* ಜೋಶಿಗೆ ಉಸ್ತು​ವಾ​ರಿ, ಶೋಭಾಗೆ ಸಹ ಉಸ್ತು​ವಾರಿ* ಪಂಚರಾಜ್ಯ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭ* ಜೋಶಿಗೆ ಉತ್ತರಾಖಂಡ, ಶೋಭಾಗೆ ಉ.ಪ್ರ. ಹೊಣೆ

ನವದೆಹಲಿ(ಸೆ.09): ಮುಂದಿನ ವರ್ಷ ನಡೆಯಲಿರುವ 5 ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ, ಈ ಸಂಬಂಧ ಹಲವು ಕೇಂದ್ರ ಸಚಿವರು ಮತ್ತು ಹಿರಿಯ ನಾಯಕರನ್ನು ವಿವಿಧ ರಾಜ್ಯಗಳಿಗೆ ಪಕ್ಷದ ಚುನಾವಣಾ ಉಸ್ತುವಾರಿ ಮತ್ತು ಸಹ ಉಸ್ತುವಾರಿಯಾಗಿ ನೇಮಿಸಿದೆ. ಈ ಪೈಕಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಉತ್ತರಾಖಂಡದ ಉಸ್ತುವಾರಿಯಾಗಿ ಮತ್ತು ಸಚಿವೆ ಶೋಭಾ ಕರಂದ್ಲಾಜೆ ಉತ್ತರಪ್ರದೇಶಕ್ಕೆ ಸಹ ಉಸ್ತುವಾರಿಯಾಗಿ ನೇಮಕವಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2022ರಲ್ಲಿ ಉತ್ತರಪ್ರದೇಶ, ಉತ್ತರಾಖಂಡ, ಮಣಿಪುರ, ಪಂಜಾಬ್‌ ಮತ್ತು ಗೋವಾ ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಈ ಪೈಕಿ 400ಕ್ಕೂ ಹೆಚ್ಚು ವಿಧಾನಸಭಾ ಸ್ಥಾನಗಳನ್ನು ಒಳಗೊಂಡಿರುವ ಉತ್ತರಪ್ರದೇಶ, ಬಿಜೆಪಿಗೆ ಪಾಲಿಗೆ ಅತ್ಯಂತ ಮಹತ್ವದ್ದು. ಹೀಗಾಗಿ ಆ ರಾಜ್ಯವನ್ನು 6 ವಲಯಗಳಾಗಿ ವಿಂಗಡಿಸಿ ಅಲ್ಲಿಗೆ ಹಲವು ನಾಯಕರು ಮತ್ತು ಸಚಿವರನ್ನು ನಿಯೋಜಿಸಲಾಗಿದೆ.

ಪಶ್ಚಿಮ ಬಂಗಾಳದ ಸಂಸದೆ ಲಾಕೆಟ್‌ ಚಟರ್ಜಿ ಮತ್ತು ಪಕ್ಷದ ವಕ್ತಾರ ಆರ್‌.ಪಿ.ಸಿಂಗ್‌ ಅವರನ್ನು ಉತ್ತರಾಖಂಡಕ್ಕೆ, ದೇವೇಂದ್ರ ಫಡ್ನ​ವೀ​ಸ್‌​ರನ್ನು ಗೋವಾ​ಗೆ, ಕೇಂದ್ರ ಸಚಿವೆ ಪ್ರತಿಮಾ ಭೌಮಿಕ್‌, ಅಸ್ಸಾಂ ಸಚಿವ ಅಶೋಕ್‌ ಸಿಂಘಾಲ್‌ ಅವರನ್ನು ಮಣಿಪುರದ ಉಸ್ತುವಾರಿಯಾಗಿ, ಕೇಂದ್ರ ಸಚಿವ ಹರ್‌ದೀಪ್‌ಸಿಂಗ್‌ ಪುರಿ, ಮೀನಾಕ್ಷಿ ಲೇಖಿ, ಸಂಸದ ವಿನೋದ್‌ ಚಾವ್ಡಾ ಅವರನ್ನು ಪಂಜಾಬ್‌ ಸಹ ಉಸ್ತುವಾರಿಯಾಗಿ ನೇಮಿಸಲಾಗಿದೆ.