Asianet Suvarna News Asianet Suvarna News

ಹೊಡೆವ ಟಿಎಂಸಿ ಕಾರ್ಯಕರ್ತರಿಗೆ ಕಂಬಕ್ಕೆ ಕಟ್ಟಿ ತಿರುಗಿಸಿ ಕೊಡಿ: ಬಿಜೆಪಿ ಸಂಸದೆ

ಒಬ್ಬ ಟಿಎಂಸಿ ಕಾರ್ಯಕರ್ತ ನಿಮಗೆ (ಜನಸಾಮಾನ್ಯರಿಗೆ) ಹೊಡೆದ ಎಂದರೆ ಕಣ್ಣೀರು ಹಾಕಬೇಡಿ. ಆತನನ್ನು ಕಂಬಕ್ಕೆ ಕಟ್ಟಿ4-5 ಸಲ ಕಪಾಳಕ್ಕೆ ಹೊಡೆಯಿರಿ ಎಂದು ಬಿಜೆಪಿ ಸಂಸದೆ ಲಾಕೆಟ್‌ ಚಟರ್ಜಿ ಭಾನುವಾರ ಕರೆ ನೀಡಿದ್ದಾರೆ.

BJP MP Locket Chatterjee told Tie TMC workers to a pole and slap them if they beat you akb
Author
First Published Jan 16, 2023, 8:00 AM IST

ಕೋಲ್ಕತಾ: ಒಬ್ಬ ಟಿಎಂಸಿ ಕಾರ್ಯಕರ್ತ ನಿಮಗೆ (ಜನಸಾಮಾನ್ಯರಿಗೆ) ಹೊಡೆದ ಎಂದರೆ ಕಣ್ಣೀರು ಹಾಕಬೇಡಿ. ಆತನನ್ನು ಕಂಬಕ್ಕೆ ಕಟ್ಟಿ4-5 ಸಲ ಕಪಾಳಕ್ಕೆ ಹೊಡೆಯಿರಿ ಎಂದು ಬಿಜೆಪಿ ಸಂಸದೆ ಲಾಕೆಟ್‌ ಚಟರ್ಜಿ ಭಾನುವಾರ ಕರೆ ನೀಡಿದ್ದಾರೆ. ಇದು ಬಂಗಾಳ ರಾಜಕೀಯದಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಇತ್ತೀಚೆಗೆ ಬಿಜೆಪಿ ಕಾರ್ಯಕರ್ತ ಸಾಗರ್‌ ಬಿಸ್ವಾಸ್‌ ಎಂಬಾತ ‘ದೀದಿ ಸುರಕ್ಷಾ ಕವಚ’ ಎಂಬ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ರಸ್ತೆ ಸಮಸ್ಯೆ ಬಗ್ಗೆ ಕೇಳಿದಾಗ, ಆತನಿಗೆ ಟಿಎಂಸಿ ಕಾರ್ಯಕರ್ತನೊಬ್ಬ ಕಪಾಳಕ್ಕೆ ಹೊಡೆದಿದ್ದ. ಈ ಹಿನ್ನೆಲೆಯಲ್ಲಿ ಹೂಗ್ಲಿ ಸಂಸದೆ ಲಾಕೆಟ್‌, ಇಂಥ ಕೃತ್ಯಗಳಿಗೆ ಕಪಾಳಮೋಕ್ಷದ ಮೂಲಕವೇ ಪ್ರತೀಕಾರ ಕೈಗೊಳ್ಳಿ ಎಂದು ಕರೆ ನೀಡಿದ್ದಾರೆ. ಈ ಹೇಳಿಕೆಗೆ ಟಿಎಂಸಿ ಆಕ್ಷೇಪ ವ್ಯಕ್ತಪಡಿಸಿದೆ.

ಬಿಕಿನಿ ಹಾಕಿದ್ರೂ ಸಮಸ್ಯೆ, ಹಿಜಾಬ್ ಧರಿಸಿದ್ರೂ ಸಮಸ್ಯೆ; 'ಬೇಷರಂ ರಂಗ್' ವಿವಾದಕ್ಕೆ ಟಿಎಂಸಿ ಸಂಸದೆ ನುಸ್ರುತ್

ಟಿಎಂಸಿ ನಾಯಕ ಬಂಧನದ ಬೆನ್ನಲ್ಲೇ ಪರೇಶ್‌ ರಾವಲ್‌ಗೆ ಕೋಲ್ಕತ್ತಾ ಪೊಲೀಸರಿಂದ ಸಮನ್ಸ್‌..!

Follow Us:
Download App:
  • android
  • ios