ಯೋಧರಿಗೆ ಸೆಲ್ಯೂಟ್: ವೈರಲ್ ವಿಡಿಯೋ ಬಾಲಕನ ಪೋಷಕರಿಗೆ ಆರ್.ಸಿ.ಯಿಂದ 2.5 ಲಕ್ಷ
ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು ಪುಟ್ಟ ಬಾಲಕನ ವೀಡಿಯೋ. ಇಂಡೋ ಟಿಬೇಟಿಯನ್ ಗಡಿ ಪೊಲೀಸ್ ಸಿಬ್ಬಂದಿಗೆ ಸೆಲ್ಯೂಟ್ ಮಾಡಿದ್ದ ಲಡಾಖ್ ಪೋರ.
ನವದೆಹಲಿ (ಅ.31): ಇಂಡೋ ಟಿಬೇಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿಗೆ ಸೆಲ್ಯೂಟ್ ಮಾಡಿದ ಲಡಾಖ್ ಬಾಲಕನ ಪೋಷಕರಿಗೆ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಶುಕ್ರವಾರ 2.5 ಲಕ್ಷ ರು. ನೀಡಿದ್ದಾರೆ. ರಸ್ತೆಯಲ್ಲಿ ಸಾಗುತ್ತಿದ್ದ ಐಟಿಬಿಪಿ ತಂಡಕ್ಕೆ ಸ್ಥಳೀಯ ಬಾಲಕ ನ್ಯಾಮ್‌ಗೆಲ್ ಎಂಬಾತ ಉತ್ಸಾಹದಿಂದ ಸೆಲ್ಯೂಟ್ ಮಾಡಿದ್ದ. ಈ ವಿಡಿಯೋವನ್ನು ಐಟಿಬಿಪಿ ಅ.11ರಂದು ಟ್ವೀಟ್ ಮಾಡಿತ್ತು. ಬಳಿಕ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
‘ಲಡಾಖ್ ಬಾಲಕ ನ್ಯಾಮ್‌ಗೆಲ್ ಇಡೀ ದೇಶದ ಪ್ರೀತಿಗೆ ಪಾತ್ರನಾಗಿದ್ದು, ಆತನ ದೇಶಪ್ರೇಮಕ್ಕೆ ಮೆಚ್ಚಿ ಫ್ಲಾಗ್ಸ್ ಆಫ್ ಹಾನರ್ ಫೌಂಡೇಷನ್‌ನಿಂದ ತಂದೆಯ ಹೆಸರಿನಲ್ಲಿ 2.5 ಲಕ್ಷ ರು.ನ ಚೆಕ್ ಅನ್ನು ನೀಡಿದ್ದೇನೆ’ ರಾಜೀವ್ ಚಂದ್ರಶೇಖರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚಳಿಗಾಲದಲ್ಲಿ ಸಜ್ಜಾಗುತ್ತಿದೆ ಲಡಾಖ್
ಲಡಾಖ್‌ನಲ್ಲಿ ಚೀನಾದೊಂದಿಗೆ ಬಿಕ್ಕಟ್ಟು ಮುಂದುವರೆಯುವ ಎಲ್ಲಾ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಚಳಿಗಾಲಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ಭಾರತೀಯ ಸೇನೆ ಮಾಡಿಕೊಳ್ಳುತ್ತಿದೆ. ಸರ್ವಋುತುವಿನಲ್ಲಿ ಬಳಕೆ ಆಗುವ ಸಲಕರಣೆಗಳು, -50 ಡಿಗ್ರಿ ತಾಪಮಾನವನ್ನೂ ಸಹಿಸಿಕೊಳ್ಳುವ ಉಡುಪುಗಳನ್ನು ಯೋಧರಿಗೆ ಪೂರೈಕೆ ಮಾಡಲಾಗುತ್ತಿದೆ.
Fact Check: ಪ್ಯಾಂಗಾಂಗ್ ಸರೋವರದ ಬಳಿ ಸ್ಥಾನಗಳನ್ನು ಕಬಳಿಸಿಕೊಂಡಿತ್ತಾ ಚೀನಾ
ಸೇನಾ ಸಿಬ್ಬಂದಿ ಸುರಕ್ಷಿತವಾಗಿಡಲು ಮತ್ತು ಚಳಿಗಾಲದಲ್ಲಿ ಎಚ್ಚರಿಕೆಯಿಂದ ಕಾವಲು ಕಾಯಲು ಅಗತ್ಯ ಇರುವ ಸಲಕರಣೆಗಳನ್ನು ಸೇನೆ ಬೃಹತ್ ಕಾರ್ಯಾಚರಣೆಯ ಮೂಲಕ ಲಡಾಖ್‌ನಲ್ಲಿ ಸಂಗ್ರಹಿಸುತ್ತಿದೆ. ಬೃಹತ್ ಪ್ರಮಾಣದ ಆಹಾರ ಸಾಮಗ್ರಿಗಳು, ಇಂಧನ, ಮದ್ದುಗುಂಡು, ಅಗತ್ಯ ಸಾಮಗ್ರಿಗಳನ್ನು ಲಡಾಖ್‌ಗೆ ಸಾಗಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸೇನೆ ಕೈಗೊಂಡ ಅತ್ಯಂತ ದೊಡ್ಡ ಸರಕು ಸಾಗಣೆ ರವಾನೆ ಕಾರ್ಯಾಚರಣೆ ನಡೆದಿದೆ.
ಯೋಧರಿಗೆ 3 ಪದರದ ಉಡುಪು:
ಎತ್ತರ ಪ್ರದೇಶದಲ್ಲಿ ಕಾವಲು ಕಾಯುವ ಯೋಧರಿಗೆ ಬಹು ಪದರದ ಹೊದಿಕೆ ಇರುವ ಉಡುಪುಗಳನ್ನು ಒದಗಿಸಲಾಗುವುದು. ಈ ಜಾಕೆಟ್‌ಗಳು ಯೋಧರನ್ನು ಸುರಕ್ಷಿತವಾಗಿ ಇರಿಸುವುದರ ಜೊತೆಗೆ ವೈರಿಗಳಿಂದ ರಕ್ಷಿಸಿಕೊಳ್ಳಲು ಕೂಡ ಸಹಾಯಕವಾಗಿದೆ. ಇದರ ಜೊತೆಗೆ ಇನ್ನೊಂದು ಜೋಡಿ ಪ್ಯಾಂಟ್ ಒದಗಿಸಲಾಗಿದೆ. ಪರ್ವತ ಏರಲು ವಿಶೇಷ ಶೂಗಳು ಹಾಗೂ ಬಹು ಪದರದ ಹ್ಯಾಂಡ್ ಗ್ಲೌಸ್ ವಿತರಿಸಲಾಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಲಡಾಕ್ ಗಡಿಯಲ್ಲಿ ಸೀಮಿತ ಯೋಧರನ್ನು ನಿಯೋಜಿಸಲಾಗುತ್ತಿತ್ತು. ಆದರೆ, ಈ ಬಾರಿ ಚೀನಾದ ಗಡಿ ಕ್ಯಾತೆಯ ಹಿನ್ನಲೆಯಲ್ಲಿ ಚಳಿಗಾಲದಲ್ಲಿಯೂ ಲಡಾಖ್‌ನ ಎತ್ತರ ಪ್ರದೇಶಗಳಲ್ಲಿ ಕಾವಲು ಕಾಯಲು ಭಾರತೀಯ ಸೇನೆ ಸರ್ವ ಸನ್ನದ್ಧವಾಗಿದೆ.