2022-23ರಲ್ಲಿ ಚುನಾವಣಾ ಬಾಂಡ್ ಮೂಲಕ ಬಿಜೆಪಿ-ಕಾಂಗ್ರೆಸ್ ಪಡೆದ ದೇಣಿಗೆ ಎಷ್ಟು?

ಚುನಾವಣಾ ಬಾಂಡ್ ಮೂಲಕ ದೇಣಿಗೆ ಸ್ವೀಕರಿಸುತ್ತಿರುವುದು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 2018ರಲ್ಲಿ ಜಾರಿಗೆ ತಂದ ಈ ಯೋಜನೆ ಮೂಲಕ ಈಗಾಲೇ ರಾಜಕೀಯ ಪಕ್ಷಗಳು ಸಾವಿರಾರು ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದೆ.  ಈ ಪೈಕಿ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳಿಗೆ ತೀವ್ರ ಪೈಪೋಟಿ ನೀಡಿದೆ.
 

BJP and Congress share collected through electoral bonds Funds on 2022 and 23 calendar year ckm

ನವದೆಹಲಿ(ಫೆ.15) ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ಅಸಂವಿದಾನಿಕ ಎಂದು ತೀರ್ಪ ನೀಡಿದೆ. ಇದು ಮಾಹಿತಿ ಹಕ್ಕು ಕಾಯ್ದೆಯನ್ನು ಉಲ್ಲಂಘಿಸುತ್ತದೆ. ಚುನಾವಣಾ ಬಾಂಡ್ ಮೂಲಕ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸುವ ಪದ್ಧತಿಗೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದೆ. ಈ ಮೂಲಕ ಲೋಕಸಭಾ ಚುನಾವಣೆ ಬೆನ್ನಲ್ಲೇ ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳಿಗೆ ಬಹುದೊಡ್ಡ ಹೊಡೆತ ನೀಡಿದೆ.  ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಹಣ ಕಳಿಸಲು ನೆರವಾಗುವ ವಿವಾದಾತ್ಮಕ ಚುನಾವಣಾ ಬಾಂಡ್‌ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. 

 2022-23ರ ಸಾಲಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ದುಬಾರಿ ಮೊತ್ತವನ್ನು ದೇಣಿಗೆ ರೂಪದಲ್ಲಿ ಪಡೆದಿದೆ. ಚುನಾವಣಾ ಆಯೋಗಕಕ್ಕೆ ಬಿಜೆಪಿ-ಕಾಂಗ್ರೆಸ್ ಸಲ್ಲಿಸಿರುವ ಮಾಹಿತಿ ಪ್ರಕಾರ, 2022-23ರ ಸಾಲಿನಲ್ಲಿ ಕೇಂದ್ರದ ಆಡಳಿತ ಪಕ್ಷ ಬಿಜೆಪಿ 1300 ಕೋಟಿ ರೂಪಾಯಿ ಹಣವನ್ನು ಚುನಾವಣಾ ಬಾಂಡ್ ಯೋಜನೆಯಲ್ಲಿ ದೇಣಿಗೆಯಾಗಿ ಪಡೆದಿದೆ. 2022-23ರ ಸಾಲಿನಲ್ಲಿ ಚುನಾವಣಾ ಬಾಂಡ್ ಹಾಗೂ ಇತರ ಮೂಲಗಳಿಂದ ಬಿಜೆಪಿ 2120 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದೆ. ಬಿಜೆಪಿಯ ಒಟ್ಟು ದೇಣಿಗೆ ಮೊತ್ತದಲ್ಲಿ ಶೇಕಡಾ 61 ರಷ್ಟು ಚುನಾವಣಾ ಬಾಂಡ್ ಮೂಲಕವೇ ಸಂಗ್ರಹಿಸಿದೆ.

ಚುನಾವಣಾ ಬಾಂಡ್ ಅಸಂವಿಧಾನಿಕ, ಯೋಜನೆ ರದ್ದುಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು!

