ಭಾಗಲ್ಪುರ (ಅ.22): ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು-ಬಿಜೆಪಿ ಮೈತ್ರಿಯನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ‘ಸೂಪರ್‌ ಹಿಟ್‌’ ಓಪನಿಂಗ್‌ ಬ್ಯಾಟ್ಸ್‌ಮನ್‌ಗಳಾಗಿದ್ದ ಸಚಿನ್‌ ತೆಂಡುಲ್ಕರ್‌ ಹಾಗೂ ವೀರೇಂದ್ರ ಸೆಹ್ವಾಗ್‌ ಅವರಿಗೆ ಹೋಲಿಸಿದ್ದಾರೆ. 

ಅ.28ರಿಂದ ಆರಂಭವಾಗಲಿರುವ ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆ ಎನ್‌ಡಿಎ ಅಭ್ಯರ್ಥಿಗಳ ಪರ ಬುಧವಾರ ಭಾಗಲ್ಪುರದಲ್ಲಿ ಪ್ರಚಾರ ನಡೆಸಿದ ರಾಜನಾಥ್‌ ಸಿಂಗ್‌, ‘ರಾಜ್ಯದ ಜನತೆ 15 ವರ್ಷಗಳ ಲಾಟಿನ್‌(ಆರ್‌ಜೆಡಿ ಚಿಹ್ನೆ) ಆಡಳಿತ ಮತ್ತು ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರದ ಸಾಧನೆಯನ್ನು ನೋಡಿದ್ದು, ಈ ಎರಡೂ ಸರ್ಕಾರಗಳ ಮಧ್ಯೆಯ ವ್ಯತ್ಯಾಸವನ್ನು ಕಂಡಿದ್ದಾರೆ’ ಎಂದಿದ್ದಾರೆ. 

ಬಿಜೆಪಿಗೆ ಬಿಗ್ ಶಾಕ್ : ಕಮಲ ತೊರೆದು ಇನ್ನೊಂದು ಪಕ್ಷ ಸೇರಲು ಸಜ್ಜಾದ ಹಿರಿಯ ಮುಖಂಡ ...

ತನ್ಮೂಲಕ ದುರಾಡಳಿತದ ನಿತೀಶ್‌ ಕುಮಾರ್‌ ಸರ್ಕಾರವನ್ನು ಕಿತ್ತೆಸೆಯಬೇಕು ಎಂಬ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಅಲ್ಲದೆ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರ ಬಿಹಾರ ಜನರಿಗೆ ವಿದ್ಯುತ್‌, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡಲಿದೆ ಎಂದು ಭರವಸೆ ನೀಡಿದ್ದಾರೆ.