Asianet Suvarna News Asianet Suvarna News

ಭಾರತದ ವಿದೇಶಾಂಗ ಸಚಿವರಿಗೆ ಚೀನಾದ ಬೆದರಿಕೆ ಇನ್ನೂ ಅರ್ಥವಾಗಿಲ್ಲ, ರಾಹುಲ್ ಗಾಂಧಿ!

ಚೀನಾದ ಬೆದರಿಕೆ ಏನೂ, ಅದರ ಗಂಭೀರತೆ ಏನೂ ಅನ್ನೋದು ಭಾರತದ ವಿದೇಶಾಂಗ ಸಚಿವರಿಗೆ ಇನ್ನೂ ಅರ್ಥವಾಗಿಲ್ಲ. ಮೋದಿ ಹೇಳಿಕೆಯಿಂದ ಚೀನಾ ಮತ್ತೆ ಭಾರತದ ಮೇಲೆ ಆಕ್ರಮಣ ಮಾಡುವ ಸಾಧ್ಯತೆ ಇದೆ. ಇದು ರಾಹುಲ್ ಗಾಂಧಿ ಲಂಡನ್‌ನಲ್ಲಿ ಹೇಳಿದ ಮಾತು. ಬಿಜೆಪಿಯನ್ನು ಟೀಕಿಸಲು ಹೋದ ರಾಹುಲ್ ಎಡವಟ್ಟು ಮಾಡಿಕೊಂಡ್ರಾ?
 

BJP and S Jaishankar doest not understand China threat in border Rahul Gandhi remark on Indian Journalist association London ckm
Author
First Published Mar 6, 2023, 4:45 PM IST

ನವದೆಹಲಿ(ಮಾ.06): ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತವನ್ನು ಅವಮಾನಿಸಿದ್ದಾರೆ. ಸುಳ್ಳು ಮಾಹಿತಿ ನೀಡಿ ಭಾರತದ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ. ಈ ವಿವಾದ ಬೆನ್ನಲ್ಲೇ ಇದೀಗ ರಾಹುಲ್ ಗಾಂಧಿ ಸಂದರ್ಶನ ಮತ್ತೆ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸುವ ಭರದಲ್ಲಿ, ವಿದೇಶಾಂಗ ಸಚಿವ ಎಸ್ ಜೈಶಂಕರ್‌ಗೆ ಚೀನಾದ ಬೆದರಿಕೆ ಏನೂ ಅನ್ನೋದೆ ಅರ್ಥವಾಗಿಲ್ಲ ಎಂದಿದ್ದಾರೆ. ಚೀನಾ ಒಡ್ಡುತ್ತಿರುವ ಬೆದರಿಕೆಗೆಯನ್ನು ಜೈಶಂಕರ್ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಭಾರತದ ನೆಲವನ್ನೂ ಯಾರೂ ಆಕ್ರಮಿಸಿಲ್ಲ ಅನ್ನೋ ಪ್ರಧಾನಿ ಮೋದಿ ಹೇಳಿಕೆ, ಚೀನಾಗೆ ಆಮಂತ್ರಣ ನೀಡಿದಂತೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಲಂಡನ್‌ನಲ್ಲಿರು ಭಾರತೀಯ ಪತ್ರಕರ್ತರ ಸಂಸ್ಥೆ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಚೀನಾ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ, ಬಿಜೆಪಿ ಸರ್ಕಾರದ ವಿದೇಶಾಂಗ ನೀತಿಯನ್ನು ಬೆಂಬಲಿಸಿದ್ದಾರೆ. ರಷ್ಯಾ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತ ತೆಗೆದುಕೊಂಡ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ದಾಖಲೆ ಸಮೇತ ರಾಹುಲ್ ಗಾಂಧಿ ಕೇಂಬ್ರಿಡ್ಜ್ ಭಾಷಣದ ಷಡ್ಯಂತ್ರ ಬಟಾ ಬಯಲು, ಕಾಂಗ್ರೆಸ್ ಕಂಗಾಲು!

