Asianet Suvarna News Asianet Suvarna News

ಉ. ಪ್ರದೇಶ ಸಿಎಂ ಯೋಗಿ ನಾಯಕತ್ವ ಭವಿಷ್ಯದ ಬಗ್ಗೆ ವರಿಷ್ಠರ ಚರ್ಚೆ!

* ಮುಂದಿನ ವರ್ಷ ಎದು​ರಾ​ಗ​ಲಿ​ರುವ ದೇಶದ ಅತಿ​ದೊಡ್ಡ ರಾಜ್ಯ ಖ್ಯಾತಿಯ ಉತ್ತರ ಪ್ರದೇಶದ ವಿಧಾ​ನ​ಸಭೆ ಚುನಾ​ವ​ಣೆ

* ಉತ್ತರ ಪ್ರದೇಶದ ವಿಧಾ​ನ​ಸಭೆ ಚುನಾ​ವ​ಣೆಗೆ ಬಿಜೆಪಿ ಭರ್ಜರಿ ಸಿದ್ಧತೆ

* ಉ. ಪ್ರದೇಶ ಸಿಎಂ ಯೋಗಿ ನಾಯಕತ್ವ ಭವಿಷ್ಯದ ಬಗ್ಗೆ ವರಿಷ್ಠರ ಚರ್ಚೆ!

BJP Feedback Drive Before UP Polls Amid Concerns Over Yogi Adityanath pod
Author
Bangalore, First Published Jun 2, 2021, 8:15 AM IST

ಲಖ​ನೌ(ಜೂ.02): ಮುಂದಿನ ವರ್ಷ ಎದು​ರಾ​ಗ​ಲಿ​ರುವ ದೇಶದ ಅತಿ​ದೊಡ್ಡ ರಾಜ್ಯ ಖ್ಯಾತಿಯ ಉತ್ತರ ಪ್ರದೇಶದ ವಿಧಾ​ನ​ಸಭೆ ಚುನಾ​ವ​ಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆ​ಸಿ​ರುವ ಬೆನ್ನ​ಲ್ಲೇ, ಮುಖ್ಯ​ಮಂತ್ರಿ ಯೋಗಿ ಆದಿ​ತ್ಯ​ನಾಥ್‌ ವಿರುದ್ಧ ಪಕ್ಷದಲ್ಲೇ ಆಕ್ರೋ​ಶ​ಗಳು ಭುಗಿ​ಲೆ​ದ್ದ ಮುನ್ಸೂ​ಚ​ನೆ​ಗಳು ಕಂಡು​ಬಂದಿವೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಈ ಹಿನ್ನೆ​ಲೆ​ಯಲ್ಲಿ ಬಿಜೆಪಿಯ ಜನ​ಪ್ರಿ​ಯ​ತೆ​ಯನ್ನು ಮತ್ತೆ ವೃದ್ಧಿಸಲು ಬಿಜೆಪಿ ಹೈಕ​ಮಾಂಡ್‌ ಮುಂದಾ​ಗಿದ್ದು, ಬಿಜೆಪಿ ಪ್ರಧಾನ ಕಾರ್ಯ​ದರ್ಶಿ ಬಿ.ಎಲ್‌ ಸಂತೋಷ್‌ ಮತ್ತು ಕೇಂದ್ರದ ಮಾಜಿ ಸಚಿವ ರಾಧಾ ಮೋಹನ್‌ ಸಿಂಗ್‌ ಅವ​ರನ್ನು ಉತ್ತರ ಪ್ರದೇ​ಶಕ್ಕೆ ರವಾ​ನಿ​ಸಿದೆ. ಮಂಗಳವಾರದಿಂದ ಈ ಇಬ್ಬರೂ ನಾಯಕರು ಪಕ್ಷದ ಆದಿತ್ಯನಾಥ್‌, ಶಾಸಕರು ಹಾಗೂ ಸಚಿವರ ಜತೆ ನಿರಂತರ ಸಮಾಲೋಚನೆ ನಡೆಸಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ ನಾಯಕತ್ವದ ಬದಲಾಗಬಹುದೇ ಎಂಬ ಊಹಾಪೋಹಕ್ಕೆ ನಾಂದಿ ಹಾಡಿದೆ.

