ಗುಂಪೊಂದು ಬಿಜೆಪಿ ಶಾಸಕರೋರ್ವರನ್ನು ಥಳಿಸಿ ಅವರ ಬಟ್ಟೆಹರಿದು ನಗ್ನಗೊಳಿಸಿದ  ಘಟನೆಯೊಂದು  ನಡೆದಿದೆ. ಸುದ್ದಿಗೋಷ್ಠಿ ನಡೆಸಲು ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ. 

ಚಂಡೀಗಢ (ಮಾ.28):  ರೈತರ ಗುಂಪೊಂದು ಬಿಜೆಪಿ ಶಾಸಕರೋರ್ವರನ್ನು ಥಳಿಸಿ ಅವರ ಬಟ್ಟೆಹರಿದು ನಗ್ನಗೊಳಿಸಿದ ಅಮಾನವೀಯ ಘಟನೆ ಪಂಜಾಬ್‌ನ ಮುಕ್ತಸಾರ್‌ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. 

ಅಬೋಹರ್‌ ಕ್ಷೇತ್ರದ ಶಾಸಕ ಅರುಣ್‌ ನಾರಂಗ್‌ ರೈತರಿಂದ ಥಳಿತಕ್ಕೊಳಗಾದವರು. ಮುಕ್ತಸಾರ್‌ ಜಿಲ್ಲೆಯ ಮಲೌತ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಗಾಗಿ ನಾರಂಗ್‌ ಬಂದಿದ್ದರು. ಆದರೆ ಬಿಜೆಪಿ ನಾಯಕರ ಸುದ್ದಿಗೋಷ್ಠಿ ನಡೆಸಲು ಬಿಡಲ್ಲ ಎಂದು ಹಠಕ್ಕೆ ಬಿದ್ದ ರೈತರು ನಾರಂಗ್‌ ಮೇಲೆ ಮುಗಿಬಿದ್ದಿದ್ದಾರೆ. 

'ಬಂಗಾಳದಲ್ಲಿ ಯಾರೂ ಹೊರಗಿನವರಲ್ಲ, ಬಿಜೆಪಿ ಗೆದ್ದರೆ ಮಣ್ಣಿನ ಮಗನೇ ಸಿಎಂ'

ಈ ವೇಳೆ ಪೊಲೀಸರು ನೋಡನೋಡುತ್ತಿದ್ದಂತೆ ಶಾಸಕರ ಬಟ್ಟೆಹರಿದು ಹಾಕಿದ ರೈತರು ಅವರ ಮೇಲೆ ದಾಳಿ ನಡೆಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು, ಶಾಸಕರನ್ನು ಕಟ್ಟಡವೊಂದರ ಒಳಗೆ ಕರೆದೊಯ್ದು ಮಾನರಕ್ಷಣೆ ಮಾಡಿದರು.