ಜೈಪುರ(ಜ.03): ದೇಶದಲ್ಲೀಗ ಕೊರೋನಾ ವೈರಸ್ ವಿರುದ್ಧ ಹೋರಾಡಲು ಲಸಿಕೆ ಬಳಕೆಗೆ ಅನುಮತಿ ನೀಡಲಾಗಿದೆ. ಈ ಮೂಲಕ ಸಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲು ಮಹತ್ವದ ಹೆಜ್ಜೆ ಇಟ್ಟಿದೆ. ಇನ್ನು ರೂಪಾಂತರ ಕೊರೋನಾ ವೈರಸ್ ಕಾರಣ ವಿದೇಶದಿಂದ ಆಗಮಿಸಿದವರಿಗೆ ಕೊರೋನಾ ಪರೀಕ್ಷೆ, ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಕೊರೋನಾ ಭೀತಿಯಿಂದ ಜನರು ಹೊರಬಂದಿಲ್ಲ, ಇದರ ನಡುವೆ ಇಂದೋರ್‌ನಲ್ಲಿ ಕಾಗೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ.

ಕೊರೋನಾ ಶಾಕ್ ಬೆನ್ನಲ್ಲೇ ಇದೀಗ ಫ್ರಾನ್ಸ್‌ನಲ್ಲಿ ಹರಡುತ್ತಿದೆ ಬಾತುಕೋಳಿ ಜ್ವರ!..

ರಾಜಸ್ಥಾನದಲ್ಲಿ ನೂರಕ್ಕೂ ಹೆಚ್ಚು ಕಾಗೆಗಳು ಸತ್ತು ಬಿದ್ದಿವೆ. ಈ ಕುರಿತು ಕಾಗೆಗಳನ್ನು ಪರೀಕ್ಷೆ ನಡೆಸಿದಾಗ ಕಾಗೆ ಸಾವಿಗೆ ಹಕ್ಕಿ ಜ್ವರ ಕಾರಣ ಎಂಬುದು ಬಿಹಿರಂವಾಗಿದೆ. ಕೋಟಾದಲ್ಲಿ 47 ಕಾಗೆಗಳು, ಜಲಾವರ್‌ನಲ್ಲಿ 100 ಮತ್ತು ಬರನ್ ವಲಯದಲ್ಲಿ 72 ಕಾಗೆಗಳು ಸತ್ತು ಬಿದ್ದಿವೆ. ಈಗಾಗಲೇ ಈ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಿದ್ದೇವೆ. ಹಕ್ಕಿ ಜ್ವರ ಹರಡದಂತೆ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ರಾಜಸ್ಥಾನ ಪ್ರಧಾನ ಕಾರ್ಯದರ್ಶಿ ಕುಂಜಿ ಲಾಲ್ ಮೀನಾ ಹೇಳಿದ್ದಾರೆ.

 

ರಾಜಸ್ಥಾನದಲ್ಲಿ ಕಾಗೆಗಳ ಜೊತೆ ಇತರ ಕೆಲ ಪಕ್ಷಿಗಳು ಸತ್ತು ಬಿದ್ದಿವೆ. ಹೀಗಾಗಿ ವೇಗವಾಗಿ ಹಕ್ಕಿ ಜ್ವರ ಹರಡುತ್ತಿರುವುದು ಈ ಮೂಲಕ ಖಚಿತಗೊಂಡಿದೆ. ಹೀಗಾಗಿ ರಾಜಸ್ಥಾನದ ಕೆಲ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಿದೆ. ಇತ್ತ ಕೊರೋನಾ ನಡುವೆ ಇದೀಗ ಕಾಗೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದು ಆತಂಕ ಮತ್ತಷ್ಚು ಹೆಚ್ಚಿಸಿದೆ