ಬಿಹಾರ(ನ.24); ತಂತ್ರಜ್ಞಾನಗಳಂತೆ ರಾಜಕೀಯವೂ ಕೂಡ ಪ್ರತಿ ವರ್ಷ ಅಪ್‌ಗ್ರೇಡ್ ಆಗುತ್ತದೆ. ಹಿಂದೆ ಚುನಾವಣೆ ವರೆಗಿದ್ದ ರಾಜಕೀಯ ಮೇಲಾಟಗಳು, ಫಲಿತಾಂಶಕ್ಕೆ ಅಂತ್ಯಗೊಳ್ಳುತ್ತಿತ್ತು. ಬಳಿಕ ಫಲಿತಾಂಶ ಮುಗಿದು ಪ್ರಮಾಣವಚನದ ವರೆಗೂ ಅಧಿಕಾರಕ್ಕಾಗಿ ತಂತ್ರಗಳು ನಡೆಯುತ್ತಿತ್ತು. ಇದೀಗ ಅಧಿಕಾರ ವಹಿಸಿ ವರ್ಷ ಪೂರ್ತಿಗೊಳಿಸಿದರೂ ಅಧಿಕಾರಕ್ಕಾಗಿ ವಿರೋಧ ಪಕ್ಷಗಳು ನಿರಂತರ ಹೋರಾಟ ನಡೆಸುತ್ತಲೇ ಇರುತ್ತದೆ. ಇದೀಗ ಬಿಹಾರದಲ್ಲಿ  ರಾಜಕೀಯ ಚದುರಂಗದಾಟ ಶುರುವಾಗಿದೆ.

ಬಿಹಾರದಲ್ಲಿ ಅಚ್ಚರಿಯ ಬೆಳವಣಿಗೆ, ನಿತೀಶ್‌ಗೆ ‘ಮಹಾಗಠಬಂಧನ’ ಆಫರ್!.

ಎನ್‌ಡಿಎ ಕೂಟದ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬಿಹಾರದ ರಾಜಕೀಯ ಚುರುಕುಕೊಂಡಿದೆ. ಇದೀಗ ರಂಗಕ್ಕೆ ಲಾಲೂ ಪ್ರಸಾದ್ ಯಾದವ್ ಸದ್ದಿಲ್ಲದೇ ಎಂಟ್ರಿಕೊಟ್ಟಿದ್ದಾರೆ. ಬಿಜೆಪಿ ನಾಯಕರಿಗೆ ಮಂತ್ರಿಗಿರಿ ಆಸೆ ತೋರಿಸಿ ಸೆಳೆಯುವ ಯತ್ನ ಮಾಡುತ್ತಿದ್ದಾರೆ. ಸ್ವತಃ ಲಾಲೂ ಪ್ರಸಾದ್ ಯಾದವ್ ಫೋನ್ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಬಹಿರಂಗ ಪಡಿಸಿದ್ದಾರೆ.

ಸುಶೀಲ್ ಮೋದಿ ಅನುಪಸ್ಥಿತಿ ಕಾಡಲಿದೆ, ಆದರೆ ಇದು ಬಿಜೆಪಿ ನಿರ್ಧಾರ: ನಿತೀಶ್ ಕುಮಾರ್

ಲಾಲೂ ಪ್ರಸಾದ್ ಯಾದವ್ ರಾಂಚಿಯಿಂದ NDA ಶಾಸಕರಿಗೆ ಫೋನ್ ಕಾಲ್ ಮಾಡುತ್ತಿದ್ದಾರೆ (8051216302). ಪ್ರತಿಯೊಬ್ಬರಿಗೆ ಮಂತ್ರಿ ಸ್ಥಾನದ ಭರವಸೆ ನೀಡುತ್ತಿದ್ದಾರೆ.  NDA ಶಾಸಕರಿಗೆ ಕರೆ ಬಂದ ದೂರವಾಣಿ ಸಂಖ್ಯೆಗೆ ನಾನೇ ನೇರವಾಗಿ ಫೋನ್ ಮಾಡಿದಾಗ ಲಾಲೂ ಯಾದವ್ ಕರೆ ಸ್ವೀಕರಿಸಿದ್ದಾರೆ. ಈ ವೇಳೆ ಜೈಲಿನಿಂದ ಕೊಳಕು ರಾಜಕೀಯ ಮಾಡಬೇಡಿ, ಇದರಿಂದ ನಿಮಗೆ ಯಶಸ್ಸು ಸಿಗುವುದಿಲ್ಲ ಎಂದು ಸುಶೀಲ್ ಕುಮಾರ್ ಮೋದಿ ಟ್ವೀಟ್ ಮಾಡಿದ್ದಾರೆ.

 

ಬಿಹಾರದಲ್ಲಿ NDA ಅಧಿಕಾರಕ್ಕೇರಿದ್ದರೂ ರಾಜಕೀಯ ಇನ್ನು ಮುಗಿದಿಲ್ಲ. ಮುಂದಿನ ದಿನಗಳಲ್ಲಿ ಇದು ಹೊಸ ತಿರುವು ಪಡೆದರೂ ಅಚ್ಚರಿಯಿಲ್ಲ.