ಫೆಬ್ರವರಿಯಲ್ಲಿ ಹೊಸ ಬಿಜೆಪಿ ಅಧ್ಯಕ್ಷರ ಆಯ್ಕೆ?: ರೇಸಲ್ಲಿ ಯಾರು?

ಹಾಲಿ ಅಧ್ಯಕ್ಷ ಜೆ.ಪಿ. ನಡ್ಡಾರ ಬಳಿಕ ಬಿಜೆಪಿ ನೂತನ ಅಧ್ಯಕ್ಷರನ್ನು ಮುಂದಿನ ಫೆಬ್ರವರಿಯ ಕೊನೆಯಲ್ಲಿ ಆಯ್ಕೆ ಮಾಡಲಾಗುವುದು ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ. 

BJP Likely to Get New National President by February 2025 gvd

ನವದೆಹಲಿ (ಡಿ.18): ಹಾಲಿ ಅಧ್ಯಕ್ಷ ಜೆ.ಪಿ. ನಡ್ಡಾರ ಬಳಿಕ ಬಿಜೆಪಿ ನೂತನ ಅಧ್ಯಕ್ಷರನ್ನು ಮುಂದಿನ ಫೆಬ್ರವರಿಯ ಕೊನೆಯಲ್ಲಿ ಆಯ್ಕೆ ಮಾಡಲಾಗುವುದು ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ. ಬಿಜೆಪಿಯ ನಿಯಮದ ಪ್ರಕಾರ ಪಕ್ಷದ ನೂತನ ಅಧ್ಯಕ್ಷರ ಆಯ್ಕೆಗೂ ಮೊದಲು ಅರ್ಧದಷ್ಟು ರಾಜ್ಯಗಳಲ್ಲಿ ಚುನಾವಣೆಗಳು ಸಂಪನ್ನಗೊಳ್ಳಬೇಕು. 

ಹೀಗಿರುವಾಗ, ಶೇ.60ರಷ್ಟು ಬಿಜೆಪಿ ರಾಜ್ಯ ಘಟಕಗಳ ಅಧ್ಯಕ್ಷರ ಅವಧಿ ಈಗಾಗಲೇ ಮುಕ್ತಾಯವಾಗಿದ್ದು, ಜನವರಿಯ ಮಧ್ಯದಲ್ಲಿ ಆ ಜಾಗಕ್ಕೆ ಹೊಸಬರನ್ನು ನೇಮಿಸಲಾಗುವುದು. ನಂತರ ಪಕ್ಷದ ಅಧ್ಯಕ್ಷರ ನೇಮಕ ನಡೆಯಲಿದೆ ಎಂದರು. ಪ್ರಸ್ತುತ ಕೇಂದ್ರ ಸಚಿವರಾಗಿರುವವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಇನ್ನೂ ಯಾವುದೂ ಅಂತಿಮವಾಗಿಲ್ಲ’ ಎಂದರು. ಪ್ರಸ್ತುತ ಕೇಂದ್ರ ಆರೋಗ್ಯ ಸಚಿವರಾಗಿರುವ ಜೆ.ಪಿ. ನಡ್ಡಾ ಅವರು 2020ರಿಂದ ಈ ಹುದ್ದೆಯಲ್ಲಿದ್ದಾರೆ.

ರೇಸಲ್ಲಿ ಯಾರು?: ಅಂದಹಾಗೆ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸುನಿಲ್‌ ಬನ್ಸಲ್‌ ಬಿಜೆಪಿ ಅಧ್ಯಕ್ಷ ಹುದ್ದೆಯ ರೇಸ್‌ನಲ್ಲಿರುವ ಪ್ರಮುಖರು.

ಕಾಂಗ್ರೆಸ್ ಪಾಲಿಗೆ ಸಂವಿಧಾನ ಖಾಸಗಿ ಆಸ್ತಿ ಇದ್ದಂತೆ: ಗೃಹ ಸಚಿವ ಅಮಿತ್ ಶಾ

ಏಕ ಚುನಾವಣೆ ಮಸೂದೆ ಮಂಡನೆ: ಏಕಕಾಲದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ಚುನಾವಣೆ ನಡೆಸುವ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ‘ಒಂದು ದೇಶ, ಒಂದು ಚುನಾವಣೆ’ ಕುರಿತ 2 ಸಾಂವಿಧಾನಿಕ ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದೆ. ಈ ಕುರಿತು ಆರಂಭವಾದ ಪರ-ವಿರೋಧ ಚರ್ಚೆ ಅಪೂರ್ಣಗೊಂಡಿದ್ದು, ಸರ್ಕಾರವು ಇದನ್ನು ತಕ್ಷಣವೇ ಅಂಗೀಕರಿಸಲು ಮುಂದಾಗದೇ ಜಂಟಿ ಸದನ ಸಮಿತಿಗೆ (ಜೆಪಿಸಿ) ಕಳಿಸುವ ಇರಾದೆ ವ್ಯಕ್ತಪಡಿಸಿದೆ. ಬುಧವಾರ ಈ ಬಗ್ಗೆ ನಿರ್ಧಾರ ಆಗುವ ಸಾಧ್ಯತೆ ಇದ್ದು ಬಳಿಕ ಜೆಪಿಸಿ ರಚನೆ ಆಗಲಿದೆ. ಜೆಪಿಸಿಯಲ್ಲಿ 31 ಸಂಸದರು (21 ಲೋಕಸಭೆ, 10 ರಾಜ್ಯಸಭೆ) ಇರಲಿದ್ದು ಬಿಜೆಪಿಗರೇ ಅಧ್ಯಕ್ಷ ಆಗುವ ಸಂಭವವಿದೆ. 90 ದಿನಗಳಲ್ಲಿ ಇದು ವರದಿ ನೀಡಬೇಕು.

ಇದು ಅನಗತ್ಯ ಚುನಾವಣಾ ಖರ್ಚು ವೆಚ್ಚ ತಪ್ಪಿಸಲು ಹಾಗೂ ನೀತಿಸಂಹಿತೆ ಹೇರಿಕೆಯಿಂದ ಆಗುವ ಅಭಿವೃದ್ಧಿ ಚಟುವಟಿಕೆಗಳ ಸ್ಥಾಗಿತ್ಯವನ್ನು ತಡೆಯಲು ಸಹಕಾರಿ ಎಂದಿರುವ ಕೇಂದ್ರ ಸರ್ಕಾರ, ಇದರಿಂದ ಸಂವಿಧಾನಕ್ಕೆ ಯಾವುದೇ ಹಾನಿ ಆಗುವುದಿಲ್ಲ ಎಂದು ಸಮರ್ಥಿಸಿಕೊಂಡಿದೆ. ಆದರೆ ಮಸೂದೆ ವಿರೋಧಿಸಿರುವ ಪ್ರತಿಪಕ್ಷಗಳು, ಇದನ್ನು ಸಂವಿಧಾನ ವಿರೋಧಿ ಎಂದು ಕರೆದಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಕಿಡಿ ಕಾರಿವೆ. ಜೊತೆಗೆ ಕರಡು ವರದಿಯನ್ನು ಜೆಪಿಸಿಗೆ ವಹಿಸುವಂತೆ ಒತ್ತಾಯಿಸಿದರು.

Latest Videos
Follow Us:
Download App:
  • android
  • ios