ಚೀನಾ ಈಗಾಗಲೇ 2,000 ಚದರ ಕಿಲೋಮೀಟರ್ ಭಾರತದ ಸ್ಥಳವನ್ನು ಆಕ್ರಮಿಸಿಕೊಂಡಿದೆ. ಆದರೆ ಪ್ರಧಾನಿ ಮೋದಿ ಮಾತು ತದ್ವಿರುದ್ಧವಾಗಿದೆ. ಯಾರೂ ಕೂಡ ಒಂದು ಇಂಚು ಜಾಗ ಆಕ್ರಮಿಸಿಕೊಂಡಿಲ್ಲ ಎಂದು ಹೇಳುತ್ತಿದ್ದಾರೆ. ಚೀನಾ ವಿರುದ್ಧ ಗಡಿ ವಿಚಾರದಲ್ಲಿ ಭಾರತ ಅತ್ಯಂತ ಎಚ್ಚರಿಕೆ ಹೆಜ್ಜೆ ಇಡಬೇಕು.ಚೀನಾ ಆಕ್ರಮಣಕಾರಿ ಮನೋಭಾವ ಹೊಂದಿದೆ. ಪ್ರತಿ ದಿನ ಚೀನಾ ಅತಿಕ್ರಮಣ ಮಾಡುವತ್ತಲೇ ಗಮನಹರಿಸುತ್ತದೆ. ಹೀಗಾಗಿ ಭಾರತ ಅತೀವ ಎಚ್ಚರಿಕೆಯಿಂದ ಇರಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಚೀನಾ ವಿಚಾರದಲ್ಲಿ ಕಾಂಗ್ರೆಸ್ ಪಾಲಿಸಿ ಉತ್ತಮವಾಗಿದೆ. ನಾವು ಯಾರನ್ನೂ ಗಡಿಯೊಳಗೆ ಪ್ರವೇಶಿಸಲು ಅನುಮತಿಸುವುದಿಲ್ಲ. ನಮ್ಮ ಗಡಿಯನ್ನು ಸುರಕ್ಷಿತವಾಗಿ ಭದ್ರಪಡಿಸಿಕೊಳ್ಳುವುದು ಕಾಂಗ್ರೆಸ್ ನೀತಿಯಾಗಿದೆ. ಆದರೆ ಬಿಜೆಪಿ ಸರ್ಕಾರದಲ್ಲಿ ಏನಾಗಿದೆ? ಚೀನಾ ಭಾರತದೊಳಕ್ಕೆ ಆತಿಕ್ರಮಣ ಮಾಡಿ ದಾಳಿ ಮಾಡಿದ್ದರೆ. ನಮ್ಮ ಯೋಧರನ್ನು ಹತ್ಯೆಗೈದಿದ್ದಾರೆ. ಆದರೆ ಪ್ರಧಾನಿ ಇದೆಲ್ಲವನ್ನು ನಿರಾಕರಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಾಹುಲ್‌ ಗಾಂಧಿ ಭಾರತ ವಿರೋಧಿ ಏಜೆನ್ಸಿಯಲ್ಲಿ ಏಜೆಂಟರಾಗಿ ಕೆಲಸ ಮಾಡ್ತಿದ್ದಾರಾ..? ಬಿಜೆಪಿ ಪ್ರಶ್ನೆ

ಇದೀಗ ರಾಹುಲ್ ಗಾಂಧಿ ಮಾತುಗಳಿಗೆ ಸಾಮಾಜಿಕ ಜಾಲತಾಣಲ್ಲಿ ಪರ ವಿರೋಧ ವ್ಯಕ್ತವಾಗಿದೆ. ಹಲವರು ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಸರಿಯಾಗಿದೆ.ಬಿಜೆಪಿ ಸರ್ಕಾರ ರಾಷ್ಟ್ರ ಮೊದಲು ಎಂದು ಹೇಳಿ, ಇದೀಗ ಎಲ್ಲವನ್ನು ಮರೆತು ರಾಜಕೀಯ ಮೊದಲು ಎಂಬಂತಾಗಿದೆ ಎಂದಿದ್ದಾರೆ. ಮತ್ತೆ ಹಲವರು 1966ರಲ್ಲಿ ಭಾರತದ ತನ್ನ ನೆಲವನ್ನು ಚೀನಾಗೆ ಹೇಗೆ ಬಿಟ್ಟುಕೊಟ್ಟಿತು. ಲಡಾಖ್‌ನಲ್ಲಿ ಹುಲ್ಲುಗಡ್ಡಿಯೂ ಬೆಳೆಯಲು ಸಾಧ್ಯವಿಲ್ಲ ಎಂದು ಚೀನಾಗೆ ಧಾರೆ ಏರೆದ ಚದರ ಕಿಲೋಮೀಟರ್ ಪ್ರದೇಶ ಎಷ್ಟು? ಚೀನಾದ ಬೆದರಿಕೆ ಕಾಂಗ್ರೆಸ್‌ಗೆ ಅರ್ಥವಾಗದ ಕಾರಣ ಈ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
 

Latest Videos
Follow Us:
Download App:
  • android
  • ios