ಯೋಗಿ ಆಡಳಿತವು ಕೊರೋನಾ ಸ್ಥಿತಿಯ ಸಮರ್ಪಕ ನಿರ್ವಹಣೆ ಮಾಡಿಲ್ಲ ಎಂಬುದು ಒಂದು ಆರೋಪ. ಮತ್ತೊಂದೆಡೆ ಪಂಚಾ​ಯ​ತ್‌ ಚುನಾ​ವ​ಣೆ​ಯಲ್ಲಿ ಬಿಜೆ​ಪಿಯ ಭದ್ರ​ಕೋ​ಟೆ​ಯಂಥ ಕ್ಷೇತ್ರ​ಗ​ಳಲ್ಲಿ ಪಕ್ಷಕ್ಕೆ ಹಿನ್ನ​ಡೆ​ಯಾ​ಗಿದೆ. ಇದು ಯೋಗಿ ಮೇಲೆ ಕತ್ತಿ ತೂಗುವಂತೆ ಮಾಡಿದೆ ಎನ್ನಲಾಗಿದೆ.

ಉದ್ದಿಮೆಗಳಿಗೆ ಆಕ್ಸಿಜನ್‌ ನಿರ್ಬಂಧ 2 ದಿನದಲ್ಲಿ ತೆರವು ಸಾಧ್ಯತೆ!

ಯೋಗಿ ಆದಿ​ತ್ಯ​ನಾ​ಥ್‌ ಅವರ ಅದ​ಕ್ಷ​ತೆ​ಯಿಂದ 2ನೇ ಅಲೆಯ ವೇಳೆ ಉತ್ತರ ಪ್ರದೇ​ಶ​ದಲ್ಲಿ ಅತಿ​ಹೆಚ್ಚು ಮಂದಿ ಬಲಿ​ಯಾ​ಗಿ​ದ್ದಾರೆ. ಅಲ್ಲದೆ ಗಂಗಾ ನದಿ​ಯಲ್ಲಿ ಶವ​ಗಳು ತೇಲಿ​ಬಂದಿದ್ದು, ಹಲವೆಡೆ ಸರಿ​ಯಾಗಿ ಶವ ಸಂಸ್ಕಾರ ನೆರ​ವೇ​ರಿ​ಸಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಎಲ್ಲಾ ವಿಚಾ​ರ​ಗ​ಳನ್ನು ಇಟ್ಟು​ಕೊಂಡು ಸಾಮಾ​ಜಿಕ ಮಾಧ್ಯ​ಮ​ಗ​ಳಲ್ಲಿ ವಿಪ​ಕ್ಷ​ಗಳು ಯೋಗಿ ಸರ್ಕಾ​ರ​ದ ಟೀಕಾಸ್ತ್ರ ಪ್ರಯೋ​ಗಿ​ಸು​ತ್ತಿವೆ. ಏತ​ನ್ಮಧ್ಯೆ, ಬಿಜೆ​ಪಿಯ ಶಾಸ​ಕರು ತಾವು ಹೆಚ್ಚು ಮಾತ​ನಾ​ಡಿ​ದರೆ ತಮ್ಮ ವಿರು​ದ್ಧವೂ ದೇಶ​ದ್ರೋ​ಹದ ಕೇಸ್‌ ದಾಖ​ಲಾ​ಗು​ತ್ತದೆ ಎಂದು ತಮ್ಮದೇ ಸರ್ಕಾ​ರದ ವಿರುದ್ಧ ಬಹಿ​ರಂಗ ಆಕ್ರೋಶ ವ್ಯಕ್ತ​ಪ​ಡಿ​ಸಿ​ದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios