ಭೋಪಾಲ್(ಸೆ.28): ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆ ಉಮಾ ಭಾರತಿ ಶನಿವಾರ ಕೊರೋನಾ ಸೋಂಕು ದೃಢಪಟ್ಟಿದೆ. ಅವರು ಗುರುವಾರ ಬದ್ರೀನಾಥಕ್ಕೆ ತೆರಳಿದ್ದರು. ಲಭ್ಯವಾದ ಮಾಹಿತಿ ಅನ್ವಯ ಉಮಾ ಭಾರತಿ ಕಳೆದ ವಾರ ಉತ್ತರಾಖಂಡದ ಮಂತ್ರಿ ಧನ್‌ಸಿಂಗ್ ರಾವತ್ ಜೊತೆ ಕೇದಾರನಾಥ ಯಾತ್ರೆಗೆ ತೆರಳಿದ್ದರು. ಇದಾದ ಬಳಿಕ ರಾವತ್‌ಗೆ ಕೊರೋನಾ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಹೀಗಿರುವಾಗ ಕೆಲ ದಿನಗಳವರೆಗೆ ಪ್ರಯಾಣ ಕೈಗೊಳ್ಳದಂತೆ ಉಮಾ ಭಾರತಿಗೆ ವೈದ್ಯರು ಸಲಹೆ ನೀಡಿದ್ದರು. ಹೀಗಿದ್ದರೂ ಅವರು ಬದ್ರೀನಾಥಕ್ಕೆ ಪ್ರಯಾಣ ಕೈಗೊಂಡಿದ್ದರು. 

ಹೀಗಿರುವಾಗಲೇ ಶನಿವಾರ ತಡರಾತ್ರಿ ಉಮಾ ಭಾರತಿ ಟ್ವೀಟ್ ಒಂದನ್ನು ಮಾಡಿ ಗುಡ್ಡಗಾಡು ಪ್ರಯಾಣದ ಕೊನೆಯ ದಿನ ಅವರು ಅಧಿಕಾರಿಗಳ ಬಳಿ ತನ್ನ ಕೊರೋನಾ ಟೆಸ್ಟ್ ಮಾಡಲು ಮನವಿ ಮಾಡಿದ್ದಾರೆ. ಅವರಿಗೆ ಮೂರು ದಿನಗಳಿಂದ ಕೊಂಚ ಜ್ವರ ಕಾಣಿಸಿಸಿಕೊಂಡಿತ್ತು. ತಾನು ಪ್ರಯಾಣದ ವೇಳೆ ಸಾಮಾಜಿಕ ಅಂತರ ಸೇರಿ ಎಲ್ಲಾ ನಿಯಮಗಳನ್ನು ಪಾಲಿಸಿದ್ದೆ ಆದರೂ ಸೋಂಕು ಕಾಣಿಸಿಕೊಂಡಿದೆ ಎಂದಿದ್ದಾರೆ.

ಉಮಾ ಭಾರತಿ ಜೊತೆ ತೆರಳಿದ್ದ ಧನ್‌ಸಿಂಗ್ ರಾವ್‌ಗ ಕೊರೋನಾ

ಸ್ಯ ಉಮಾ ಭಾರತಿಜೊತೆ ಪ್ರಯಾಣಿಸಿದ್ದ ಉತ್ತರಾಖಂಡ್‌ನ ಸಚಿವ ಧನ್‌ಸಿಂಗ್‌ಗೂ ಕೊರೋನಾ ಸೋಂಕು ದೃಢಪಟ್ಟಿದೆ.