ಪುದುಚೇರಿಯಲ್ಲಿ ರಾಜೀವ್, ಸುರಾನಾ ಸಂಘಟಿಸಿದ್ದ ಬಿಜೆಪಿಗೆ ಜಯ!

ಕರ್ನಾಟಕದ ರಾಜ್ಯಸಭಾ ರಾಜೀವ್‌ ಚಂದ್ರಶೇಖರ್‌ ಹಾಗೂ ಕರ್ನಾಟಕ ಬಿಜೆಪಿ ಮುಖಂಡ ನಿರ್ಮಲ್‌ಕುಮಾರ್‌ ಸುರಾನಾ| ಪುದುಚೇರಿಯಲ್ಲಿ ಬಿಜೆಪಿ ಸಂಘಟಿಸಿದ ರಾಜೀವ್‌, ಸುರಾನಾ

BJP Lead By Rajeev Chandrasekhar And Nirmal Kumar Surana Wins In Pudicherry pod

ಪುದುಚೇರಿ(ಮೇ.03): ಕರ್ನಾಟಕದ ರಾಜ್ಯಸಭಾ ರಾಜೀವ್‌ ಚಂದ್ರಶೇಖರ್‌ ಹಾಗೂ ಕರ್ನಾಟಕ ಬಿಜೆಪಿ ಮುಖಂಡ ನಿರ್ಮಲ್‌ಕುಮಾರ್‌ ಸುರಾನಾ ಅವರು ಪುದುಚೇರಿಯಲ್ಲಿ ಎನ್‌ಆರ್‌-ಕಾಂಗ್ರೆಸ್‌-ಬಿಜೆಪಿ-ಅಣ್ಣಾಡಿಎಂಕೆ ಕೂಟ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಕರ್ತರು.

ರಾಜೀವ್‌ರನ್ನು ಪುದುಚೇರಿಯ ಸಹ ಉಸ್ತುವಾರಿಯನ್ನಾಗಿ ಹಾಗೂ ಸುರಾನಾ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಈ ವೇಳೆ ಕಾಂಗ್ರೆಸ್‌ ಆಡಳಿತ ವೈಖರಿಗೆ ಆ ಪಕ್ಷದ ಸಾಕಷ್ಟುಶಾಸಕರು ಬೇಸತ್ತಿದ್ದನ್ನು ಗಮನಿಸಿದ ಈ ಬಿಜೆಪಿ ನಾಯಕರು, ಇವರನ್ನು ಬಿಜೆಪಿಯತ್ತ ಸೆಳೆಯುವಲ್ಲಿ ಯಶಸ್ವಿಯಾದರು. ಇದು ಬಿಜೆಪಿ ಗೆಲುವಿಗೆ ಪ್ರಮುಖ ಕಾರಣವಾಗಿದೆ.

ಅಲ್ಲದೆ, ಚುನಾವಣೆ ನಡೆದ ವೇಳೆ ಪುದುಚೇರಿ ಸುತ್ತಿದ ಈ ನಾಯಕರು ಪಕ್ಷ ಸಂಘಟಿಸಿದರು. ಇದರಿಂದಾಗಿ ಅಷ್ಟುಪ್ರಬಲ ನೆಲೆ ಹೊಂದಿರದ ಪಕ್ಷವು ಪುದುಚೇರಿಯಲ್ಲಿ ಪ್ರಬಲವಾಗಿ ಬೆಳೆಯಲು ನಾಂದಿ ಹಾಡಿತು.

Latest Videos
Follow Us:
Download App:
  • android
  • ios