ಚುನಾವಣಾ ಬಾಂಡ್: 2,555 ಕೋಟಿ ಗಳಿಸಿದ ಬಿಜೆಪಿ!
* ಚುನಾವಣಾ ಬಾಂಡ್‌ಗಳಿಂದ ಸಂಗ್ರಹಣೆಯಾದ ಒಟ್ಟು ಹಣದಲ್ಲಿ ಬಿಜೆಪಿಯ ಪಾಲು ಶೇ.76ರಷ್ಟಿದೆ
* 2019-20ನೇ ಸಾಲಿನಲ್ಲಿ ಬಿಜೆಪಿ ಚುನಾವಣಾ ಬಾಂಡ್‌ಗಳಿಂದ 2,555 ಕೋಟಿ ರುಪಾಯಿ ಗಳಿಕೆ
* 2019-20ನೇ ಸಾಲಿನಲ್ಲಿ ಒಟ್ಟು 3355 ಕೋಟಿ ಮೌಲ್ಯದ ಚುನಾವಣಾ ಬಾಂಡ್
ನವದೆಹಲಿ(ಆ.10): 2019-20ನೇ ಸಾಲಿನಲ್ಲಿ ಬಿಜೆಪಿ ಚುನಾವಣಾ ಬಾಂಡ್‌ಗಳಿಂದ 2,555 ಕೋಟಿ ರುಪಾಯಿ ಗಳಿಸಿದೆ. ಚುನಾವಣಾ ಬಾಂಡ್‌ಗಳಿಂದ ಸಂಗ್ರಹಣೆಯಾದ ಒಟ್ಟು ಹಣದಲ್ಲಿ ಬಿಜೆಪಿಯ ಪಾಲು ಶೇ.76ರಷ್ಟಿದೆ ಎಂದು ಚುನಾವಣಾ ಆಯೋಗದಿಂದ ಪಡೆದ ಮಾಹಿತಿಯಿಂದ ತಿಳಿದುಬಂದಿದೆ.
2019-20ನೇ ಸಾಲಿನಲ್ಲಿ ಒಟ್ಟು 3355 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಮಾರಾಟವಾಗಿದೆ. ಅದರಲ್ಲಿ ಬಿಜೆಪಿ 2,555 ಕೋಟಿ ಪಡೆದುಕೊಂಡಿದೆ. ಕಳೆದ ಸಾಲಿಗೆ ಹೋಲಿಸಿದರೆ ಬಿಜೆಪಿಯ ಗಳಿಕೆ ಶೇ.75 ಹೆಚ್ಚಾಗಿದೆ. ಕಳೆದ ಸಾಲಿನಲ್ಲಿ ಬಿಜೆಪಿ 1,450 ಕೋಟಿ ಗಳಿಸಿತ್ತು.
ಇದೇ ಸಮಯದಲ್ಲಿ ಕಾಂಗ್ರೆಸ್‌ನ ಗಳಿಕೆ ಶೇ.17ಕ್ಕೆ ಇಳಿಕೆ ಕಂಡಿದೆ. 2019-20ನೇ ಸಾಲಿನಲ್ಲಿ ಕಾಂಗ್ರೆಸ್ 383 ಕೋಟಿ ಗಳಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ 100.46 ಕೋಟಿ, ಶಿವಸೇನೆ 41 ಕೋಟಿ, ಡಿಎಂಕೆ 45 ಕೋಟಿ, ರಾಷ್ಟ್ರೀಯ ಜನತಾದಳ 2.5ಕೋಟಿ, ಆಮ್ ಆದ್ಮಿ ಪಕ್ಷ 18 ಕೋಟಿ ರು. ಗಳಿಸಿವೆ.