ಮಧ್ಯಪ್ರದೇಶದ ಛಿಂದ್ವಾಡ ಜಿಲ್ಲೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಬೆಕ್ಕುಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಇದು ಕೋಳಿಗಳಲ್ಲಿ ಕಾಣಿಸಿಕೊಂಡಿದ್ದ ಎಚ್‌5ಎನ್‌1 ಜ್ವರದ ತಳಿಯಾಗಿದ್ದು, ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ.

ಪುಣೆ: ಮಧ್ಯಪ್ರದೇಶದ ಛಿಂದ್ವಾಡ ಜಿಲ್ಲೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಬೆಕ್ಕುಗಳಲ್ಲಿ ಹಕ್ಕಿ ಜ್ವರ (ಎಚ್‌5ಎನ್‌1) ಪ್ರಕರಣ ದಾಖಲಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಇದು, ಅಪಾರ ಸಂಖ್ಯೆ ಕೋಳಿಗಳಲ್ಲಿ ಕಾಣಿಸಿಕೊಂಡಿದ್ದ ಎಚ್‌5ಎನ್‌1 ಜ್ವರದ ತಳಿಯಾಗಿದ್ದು, 2.3.2.1 ವಂಶಾವಳಿಗೆ ಸೇರಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ, ಛಿಂದ್ವಾಡ ಗಡಿಗೆ ಹೊಂಡಿಕೊಂಡಿರುವ ಮಹಾರಾಷ್ಟ್ರದ ನಾಗ್ಪುರದಲ್ಲಿ ಹಲವು ಹುಲಿಗಳು ನಿಗೂಢ ಕಾಯಿಲೆಯಿಂದ ಸಾವನ್ನಪ್ಪಿದ್ದವು. ಅದರ ಬೆನ್ನಲ್ಲೇ, ಇದೀಗ ಬೆಕ್ಕುಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದು ಆತಂಕವನ್ನು ಹೆಚ್ಚಿಸಿದೆ.

ಲಕ್ಷಣಗಳೇನು?:

ಹಕ್ಕಿ ಜ್ವರ ಸೋಂಕಿತ ಬೆಕ್ಕುಗಳಲ್ಲಿ ಜ್ವರ, ಹಸಿವಿನ ಕೊರತೆ ಮತ್ತು ಅನಾರೋಗ್ಯಕ್ಕೆ ಒಳಗಾಗುವ ಮೊದಲು ಆಲಸ್ಯದಂತಹ ಲಕ್ಷಣಗಳು ಕಂಡುಬಂದಿದ್ದವು. ಬೆಕ್ಕುಗಳಲ್ಲಿ ಕಂಡುಬಂದ ವೈರಸ್‌ನಲ್ಲಿ 27 ರೂಪಾಂತರಿಗಳನ್ನು ಅಧ್ಯಯನದಲ್ಲಿ ಗುರುತಿಸಲಾಗಿದೆ. 

ಮನುಷ್ಯರ ಮೇಲೇನು ಪರಿಣಾಮ?

:ಎಚ್‌5ಎನ್‌1 ಎಂಬುದು ಹಕ್ಕಿ ಜ್ವರವಾದರೂ, ಅದರ ರೂಪಾಂತರಿಗಳು ಸಸ್ತನಿಗಳಲ್ಲೂ ಕಾಣಿಸಿಕೊಳ್ಳಬಲ್ಲವು. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಕಡಿಮೆಯಿದ್ದರೂ, ಇದು ಸಾಂಕ್ರಾಮಿಕವಾಗಿ, ಕೋವಿಡ್ -19ನಂತೆ ಏಕಾಏಕಿ ಉಲ್ಬಣಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಆತಂಕ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ, ಕೋಳಿ ಫಾರ್ಮ್‌, ಕಾಡು ಹಕ್ಕಿಗಳ ಜೊತೆಗೆ, ಮನುಷ್ಯರು ಸೇರಿದಂತೆ ಸಾಕು ಪ್ರಾಣಿಗಳಂತಹ ಸಸ್ತನಿಗಳ ಮೇಲಿನ ನಿಗಾವನ್ನು ಹೆಚ್ಚಿಸಲಾಗಿದೆ.

ಕೋವಿಡ್ 19ಕ್ಕಿಂತಲೂ ಮಾರಕವಾದ ಕಾಯಿಲೆ ಬರಲಿದೆ..ಎಚ್ಚರ

ಹಕ್ಕಿ ಜ್ವರ ಹರಡುತ್ತಿದ್ದರೆ ಹೆಚ್ಚು ಚಿಕನ್ ತಿನ್ನುತ್ತೇನೆ, ಜಾರ್ಖಂಡ್ ಆರೋಗ್ಯ ಸಚಿವರ ಅಚ್ಚರಿ ಹೇಳಿಕೆ!