2022-23ರ ಸಾಲಿನಲ್ಲಿ ಕಾಂಗ್ರೆಸ್ ಚುನಾವಣಾ ಬಾಂಡ್ ಮೂಲಕ 171 ಕೋಟಿ ರೂಪಾಯಿ ಸಂಗ್ರಹಿಸಿದೆ. 2021-22ರ ಸಾಲಿನಲ್ಲಿ ಕಾಂಗ್ರೆಸ್ 236 ಕೋಟಿ ರೂಪಾಯಿ ಚುನಾವಣಾ ಬಾಂಡ್ ಮೂಲಕ ಕಾಂಗ್ರೆಸ್ ದೇಣಿಗೆ ಸಂಗ್ರಹಿಸಿತು. 

ಐದು ಪ್ರಾದೇಶಿಕ ಪಕ್ಷಗಳಾದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌), ತೃಣಮೂಲ ಕಾಂಗ್ರೆಸ್ (ಟಿಎಂಸಿ), ಡಿಎಂಕೆ, ಬಿಜು ಜನತಾ ದಳ (ಬಿಜೆಡಿ) ಮತ್ತು ವೈಎಸ್ಆರ್ ಕಾಂಗ್ರೆಸ್‌ ಪಕ್ಷಗಳು 2022- 23ನೇ ಸಾಲಿನಲ್ಲಿ ಒಟ್ಟಾರೆಯಾಗಿ ಚುನಾವಣಾ ಬಾಂಡ್‌ಗಳ ಮೂಲಕ 1,243 ಕೋಟಿ ರು. ದೇಣಿಗೆಯನ್ನು ಸ್ವೀಕರಿಸಿವೆ.ಇದು 2021- 22ನೇ ಸಾಲಿನ ಇದೇ ಪಕ್ಷಗಳ 1,338 ಕೋಟಿ ರು.ಗಳಿಗೆ ಹೋಲಿಸಿದರೆ ಕುಸಿತಗೊಂಡಿದೆ. ಈ ಪೈಕಿ ಬಿಆರ್‌ಎಸ್ 529 ಕೋಟಿ ರು. ದೇಣಿಗೆ ಸಂಗ್ರಹಿಸಿರುವ ಮೂಲಕ ಮೊದಲ ಸ್ಥಾನದಲ್ಲಿದೆ.

ಪ್ರಾದೇಶಿಕ ಪಕ್ಷಗಳಿಗೆ ಅನಾಮಿಕ ಮೂಲಗಳಿಂದ ಹರಿದುಬಂದಿದೆ 887 ಕೋಟಿ ರೂ.!

ಇನ್ನು 2022- 23ರಲ್ಲಿ ಬಾಂಡ್‌ ಮೂಲಕ 325 ಕೋಟಿ ರು. ದೇಣಿಗೆ ಸ್ವೀಕರಿಸಿದ್ದ ಡಿಎಂಕೆ ಈ ಪೈಕಿ ಶೇ.84ರಷ್ಟು ಹಣವನ್ನು ವ್ಯಯಿಸಿದೆ. ಅಂತೆಯೇ 181 ಕೋಟಿ ರು. ಸ್ವೀಕರಿಸಿದ್ದ ಟಿಎಂಸಿ ಶೇ.97ರಷ್ಟು, 152 ಕೋಟಿ ರು. ಸ್ವೀಕರಿಸಿದ್ದ ಬಿಜೆಡಿ ಶೇ.70ರಷ್ಟು, 52 ಕೋಟಿ ರು. ಗಳಿಸಿದ್ದ ವೈಆರ್‌ಎಸ್‌ ಕಾಂಗ್ರೆಸ್‌ ಶೇ.71ರಷ್ಟು ಹಣವನ್ನು ಚುನಾವಣೆಯಲ್ಲಿ ಖರ್ಚು ಮಾಡಿವೆ.

ಇನ್ನು ಇತ್ತೀಚೆಗೆ ರಾಷ್ಟ್ರೀಪ ಪಕ್ಷವಾಗಿ ಹೊರಹೊಮ್ಮಿರುವ ಆಮ್‌ಆದ್ಮಿ ಪಕ್ಷದ ದೇಣಿಗೆ ಮೊತ್ತವು 2021-22ರಲ್ಲಿ 25.1 ಕೋಟಿ ರು.ಗಳಿಂದ 2022-23ರಲ್ಲಿ 36.4 ಕೋಟಿ ರು.ಗೆ ಏರಿಕೆಯಾಗಿದೆ.
 

Latest Videos
Follow Us:
Download App:
  • android
  • ios