Asianet Suvarna News Asianet Suvarna News

ಕುಟುಂಬ ಸದಸ್ಯರು 5 ಮಂದಿಯಾದರೂ, ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದ್ದು ಒಂದೇ ಮತ!

* ಸ್ಥಳೀಯ ಸಂಸ್ಥೆ ಚುನಾವಣೆ, ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದ್ದು ಒಂದೇ ಮತ

* ಒಂದು ಮತ ಪಡೆದ ಅಭ್ಯರ್ಥಿ ಫುಲ್ ಟ್ರೋಲ್

* ಕುಟುಂಬದಲ್ಲಿ ಐವರಿದ್ದರೂ ಒಂದೇ ಮತ ಪಡೆದಿದ್ದಾರೆಂದು ಕಾಲೆಳೆದ ನೆಟ್ಟಿಗರು

BJP Candidate Gets Only One Vote In Tamil Nadu Local Polls He Has Five Members In His Family pod
Author
Bangalore, First Published Oct 13, 2021, 4:19 PM IST

ಚೆನ್ನೈ(ಅ.13): ಇತ್ತೀಚೆಗೆ ತಮಿಳುನಾಡಿನಲ್ಲಿ(Tamil nadu) ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ(Local Body Polls) ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಬಿಜೆಪಿ(BJP) ಕಾರ್ಯಕರ್ತರೊಬ್ಬರು ತಮ್ಮ ಕುಟುಂಬದಲ್ಲಿ ಐದು ಸದಸ್ಯರಿದ್ದರೂ ಕೇವಲ ಒಂದು ಮತವನ್ನು ಪಡೆದಿದ್ದಾರೆ. ಸದ್ಯ ಈ ವಿಚಾರ ಟ್ವಿಟರ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. 

ಡಿ ಕಾರ್ತಿಕ್(D Karthik) ಕೊಯಮತ್ತೂರು(Coimbatore) ಜಿಲ್ಲೆಯ ಪೆರಿಯನೈಕೆನ್ಪಾಳ್ಯಂ ಒಕ್ಕೂಟದಲ್ಲಿ(Periyanaickenpalayam unio) ವಾರ್ಡ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೀಗ ಈ ಚುನಾವಣೆಗೇ ಅವರಿಗೆ ಭಾರೀ ಮುಜುಗರಕ್ಕೀಡು ಮಾಡಿದೆ. ಕುಟುಂಬ ಸದಸ್ಯರು ಐವರಿದ್ದರೂ, ಕೇವಲ ಒಂದು ಮತ ಪಡೆದಿರುವ ವಿಚಾರ ಸೋಶಿಯತಲ್ ಮಿಡಿಯಾ ಮೂಲಕ ವೈರಲ್ ಆಗಿದ್ದು, ಸದ್ಯ ಹ್ಯಾಷ್‌ ಟ್ಯಾಗ್  #Single_Vote_BJP ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.

ಆದಾಗ್ಯೂ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಾರ್ತಿಕ್, ತಮ್ಮ ಕುಟುಂಬದ ಮತವು ವಾರ್ಡ್ ಸಂಖ್ಯೆ 4 ರಲ್ಲಿತ್ತು, ಹೀಗಾಗಿ ಅವರಿಗೆ ಮತ ಹಾಕಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳು ರಾಜಕೀಯ ಪಕ್ಷದ ಚಿಹ್ನೆಗಳ ಅಡಿಯಲ್ಲಿ ಸ್ಪರ್ಧಿಸುವುದಿಲ್ಲ, ಆದರೂ ಪಕ್ಷಗಳು ಅವರನ್ನು ಅಧಿಕೃತವಾಗಿ ಬೆಂಬಲಿಸುತ್ತವೆ ಎಂಬುವುದು ಉಲ್ಲೇಖನೀಯ.

ಇನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ, ಬಿಜೆಪಿ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಕಾರ್ತಿಕ್, "ನಾನು ಬಿಜೆಪಿ ಪರವಾಗಿ ಸ್ಪರ್ಧಿಸಿಲ್ಲ. ನಾನು ಕಾರು ಚಿಹ್ನೆ ಬಳಸಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ" ಎಂದೂ ತಿಳಿಸಿದ್ದಾರೆ.

ಅಲ್ಲದೇ "ನನ್ನ ಕುಟುಂಬವು ನಾಲ್ಕು ಮತಗಳನ್ನು ಹೊಂದಿದೆ ಮತ್ತು ಎಲ್ಲಾ ಮತಗಳು ಪಂಚಾಯಿತಿಯ 4 ನೇ ವಾರ್ಡ್‌ನಲ್ಲಿವೆ. ನಾನು ಸ್ಪರ್ಧಿಸಿದ 9 ನೇ ವಾರ್ಡ್‌ನಲ್ಲಿ ನನ್ನ ನಾಲ್ಕು ಕುಟುಂಬ ಸದಸ್ಯರು ಮತ್ತು ನನಗೆ ಯಾವುದೇ ಮತವಿಲ್ಲ. ಹೀಗಿದ್ದರೂ ನಾನು ಬಿಜೆಪಿ ಪರವಾಗಿ ಸ್ಪರ್ಧಿಸಿದ್ದೆ ಮತ್ತು ನನ್ನ ಕುಟುಂಬ ಸದಸ್ಯರ ಮತವನ್ನು ಕೂಡ ಪಡೆದುಕೊಂಡಿಲ್ಲ ಎಂದು ಟ್ರೋಲ್ ಮಾಡಲಾಗುತ್ತಿದೆ. ಇದು ನಿಜವಲ್ಲ ಎಂದು ಕಾರ್ತಿಕ್ ತಿಳಿಸಿದ್ದಾರೆ.

ಅಭ್ಯರ್ಥಿ ಕೊಟ್ಟ ಈ ಸ್ಪಷ್ಟನೆ ಬಳಿಕವೂ ರಾಜಕೀಯ ನಾಯಕರೂ ಸೇರಿದಂತೆ ಅನೇಕ ಮಂದಿ ಟ್ವಿಟರ್‌ಮನಲ್ಲಿ ಅವರನ್ನು ಟ್ರೋಲ್ ಮಾಡಿದ್ದಾರೆ. 

Follow Us:
Download App:
  • android
  • ios