Asianet Suvarna News Asianet Suvarna News

ಮಹಾ ಸರ್ಕಾರ ಸುತ್ತಿಕೊಂಡ ಸಾರಿಗೆ ನೌಕರನ ಆತ್ಮಹತ್ಯೆ ಪ್ರಕರಣ; ತಕ್ಷಣ ವೇತನ ನೀಡಲು ಫಡ್ನವಿಸ್ ಆಗ್ರಹ!

  • ಸಂಬಳ ಸಿಗದೆ ಆರ್ಥಕ ಸಂಕಷ್ಟಕ್ಕೆ  ಸಿಲುಕಿ ಮಹಾರಾಷ್ಟ್ರ ಸಾರಿಗೆ ನೌಕರ ಆತ್ಮಹತ್ಯೆ
  • ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಪ್ರತಿಭಟನೆ
  • ಕಳೆದ 9 ತಿಂಗಳಲ್ಲಿ ಮೂರನೇ ಆತ್ಮಹತ್ಯೆ ಪ್ರಕರಣ
BJP leader Devendra Fadnavis urge CM Uddhav Thackeray resolve MSRTC financial crisis ckm
Author
Bengaluru, First Published Aug 30, 2021, 7:59 PM IST
  • Facebook
  • Twitter
  • Whatsapp

ಮುಂಬೈ(ಆ.30): ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸಾರಿಗೆ ನೌಕರನ ಆತ್ಮಹತ್ಯೆ ಪ್ರಕರಣ. ಸಂಬಳ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಚಾಲಕ ಕಮಲೇಶ್ ಬಿಕಾನ್ ಬಿಡ್ಸೆ ಆತ್ಮಹತ್ಯೆಗೆ ಶರಣಾಗಿದ್ದರು. ಹಲವು ನೌಕರರು ಸಂಬಳ ಸಿಗದೆ ಪರದಾಡುತ್ತಿದ್ದಾರೆ. ಈ ಸಮಸ್ಯೆಯನ್ನು ಶೀಘ್ರವೇ ಇತ್ಯರ್ಥಗೊಳಿಸಲು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮಹಾರಾಷ್ಟ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

MSRTC ಬಸ್ ಕಂಡಕ್ಟರ್ ಆತ್ಮಹತ್ಯೆ, ಸಂಬಳ ನೀಡದ ಉದ್ಧವ್ ಸರ್ಕಾರ ವಿರುದ್ಧ ಆಕ್ರೋಶ!

ಚಾಲಕ ಕಮಲೇಶ್ ತಮ್ಮ ಮನೆಯಲ್ಲಿ ಶುಕ್ರವಾರ(ಆ.27)ರಂದು ನೇಣಿಗೆ ಶರಣಾಗಿದ್ದರು. ಡೆತ್‌ನೋಟ್‌ನಲ್ಲಿ ಕಡಿಮೆ ಸಂಬಳ, ಸರಿಯಾಗಿ ವೇತನ ಕೈಗೆ ಸಿಗದಿರುವುದೇ ಆತ್ಮಹತ್ಯೆಗೆ ಕಾರಣ ಎಂದು ಉಲ್ಲೇಖಿಸಿದ್ದಾರೆ. ಹೀಗಾಗಿ ಈ ಆತ್ಮಹತ್ಯೆ ಪ್ರಕರಣ ನೇರವಾಗಿ ಉದ್ಧವ್ ಠಾಕ್ರೆ ಸರ್ಕಾರವನ್ನು ಸುತ್ತಿಕೊಂಡಿದೆ. ಇತ್ತ ಸಾರಿಗೆ ನೌಕರರು ಇಂದು(ಆ.30) ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

 

ಮಹಾರಾಷ್ಟ್ರ ಸರ್ಕಾರದ ನಿರ್ಲಕ್ಷ್ಯದಿಂದ ಸಾರಿಗೆ ನೌಕರರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಿಯಾದ ಸಮಯಕ್ಕೆ ಸಂಬಂಳ ಸಿಗದೆ ನೌಕರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು.  ತಕ್ಷಣವೇ ನೌಕರರಿಗೆ ಸಂಬಳ ನೀಡಬೇಕು. ಮುಂದಿನ ದಿನಗಳಲ್ಲಿ ವೇತನ ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದು ಬೆಜಿಪಿ ನಾಯಕ ದೇವೇಂದ್ರ ಫಡ್ನವಿಸ್ ಆಗ್ರಹಿಸಿದ್ದಾರೆ.

9 ಲಕ್ಷ ರು. ರಕ್ಷಿಸಲು 9 ತಾಸು ಬಸ್‌ ಮೇಲೆ ಕುಳಿತರು!

ಕೊರೋನಾ ವೈರಸ್ ಕಾರಣ ದೇಶದ ಹಲವು ಸರ್ಕಾರಿ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದೆ. ಹಲವು ರಾಜ್ಯದಲ್ಲಿ ನೌಕರರ ಆತ್ಮಹತ್ಯಾ ಪ್ರಕರಣಗಳು ನಡೆದಿದೆ. ಅಷ್ಟೇ ಬೇಗದಲ್ಲಿ ಇತರರ ರಾಜ್ಯಗಳು ಹೆಚ್ಚಿನ ಅನುದಾನ ನೀಡಿ ಸಮಸ್ಯೆ ಸರಿಪಡಿಸುವ ಪ್ರಯತ್ನ ಮಾಡಿದೆ. ಆದರೆ ಮಹಾರಾಷ್ಟ್ರ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ.

ಕಳೆದ 9 ತಿಂಗಳಲ್ಲಿ ಮಹಾರಾಷ್ಟ್ರದ ಮೂವರು ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದುವರೆಗೆ ಎಚ್ಚೆತ್ತುಕೊಳ್ಳದ ಉದ್ಧವ್ ಠಾಕ್ರೆ ಸರ್ಕಾರವನ್ನು ದೇವೇಂದ್ರ ಫಡ್ನವಿಸ್ ಪ್ರಶ್ನಿಸಿದ್ದಾರೆ.
 

Follow Us:
Download App:
  • android
  • ios