ರಾಜಕೀಯ ಎದುರಾಳಿಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಅವರಿಗೆ ಪತ್ರ ಬರೆದಿದ್ದ ಪ್ರತಿಪಕ್ಷಗಳಿಗೆ ಬಿಜೆಪಿ ಭರ್ಜರಿ ತಿರುಗೇಟು ನೀಡಲು ಹೊರಟಿದೆ.
ನವದೆಹಲಿ: ರಾಜಕೀಯ ಎದುರಾಳಿಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಅವರಿಗೆ ಪತ್ರ ಬರೆದಿದ್ದ ಪ್ರತಿಪಕ್ಷಗಳಿಗೆ ಬಿಜೆಪಿ ಭರ್ಜರಿ ತಿರುಗೇಟು ನೀಡಲು ಹೊರಟಿದೆ. ಪತ್ರಕ್ಕೆ ಸಹಿ ಹಾಕಿದ ವಿಪಕ್ಷಗಳ ತವರು ರಾಜ್ಯದಲ್ಲೇ ಪತ್ರಿಕಾಗೋಷ್ಠಿ ಕರೆದು, ಅವುಗಳ ಬಣ್ಣ ಬಯಲು ಮಾಡಲು ಮುಂದಾಗಿದೆ. 9 ರಾಜ್ಯಗಳಲ್ಲಿ 9 ಸುದ್ದಿಗೋಷ್ಠಿಗಳನ್ನು ಈ ಸಲುವಾಗಿ ನಡೆಸಲಾಗುತ್ತದೆ.
ದೆಹಲಿ (delhi), ಪಂಜಾಬ್ (punjab) , ಜಮ್ಮು-ಕಾಶ್ಮೀರ (Jammu Kashmir), ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ ಹಾಗೂ ಕೇರಳ ಸೇರಿ 9 ರಾಜ್ಯದ ವಿಪಕ್ಷಗಳು ಮೋದಿಗೆ ಪತ್ರ ಬರೆದಿದ್ದವು. ಅವುಗಳ ರಾಜ್ಯಗಳಲ್ಲೇ ಪತ್ರಿಕಾಗೋಷ್ಠಿ ನಡೆಸಿ, ಮೋದಿಗೆ ಬರೆದ ಪತ್ರಕ್ಕೆ ಸಹಿ ಹಾಕಿರುವ ನಾಯಕರು ಭ್ರಷ್ಟರು. ತನಿಖೆಗೆ ಹೆದರುತ್ತಿರುವವರು ಎಂದು ಬಿಂಬಿಸುವುದು ಬಿಜೆಪಿ ತಂತ್ರಗಾರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಮನೀಶ್ ಸಿಸೋಡಿಯಾಗೆ ಗೂಢಚರ್ಯೆ ಹಗರಣ ಉರುಳು: ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಅಸ್ತು
ಈಗಾಗಲೇ ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು (Press Meet) ಮಾಡಿದ್ದಾರೆ. ಬಂಗಾಳದಲ್ಲಿ ಸುವೇಂದು ಅಧಿಕಾರಿ, ಬಿಹಾರದಲ್ಲಿ ಸಂಜಯ ಜೈಸ್ವಾಲ್, ಉತ್ತರಪ್ರದೇಶದಲ್ಲಿ ಬೃಜೇಶ್ ಪಾಠಕ್ ಹಾಗೂ ತೆಲಂಗಾಣದಲ್ಲಿ ಸಂಜಯ್ ಬಂಡಿ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಏನಿದು ಪತ್ರ?:
ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಅಬಕಾರಿ ಹಗರಣ ಸಂಬಂಧ ಸಿಬಿಐ ಬಂಧಿಸಿತ್ತು. ಇದರ ಬೆನ್ನಲ್ಲೇ ವಿಪಕ್ಷಗಳು ಪ್ರಧಾನಿ ಅವರಿಗೆ ಬರೆದು, ಭಾರತ ಪ್ರಜಾಪ್ರಭುತ್ವ ದೇಶ ಎಂದು ನೀವು ನಂಬುತ್ತೀರಿ ಎಂಬ ವಿಶ್ವಾಸವಿದೆ. ಆದರೆ ಪ್ರತಿಪಕ್ಷಗಳ ಸದಸ್ಯರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳ ನಿರ್ಲಜ್ಜ ದುರ್ಬಳಕೆಯಿಂದಾಗಿ ಭಾರತ ಪ್ರಜಾಸತ್ತೆಯಿಂದ ಸರ್ವಾಧಿಕಾರದತ್ತ ಹೋಗಿರುವಂತೆ ಭಾಸವಾಗುತ್ತಿದೆ. ಮೋದಿ ಅವರು 2014ರಲ್ಲಿ ಪ್ರಧಾನಿಯಾದ ಬಳಿಕ ವಿಪಕ್ಷಗಳ ನಾಯಕರ ಮೇಲೆಯೇ ಹೆಚ್ಚಾಗಿ ದಾಳಿ ನಡೆದಿದೆ. ಬಿಜೆಪಿ ಸೇರುವ ವಿಪಕ್ಷ ನಾಯಕರ ವಿರುದ್ಧ ತನಿಖಾ ಪ್ರಕ್ರಿಯೆಗಳು ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿವೆ ಎಂದು ಆರೋಪಿಸಿದ್ದರು.
Delhi Excise Policy Case: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ!
