ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ವಾರ್ಷಿಕ ಎರಡು ಉಚಿತ ಎಲ್‌ಪಿಜಿ, ಮಾಸಿಕ ₹2500 ನೆರವು, ಹಿರಿಯ ನಾಗರಿಕರಿಗೆ ₹3000 ಪಿಂಚಣಿ, ಮತ್ತು ರಾಜ್ಯದಲ್ಲಿ ಏಮ್ಸ್‌ ಸ್ಥಾಪನೆಯಂತಹ ಪ್ರಮುಖ ಭರವಸೆಗಳನ್ನು ನೀಡಲಾಗಿದೆ. 

- ಕೇರಳ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಿರುವನಂತಪುರಂ (ಏ.1): ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಮಂಗಳವಾರ ಇಲ್ಲಿ ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಬಿನ್‌ ನವೀನ್, ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಹಾಗೂ ಪಕ್ಷದ ಹಿರಿಯ ನಾಯಕರ ಸಮಕ್ಷಮದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.ಪ್ರಮುಖ ಅಂಶಗಳು: ಅರ್ಹ ಕುಟುಂಬಳಿಗೆ ವಾರ್ಷಿಕ ಎರಡು ಉಚಿತ ಎಲ್‌ಪಿಜಿ, ಕುಟುಂಬಗಳಿಗೆ ದಿನಸಿ ಮತ್ತು ಔಷಧ ಖರೀದಿಗೆ ಮಾಸಿಕ 2500 ರು. ಮೊತ್ತದ ರೀಚಾರ್ಜ್‌ ಕಾರ್ಡ್‌, ರಾಜ್ಯದಲ್ಲಿ ಏಮ್ಸ್‌ ಸ್ಥಾಪನೆ, ಬಡ ಮಹಿಳೆಯರು, ವಿಧವೆಯರು, 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾಸಿಕ 3000 ರು.ಗಳ ಪಿಂಚಣಿ, ಸೇರಿದಂತೆ ಹಲವು ಕಲ್ಯಾಣ ಕಾರ್ಯಕ್ರಮಗಳ ಜಾರಿಯ ಬಗ್ಗೆ ಪಕ್ಷ ಭರವಸೆ ನೀಡಿದೆ.

ಬಿಜೆಪಿ ಪ್ರಣಾಳಿಕೆಯಲ್ಲೇನಿದೆ?

  • - ದಿನಸಿ, ಔಷಧ ಖರೀದಿಗೆ ಮಾಸಿಕ ₹2500 ರು. ನೆರವು
  • - ಓಣಂ, ಕ್ರಿಸ್ಮಸ್‌ ವೇಳೆ 2 ಉಚಿತ ಗ್ಯಾಸ್ ಸಿಲಿಂಡರ್‌
  • - ತಿರುವನಂತಪುರಂ- ಕಣ್ಣೂರು ಸಂಪರ್ಕಿಸುವ ಹೈಸ್ಪೀಡ್‌ ರೈಲು
  • - ಪ್ರತಿ ಮನೆಗೆ ಮಾಸಿಕ 20000 ಲೀಟರ್‌ ಉಚಿತ ನೀರು
  • - ಅರ್ಹ ಮಹಿಳೆ, ವಿಧವೆ, 70 ವರ್ಷ ಮೇಲ್ಪಟ್ಟವರಿಗೆ ₹3000 ಪಿಂಚಣಿ
  • - ಕೇರಳ ನಾಗರಿಕರ ಅನುಕೂಲಕ್ಕೆ ಏಮ್ಸ್‌ ಸ್ಥಾಪನೆ
  • - ಶಬರಿಮಲೆ, ಗುರುವಾಯೂರು ಸೇರಿ ಎಲ್ಲಾ ದೇಗುಲಗಳ ಅಭಿವೃದ್ಧಿ
  • - ದೇಗುಲ ಮಂಡಳಿಗಳಲ್ಲಿ ಇನ್ನು ಮುಂದೆ ಭಕ್ತರಿಗೂ ಅವಕಾಶ
  • - ಶಬರಿಮಲೆ ಚಿನ್ನ ಕಳ್ಳತನ ಬಗ್ಗೆ ಕಾಲಮಿತಿಯಲ್ಲಿ ತನಿಖೆ ಪೂರ್ಣ