ಟಿಎಂಸಿ ವಿರೋಧದ ಬೆನ್ನಲ್ಲೇ ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ ಪವನ್ ಸಿಂಗ್!
ಭಾರಿ ವಿರೋಧ, ಟೀಕೆಗಳ ಬೆನ್ನಲ್ಲೇ ಪಶ್ಚಿಮ ಬಂಗಾಳದ ಅಸನ್ಸೋಲ್ ಲೋಕಸಭಾ ಅಭ್ಯರ್ಥಿ, ಗಾಯಕ-ನಟ ಪವನ್ ಸಿಂಗ್ ಕಣದಿಂದ ಹಿಂದೆ ಸರಿದಿದ್ದಾರೆ. ಈ ನಡೆಯನ್ನು ಟಿಎಂಸಿ ಭರ್ಜರಿ ಗೆಲುವಾಗಿ ಸಂಭ್ರಮಾಚರಿಸಿದೆ.
ಕೋಲ್ಕತಾ(ಮಾ.03) ಪಶ್ಚಿಮ ಬಂಗಾಳ ಮೂಲದ ಬೋಜುಪುರಿ ನಟ ಪವನ್ ಸಿಂಗ್ ಹೆಸರು ಬಿಜೆಪಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದೇ ತಡ, ಟಿಎಂಸಿ ಸೇರಿದಂತೆ ಕೆಲ ಪಕ್ಷಗಳು ಭಾರಿ ಕೋಲಾಹಲವನ್ನು ಸೃಷ್ಟಿಸಿತ್ತು. ಪವನ್ ಸಿಂಗ್ ಕಂಪೋಸ್ ಮಾಡಿದ ಚಿತ್ರದ ಹಾಡುಗಳಲ್ಲಿ, ಚಿತ್ರದಲ್ಲಿ ಮಹಿಳೆಯರನ್ನು ಕೆಟ್ಟದಾಗಿ ಚಿತ್ರಿಸಿದ್ದಾರೆ ಅನ್ನೋ ಆರೋಪ ಕೇಳಿಬಂದಿತ್ತು. ಮಹಿಳೆಯರ ಬಗ್ಗೆ ಗೌರವಿಲ್ಲದ ವ್ಯಕ್ತಿ ಸಂಸದರಾಗಲು ಬಿಜೆಪಿ ಟಿಕೆಟ್ ನೀಡಿದೆ ಅನ್ನೋ ಟೀಕೆಯನ್ನು ಟಿಎಂಸಿ ಮಾಡಿತ್ತು. ಈ ಆರೋಪ, ಟೀಕೆಗಳ ಬೆನ್ನಲ್ಲೇ ನಟ ಪವನ್ ಸಿಂಗ್, ಚುನಾವಣಾ ಅಖಾಡದಿಂದ ಹಿಂದೆ ಸರಿದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. 195 ಅಭ್ಯರ್ಥಿಗಳ ಈ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪವನ್ ಸಿಂಗ್ ಅವರನ್ನು ಕಣಕ್ಕಿಳಿಸಿತ್ತು. ಬಿಜೆಪಿಯ ಈ ಲೆಕ್ಕಾಚಾರ ತಿರುಗುಬಾಣವಾಗಿತ್ತು. ಭಾರಿ ವಿರೋಧ, ಅಭಿಯಾನದ ಬೆನ್ನಲ್ಲೇ ಬಿಜೆಪಿ ಪ್ಲಾನ್ ಬದಲಿಸಿತು. ಪವನ್ ಸಿಂಗ್ ಜೊತೆ ಮಾತುಕತೆ ನಡೆಸಿ ಕಣದಿಂದ ಹಿಂದೆ ಸರಿಯುವಂತೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಇತ್ತ ಪವನ್ ಸಿಂಗ್ ಇದೀಗ ಕಣದಿಂದ ಹಿಂದೆ ಸರಿದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಪ.ಬಂಗಾಳ ಬಿಜೆಪಿ ಅಧ್ಯಕ್ಷನ ಬೆಂಗಾವಲು ವಾಹನ ಅಪಘಾತ!
ನಟ ಪವನ್ ಸಿಂಗ್ ನಟಿಸಿದ ಚಿತ್ರದ ಹಾಡುಗಳಲ್ಲಿ ಮಹಿಳೆಯರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ. ಮಹಿಳೆಯರ ಕುರಿತು ಕೀಳು ಮಟ್ಟದ ಪದಗಳನ್ನು ಬಳಸಲಾಗಿದೆ. ಈ ನಟ ಸಂಸದರಾಗಿ ಸಂಸತ್ತಿನಲ್ಲಿರಲು ಅರ್ಹರಲ್ಲ ಅನ್ನೋ ಟೀಕೆಗೆ ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿತ್ತು. ಇದೇ ವಿಚಾರ ಮುಂದಿಟ್ಟ ಟಿಎಂಸಿ ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಆರಂಭಿಸಿದ್ದರು. ಹೀಗಾಗಿ ಪವನ್ ಸಿಂಗ್ ಹಾಗೂ ಬಿಜೆಪಿಗೆ ತೀವ್ರ ಹಿನ್ನಡೆಯಾಗಿತ್ತು.
ನನ್ನ ಮೇಲೆ ವಿಶ್ವಾಸವಿಟ್ಟು ಅಸನ್ಸೋಲ್ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಟಿಕೆಟ್ ನೀಡಿದ ಬಿಜೆಪಿಗೆ ಧನ್ಯವಾದಗಳು. ಆದರೆ ಕೆಲ ಕಾರಣಗಳಿಂದ ನನಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂದು ಪವನ್ ಸಿಂಗ್ ಸ್ಪಷ್ಟಪಡಿಸಿ್ದ್ದಾರೆ.
ರಾಜೀನಾಮೆ ಘೋಷಿಸಿದ ಕಲ್ಕತಾ ಹೈಕೋರ್ಟ್ ಜಡ್ಜ್, ಲೋಕಸಭಾ ಚುನಾವಣಾ ಅಖಾಡಕ್ಕೆ ಎಂಟ್ರಿ!
ಪಶ್ಚಿಮ ಬಂಗಾಳದ 20 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಮೊದಲ ಪಟ್ಟಿಯಲ್ಲಿರುವ 195 ಅಭ್ಯರ್ಥಿಗಳ ಪೈಕಿ ಅಸನ್ಸೋಲ್ ಕ್ಷೇತ್ರದ ಅಭ್ಯರ್ಥಿ ವಿರುದ್ಧ ಮಾತ್ರ ಭಾರಿ ಬಿರುಗಾಳಿ ಎದ್ದಿತ್ತು. ಇದೀಗ ತಕ್ಕ ಮಟ್ಟಿಗೆ ನಿಯಂತ್ರಿಸವು ಪ್ರಯತ್ನವನ್ನು ಬಿಜೆಪಿ ಮಾಡಿದೆ. ಆದರೆ ಇದು ಲೋಕಸಭಾ ಚುನಾವಣೆಗೆ ಮೊದಲೇ ಸಿಕ್ಕ ಗೆಲುವು ಎಂದು ಟಿಎಂಸಿ ಸಂಭ್ರಮಾಚರಣೆಯಲ್ಲಿ ತೊಡಗಿದೆ.