Asianet Suvarna News Asianet Suvarna News

ಮುಲಾಯಂ ಸೊಸೆ ಅಪರ್ಣಾಗೆ ಗಿಫ್ಟ್‌ ಕೊಡುತ್ತಾ ಬಿಜೆಪಿ?

* ಉತ್ತರ ಪ್ರದೇಶದ ರಾಜಕೀಯ ಅಖಾಡದಲ್ಲಿ ಚುನಾವಣೆ ಸಂಬಂಧ ಪ್ರಮುಖ ಚರ್ಚೆ

* ಚುನಾವವಣೆಯಲ್ಲಿ ಸಿಗುತ್ತಾ ಮುಲಾಯಂ ಸಿಂಗ್ ಸೊಸೆಗೆ ಗಿಫ್ಟ್‌

* ಅಪರ್ಣಾಗೆ ಚಾನ್ಸ್‌ ಕೊಡುತ್ತಾ ಬಿಜೆಪಿ

BJP may give chance to Mulayam Singh yadav Daughter In law aparna yadav in mlc elections pod
Author
Bangalore, First Published Jun 6, 2022, 12:03 PM IST | Last Updated Jun 6, 2022, 12:03 PM IST

ಲಕ್ನೋ(ಜೂ.06): ಉತ್ತರ ಪ್ರದೇಶದ ರಾಜಕೀಯ ಅಖಾಡದಲ್ಲಿ ಚುನಾವಣೆ ಸಂಬಂಧ ಪ್ರಮುಖ ಚರ್ಚೆಗಳು ಆರಂಭವಾಗಿವೆ. ಹೌದು ಈಗ ಮುಲಾಯಂ ಅವರ ಕಿರಿಯ ಸೊಸೆ ಅಪರ್ಣಾ ಯಾದವ್‌ಗೆ ಬಿಜೆಪಿ ಎಸ್‌ಎಲ್‌ಸಿ ಟಿಕೆಟ್ ನೀಡಬಹುದು ಎಂಬ ಊಹಾಪೋಹಗಳು ಎದ್ದಿವೆ. 9 ಸ್ಥಾನಗಳಲ್ಲಿ ಬಿಜೆಪಿ MLC ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂಬುವುದು ಉಲ್ಲೇಖನೀಯ. ಮೂಲಗಳ ಪ್ರಕಾರ ಜೂನ್ 7ರೊಳಗೆ ಬಿಜೆಪಿಯ ಎಂಎಲ್ ಸಿ ಅಭ್ಯರ್ಥಿಗಳ ಪಟ್ಟಿ ಬರಬೇಕಿದೆ. 7 ಸ್ಥಾನಗಳಿಗೆ ಹೆಸರು ಅಂತಿಮಗೊಂಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಜೆಪಿ 7 ಎಂಎಲ್‌ಸಿ ಆಗಲಿದೆ

ಯೋಗಿ ಸರ್ಕಾರದಲ್ಲಿ, 7 ಸಚಿವರು ಎಂಎಲ್‌ಸಿಗಳಾಗುವುದು ಬಹುತೇಕ ಖಚಿತವಾಗಿದೆ. ಇದರಲ್ಲಿ ಭೂಪೇಂದ್ರ ಚೌಧರಿ, ಜೆಪಿ ಎಸ್ ರಾಥೋಡ್, ಕೇಶವ್ ಪ್ರಸಾದ್ ಮೌರ್ಯ, ನರೇಂದ್ರ ಕಶ್ಯಪ್, ಡ್ಯಾನಿಶ್ ಆಜಾದ್ ಮತ್ತು ಜಸ್ವಂತ್ ಸೈನಿ ಹೆಸರು ಸೇರಿದೆ. ಠಾಕೂರ್ ಸಮಾಜದಿಂದ ಬರುವ ಜೆಪಿಎಸ್ ರಾಥೋಡ್ ಪರಿಷತ್ತಿಗೆ ತೆರಳಲು ಸಜ್ಜಾಗಿದ್ದಾರೆ. 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಈ ಹಿನ್ನೆಲೆಯಲ್ಲಿ ಜಾತಿ, ರಾಜಕೀಯ ಸಮೀಕರಣಗಳನ್ನು ಮುಂದಿಟ್ಟುಕೊಂಡು ಮತದಾರರನ್ನು ತಲುಪುವ ಕಸರತ್ತಿನಲ್ಲಿಯೂ ಪಕ್ಷ ತೊಡಗಿದೆ. ಈ ಬಗ್ಗೆ ಪಕ್ಷ ಚಿಂತನೆ ನಡೆಸಿದೆ.

ವಿಧಾನ ಪರಿಷತ್ತಿನ 13 ಸ್ಥಾನಗಳಿಗೆ ಚುನಾವಣೆ

ವಿಧಾನ ಪರಿಷತ್ತಿನ 13 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಎಸ್ಪಿ 4 ಮತ್ತು ಬಿಜೆಪಿ 9 ಸ್ಥಾನ ಪಡೆಯುವುದು ಖಚಿತವಾಗಿದೆ. ಅದೇ ಸಮಯದಲ್ಲಿ, ನಾಮನಿರ್ದೇಶಿತ ಕೋಟಾದ ಆರು ಸ್ಥಾನಗಳಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅವಕಾಶ ಸಿಗುತ್ತದೆ. ಎರಡು ಸ್ಥಾನಗಳ ಉಪಚುನಾವಣೆಯಲ್ಲಿಯೂ ಬಿಜೆಪಿ ಗೆಲುವು ಬಹುತೇಕ ಖಚಿತ ಎಂದು ಪರಿಗಣಿಸಲಾಗಿದೆ.

ಯಾವ ಸದಸ್ಯರ ಅಧಿಕಾರಾವಧಿ ಕೊನೆಗೊಳ್ಳುತ್ತದೆ?

ಹಲವು ನಾಯಕರ ಅಧಿಕಾರಾವಧಿ ಇದೇ ಜುಲೈ 6ಕ್ಕೆ ಕೊನೆಗೊಳ್ಳಲಿದೆ. ಬಿಜೆಪಿಯಿಂದ ಕೇಶವ್ ಪ್ರಸಾದ್ ಮೌರ್ಯ, ಭೂಪೇಂದ್ರ ಸಿಂಗ್ ಮತ್ತು ಯೋಗಿ ಆದಿತ್ಯನಾಥ್ ಅವರಲ್ಲದೆ, ಕಾಂಗ್ರೆಸ್‌ನಿಂದ ದೀಪಕ್ ಸಿಂಗ್ ಅವರ ಅಧಿಕಾರಾವಧಿಯೂ ಕೊನೆಗೊಳ್ಳುತ್ತಿದೆ. ಇದಕ್ಕೂ ಮುನ್ನ ದೆಹಲಿಯಲ್ಲಿ ಬಿಜೆಪಿ ಯುಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಮತ್ತು ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಸಮ್ಮುಖದಲ್ಲಿ ಅಪರ್ಣಾ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇದಾದ ನಂತರ ಅವರು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಸಿಎಂ ಯೋಗಿ ಅವರನ್ನು ಭೇಟಿಯಾದರು.

Latest Videos
Follow Us:
Download App:
  • android
  • ios