ಕೋಲ್ಕತಾ(ಮಾ.14): ಪಶ್ಚಿಮ ಬಂಗಾಳದ ಚುನಾವಣೆಗೆ ಬಿಜೆಪಿ ಪ್ರಬಲ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ. 3ನೇ ಹಂತದ ಚುನಾವಣೆಗೆ 27 ಹಾಗೂ 4ನೇ ಹಂತದ ಚುನಾವಣೆಗೆ 38 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ರಾಜ್ಯ ಸಭಾ ಸದಸ್ಯ, ಕೇಂದ್ರ ಸಚಿವರ ಸೇರಿದಂತೆ ಸ್ಟಾರ್ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದೆ.

TMCಗೆ ತೀವ್ರ ಮುಖಭಂಗ; CM ಮಮತಾ ಮೇಲೆ ದಾಳಿ ನಡೆದಿಲ್ಲ ಎಂದ ಚುನಾವಣಾ ಆಯೋಗ!.

ಸ್ವಪನ್ ದಾಸ್‌ಗುಪ್ತ, ಬಬುಲ್ ಸುಪ್ರಿಯೋ ಸೇರಿದಂತೆ ಅರ್ಥಶಾಸ್ತ್ರಜ್ಞ ಅಶೋಕ್ ಲಾಹರಿ ಕೂಡ ಸ್ಪಧಿಸುತ್ತಿದ್ದಾರೆ. ಪಟ್ಟಿ ಬಿಡುಗಡೆ ಮಾಡಿದ  ಬೆನ್ನಲ್ಲೇ ಬಿಜೆಪಿಯಲ್ಲಿ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಹೀಗಾಗಿ ಕೇಂದ್ರ ಸಚಿವರನ್ನು, ಸಂಸದರನ್ನು ಕಣಕ್ಕಿಳಿಸುತ್ತಿದೆ. ಗೆಲುವಿಗಾಗಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಟೀಕಿಸಿದೆ.

 

ಅಲಿಪುರ್ದೌರ್ ಕ್ಷೇತ್ರದಿಂದ ಅಶೋಲ್ ಲಾಹರಿ, ದಮ್ಜೂರಿನಿಂದ ರಜೀಬ್ ಬ್ಯಾನರ್ಜಿ, ತಾರಕೇಶ್ವರ್ ಕ್ಷೇತ್ರದಿಂದ ಸ್ವಪನ್ ದಾಸ್‌ಗುಪ್ತಾ, ದಿನಹತಾ ಕ್ಷೇತ್ರದಿಂದ ಸಂಸದ ನಿತೀಶ್ ಪ್ರಮಾಣಿಕ್ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಮುಖ್ಯ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಚುನಾವಣೆ 8 ಹಂತದಲ್ಲಿ ನಡೆಯಲಿದೆ. ಮಾರ್ಚ್ 27 ರಿಂದ ಚುನಾವಣೆ ಆರಂಭಗೊಳ್ಳಲಿದೆ. ಎಪ್ರಿಲ್ 29ಕ್ಕೆ 8ನೇ ಹಾಗೂ ಕೊನೆಯ ಹಂತದ ಚುನಾವಣೆಯೊಂದಿಗೆ ಬಂಗಾಳ ಚುನಾವಣೆ ಅಂತ್ಯಗೊಳ್ಳಲಿದೆ. ಇನ್ನು ಮೇ.02ರಂದು ಫಲಿತಾಂಶ ಹೊರಬೀಳಲಿದೆ.

ಪಶ್ಚಿಮ ಬಂಗಾಳ 3 ಮತ್ತು 4ನೇ ಹಂತದ ಚುನಾವಣಾ ಬಿಜೆಪಿ ಅಭ್ಯರ್ಥಿಗಳ ಪಟ್ಟಿ