ಮುಂಬೈ(ನ.09):  ಕೊರೋನಾ ವೈರಸ್ ಕಾರಣ ಮಹಾರಾಷ್ಟ್ರ ಸಾರಿಗೆ ಇಲಾಖೆ ಕಳೆದ 3 ತಿಂಗಳಿನಿಂದ ಸಿಬ್ಬಂದಿಗಳಿಗೆ ಸಂಬಳ ನೀಡಿಲ್ಲ. ಸಾರಿಗೆ ಇಲಾಖೆ ನಷ್ಟದಲ್ಲಿದೆ ಎಂಬ ಕಾರಣ ನೀಡಿ ತಿಂಗಳ ಸಂಬಳ ಮುಂದೂಡುತ್ತಿದೆ. ಇದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ ಕಂಡ್ಟರ್ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಾರದ ಸ್ಕಾಲರ್‌ಶಿಪ್, ಡೇಟಾ ಪ್ಯಾಕ್ ಹಾಕಲು ದುಡ್ಡಿಲ್ಲ.. ಟಾಪರ್ ಸುಸೈಡ್

ಕಳದ 3 ತಿಂಗಳನಿಂದ ಸಂಬಳ ನೀಡದೆ ಸತಾಯಿಸಿದ ಉದ್ದವ್ ಠಾಕ್ರೆ ಸರ್ಕಾರವ ಸಾವಿಗೆ ಕಾರಣ ಎಂದು ಡೆತ್ ನೋಟ್‌ನಲ್ಲಿ ಹೇಳಿಕೊಂಡಿದ್ದಾರೆ. ಈ ಕುರಿತು ಕಂಡಕ್ಟರ್ ಸಹೋದರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.  

ಜಲಗಾಂವ್ ಡಿಪ್ಪೋದಲ್ಲಿ ಕೆಲಸ ನಿರ್ವಹಿಸುತ್ತಿದ್ದ ತನ್ನ ಪುತ್ರನಿಗೆ ಕಡಿಮೆ ಸಂಬಳ ಇತ್ತು. ಕಳೆದ 3 ತಿಂಗಳಿನಿಂದ ಸಂಬಳ ನೀಡಿಲ್ಲ. ಮನನೊಂದು, ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಂಡಕ್ಟರ್ ತಂದೆ ಹೇಳಿದ್ದಾರೆ.

ದೀಪಾವಳಿಗೂ ಮೊದಲು ಮಹಾರಾಷ್ಟ್ರ ಸಾರಿಗೆ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ಸಂಬಳ ನೀಡಲಾಗುವುದು ಎಂದು ಸಾರಿಗೆ ಸಚಿವ ಅನಿಲ್ ಪರಬ್ ಭರವಸೆ ನೀಡಿದ್ದಾರೆ. ಸಂಬಳ ವಿಳಂಬ ಕಾರಣಕ್ಕೆ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಜೊತೆಗೆ ಯಾರು ನಿರಾಶರಾಗಬೇಡಿ ಎಂದು ಅನಿಲ್ ಪರಬ್ ಮನವಿ ಮಾಡಿದ್ದಾರೆ.