ಜೈಪುರ[ಜ.25]: ಮಿಡತೆಗಳ ದಾಳಿಯಿಂದಾದ ಅಪಾರ ಕೃಷಿ ನಷ್ಟದಿಂದ ತತ್ತರಿಸಿರುವ ರಾಜಸ್ಥಾನದಲ್ಲಿ, ಬಿಜೆಪಿ ಶಾಸಕರೊಬ್ಬರು ವಿಧಾನಸಭೆಗೆ ಮಿಡತೆ ತುಂಬಿದ ಡಬ್ಬ ತಂದು ಪ್ರತಿಭಟಿಸಿದ್ದಾರೆ.

ಅಲ್ಲದೇ ಆದಷ್ಟು ಬೇಗ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಬಿಕಾನೇರ್‌ನ ನೋಖಾ ಕ್ಷೇತ್ರದ ಶಾಸಕ ಬಿಹಾರಿ ಲಾಲ್‌ ಈ ರೀತಿಯಾಗಿ ಪ್ರತಿಭಟಿಸಿದ್ದು, ಮಿಡತೆ ಹಾವಳಿ ತಡೆಯಲು ಸರ್ಕಾರ ಗಂಭೀರ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಪೌರತ್ವ ಕಾಯ್ದೆ ತಿದ್ದುಪಡಿಯ ಬಗ್ಗೆ ಹೆಚ್ಚು ಚಿಂತಾಕ್ರಾಂತವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

26 ವರ್ಷಗಳಲ್ಲೇ ಅತೀ ಹೆಚ್ಚು ಮಿಡತೆ ಹಾವಳಿಗೆ ಸಾವಿರಾರು ಎಕರೆ ಕೃಷಿ ನಾಶವಾಗಿದೆ.