರು. 

Scroll to load tweet…
Scroll to load tweet…